ಖಲಿಸ್ತಾನಿಗಳಿಗೆ ಶಾಕ್ ; ಹಲವಾರು ರಾಜ್ಯಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ NIA ದಾಳಿ..!

New Delhi: ಖಲಿಸ್ತಾನಿಗೆ ಭಾರೀ ಶಾಕ್ ನೀಡಿರುವ ರಾಷ್ಟ್ರೀಯ ತನಿಖಾ ದಳ ದೇಶಾದ್ಯಂತ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವ ಆರೋಪದ ಮೇಲೆ ಅನೇಕ ಕಡೆ ದಾಳಿ ನಡೆಸಿದೆ. ಖಲಿಸ್ತಾನಿ ಭಯೋತ್ಪಾದಕರು ಮತ್ತು ದರೋಡೆಕೋರರ ಸಂಬಂಧದ ವಿರುದ್ಧದ ಈ ಕಾರ್ಯಾಚರಣೆಯಲ್ಲಿ, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪಂಜಾಬ್, ಹರಿಯಾಣ (Haryana) , ದೆಹಲಿ, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ (Uttarpradesh) ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ಮೂಲಗಳ ಪ್ರಕಾರ, ವಿವಿಧ ರಾಜ್ಯಗಳಾದ್ಯಂತ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿವೆ. ಖಲಿಸ್ತಾನಿ ಭಯೋತ್ಪಾದಕರ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ತೀವ್ರ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಖಲಿಸ್ತಾನಿಗಳ ಹಣಕಾಸು, ಆಯುಧ, ನೆಟ್ವರ್ಕ್(Network), ಸಂಪನ್ಮೂಲ ಸೇರಿದಂತೆ ಎಲ್ಲದರ ಮೇಲೂ ಏಕಕಾಲಕ್ಕೆ ದಾಳಿ ನಡೆಸುತ್ತಿದೆ.

ಇನ್ನು ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Tru) ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಈ ಬೆಳವಣಿಗೆಯಾಗಿದೆ.

ಇತರ ದೇಶಗಳಲ್ಲಿ ನೆಲೆಸಿರುವ ಖಲಿಸ್ತಾನಿ ಮತ್ತು ದರೋಡೆಕೋರರು ಭಾರತದಲ್ಲಿ ಹವಾಲಾ ಚಾನೆಲ್ಗಳ ಮೂಲಕ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳಿಗಾಗಿ ಧನಸಹಾಯ ಮಾಡುತ್ತಿವೆ ಎಂದು ಎನ್ಐಎ (NIA) ಮೂಲಗಳು ತಿಳಿಸಿವೆ ತನಿಖಾ ಸಂಸ್ಥೆಯು ಖಲಿಸ್ತಾನಿ-ಐಎಸ್ಐ ಮತ್ತು ದರೋಡೆಕೋರರ ಸಂಬಂಧಗಳನ್ನು ಪತ್ತೆ ಮಾಡಿದೆ. ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿತ ದರೋಡೆಕೋರರು ಮತ್ತು ಖಲಿಸ್ತಾನಿಗಳಿಂದ ಇದುವರೆಗೆ ಪಡೆದ ಮಾಹಿತಿಯು ಭಯೋತ್ಪಾದಕ ನಿಧಿ, ಶಸ್ತ್ರಾಸ್ತ್ರ ಪೂರೈಕೆ ಮತ್ತು ವಿದೇಶಿ ನೆಲದಿಂದ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವುದರಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಪಂಜಾಬ್ನ 30 ಸ್ಥಳಗಳು, ರಾಜಸ್ಥಾನದ 13 ಸ್ಥಳಗಳು, ಹರಿಯಾಣದ ನಾಲ್ಕು ಸ್ಥಳಗಳು, ಉತ್ತರಾಖಂಡದ ಎರಡು ಸ್ಥಳಗಳು ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳ ಮೇಲೆ ಎನ್ಐಎ ದಾಳಿ ನಡೆಸಿದೆ.

Exit mobile version