ಮಾನವ ಕಳ್ಳಸಾಗಾಣಿಕೆ ಆರೋಪ: 14 ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಗುಜರಾತ್ ಪೊಲೀಸ್

ಮಾನವ ಕಳ್ಳಸಾಗಣಿಕೆ (Human Trafficking) ಆರೋಪದ ಮೇಲೆ, ಯುಎಯಿಂದ ನಿಕರಾಗುವಾಗೆ (Nicaragua Flight Case-FIR) 303 ಭಾರತೀಯರನ್ನು ಹೊತ್ತು ಸಾಗುತ್ತಿದ್ದ ವಿಮಾನವನ್ನು

ಪ್ಯಾರಿಸ್‌ನಲ್ಲಿ ತಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ, 14 ಟ್ರಾವೆಲ್ ಏಜೆಂಟ್‌ಗಳ (Travel Agents) ವಿರುದ್ದ ಗುಜರಾತ್ ಪೊಲೀಸರ ಅಪರಾಧ ತನಿಖಾ ವಿಭಾಗ(ಸಿಐಡಿ) ಎಫ್‌ಐಆರ್‌ ದಾಖಲಿಸಿದೆ.

ಡಿಸೆಂಬರ್ (December) 22, 2023ರಂದು ಮಾನವ ಕಳ್ಳಸಾಗಾಣಿಕೆ ಶಂಕೆ ಮೇಲೆ ಫ್ರಾನ್ಸ್‌ನಿಂದ (France) ಹೊರಟ್ಟಿದ್ದ ವಿಮಾನವನ್ನು ಪ್ಯಾರಿಸ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಎರಡು

ದಿನಗಳ ಕಾಲ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಬಳಿಕ 275 ಮಂದಿಯನ್ನು ವಾಪಸ್ ಭಾರತಕ್ಕೆ ಕಳುಹಿಸಿಕೊಡಲಾಗಿತ್ತು.

ದಿ ಹಿಂದೂ (The Hindu) ವರದಿ ಪ್ರಕಾರ, ಪ್ರಸ್ತುತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಟ್ರಾವೆಲ್ ಏಜೆಂಟ್‌ಗಳು ಗುಜರಾತ್, ಮುಂಬೈ ಮತ್ತು ನವದೆಹಲಿ (Gujarat, Mumbai and New

Delhi) ಮೂಲದವರು. ಇವರು ಪಂಜಾಬ್ ಮತ್ತು ಗುಜರಾತ್‌ನ ಪ್ರಯಾಣಿಕರಿಂದ 60-70 ಲಕ್ಷ ರೂ. ಹಣ ಪಡೆದು ಅಮೆರಿಕಾಗೆ ಅಕ್ರಮ ಪ್ರವೇಶ ಕಲ್ಪಿಸಲು ಕರೆದುಕೊಂಡು ಹೋಗುತ್ತಿದ್ದರು.

ಪ್ರಯಾಣಿಕರನ್ನು ಯುಎಯಿಂದ ಮಧ್ಯ ಅಮೆರಿಕದ (America) ನಿಕರಾಗುವಾಗೆ ಕರೆದೊಯ್ದು,ಅಲ್ಲಿಂದ ಮೆಕ್ಸಿಕೋ (Mexico) ಮೂಲಕ ಗಡಿ ದಾಟಿಸುವ ಯೋಜನೆ ರೂಪಿಸಲಾಗಿತ್ತು. ಅಮೆರಿಕ ತಲುಪುವ

ಜನರಿಗೆ ಭಾರತೀಯರು ನಡೆಸುವ ವ್ಯವಹಾರಗಳಲ್ಲಿ ಉದ್ಯೋಗಗಳನ್ನು ಹುಡುಕಲು ಏಜೆಂಟರು ಸಹಾಯ ಮಾಡುವ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ಒಟ್ಟು ಪ್ರಯಾಣಿಕರ ಪೈಕಿ ಗುಜರಾತ್‌ನ ನಿವಾಸಿಗಳಾದ 66 ಮಂದಿಯನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಡಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇದು ಗುಜರಾತ್ ಸೇರಿದಂತೆ

ಭಾರತದ ವಿವಿಧ ಭಾಗಗಳಿಂದ ಯುಎಸ್‌ಗೆ (US) ಮಾನವ ಕಳ್ಳಸಾಗಾಣಿಕೆ ಮಾಡುವ ಅಂತಾರಾಷ್ಟ್ರೀಯ ಏಜೆಂಟ್‌ಗಳೂ ಒಳಗೊಂಡಿರುವ ಬಹು ದೊಡ್ಡ ದಂಧೆಯಾಗಿದೆ.

ಭಾರತದಿಂದ ಯುಎಸ್‌ಗೆ ಕಳ್ಳದಾರಿಯ ಮೂಲಕ ಜನರನ್ನು ಕರೆಯೊಯ್ಯವ ಸಂಘಟಿತ ಜಾಲವಾಗಿದೆ” ಎಂದು ಗುಜರಾತ್‌ನ ಅಪರಾಧ ತನಿಖಾ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಎಸ್ ಪಾಂಡಿಯಾ

ರಾಜ್‌ಕುಮಾರ್ (S Pandia Rajkumar) ತಿಳಿಸಿದ್ದು, ಭಾರತೀಯರು ಮಾತ್ರವಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯುನೈಟೆಡ್ ಸ್ಟೇಟ್ಸ್(ಯುಎಸ್‌) ಮೆಕ್ಸಿಕೊ ಮತ್ತು ನಿಕರಾಗುವಾ ಮೂಲದ

ಜನರೂ ಈ ಜಾಲದಲ್ಲಿ (Nicaragua Flight Case-FIR) ಒಳಗೊಂಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ (December) ಈ ರೀತಿಯ ಮೂರು ವಿಮಾನಗಳು ಜನರನ್ನು ಮಧ್ಯ ಅಮೆರಿಕಕ್ಕೆ ಯಶಸ್ವಿಯಾಗಿ ಕರೆದೊಯ್ದಿವೆ ಎಂದು ಪಾಂಡಿಯಾ ರಾಜ್‌ಕುಮಾರ್ ಮಾಹಿತಿ ನೀಡಿದ್ದು,

ಪ್ಯಾರಿಸ್‌ನಿಂದ ಗುಜರಾತ್‌ಗೆ ಬಂದಿಳಿದ 66 ಪ್ರಯಾಣಿಕರು ಅಹಮದಾಬಾದ್, ಮುಂಬೈ ಮತ್ತು ದೆಹಲಿಯಿಂದ ಡಿಸೆಂಬರ್ 10 ಮತ್ತು ಡಿಸೆಂಬರ್ 20ರ ನಡುವೆ ಮಾನ್ಯ ಪ್ರವಾಸಿ ವೀಸಾದಲ್ಲಿ ದುಬೈ ತಲುಪಿದ್ದರು.

ಇದನ್ನು ಓದಿ: ರಾಮ್ ಲಲ್ಲಾ ವಿಗ್ರಹಕ್ಕೆ 11 ಕೋಟಿ ರೂಪಾಯಿ ಮೌಲ್ಯದ ವಜ್ರದ ಕಿರೀಟ ನೀಡಿದ ಗುಜರಾತ್ನ ವ್ಯಾಪಾರಿ

Exit mobile version