ನೈಜೀರಿಯಾ : ಉಗ್ರರಿಂದ ಅಪಹರಣಕ್ಕೀಡಾಗಿದ್ದ ಶಾಲಾ ಬಾಲಕಿ 7 ವರ್ಷಗಳ ನಂತರ ಬಿಡುಗಡೆ

ನೈಜೀರಿಯಾ, ಆ. 09: 2014 ರಲ್ಲಿ ಬೊಕೊ ಹರಾಮ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ನೈಜೀರಿಯಾದ ಚಿಬೋಕ್‌ನ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಉಗ್ರರು 7 ವರ್ಷಗಳ ನಂತರ ಬಿಡುಗಡೆ ಮಾಡಿದ್ದಾರೆ ಎಂದು ಬೊರ್ನೊ ರಾಜ್ಯದ ಗವರ್ನರ್‌ ತಿಳಿಸಿದ್ದಾರೆ.

ಬಾಲಕಿಯನ್ನು ಆಕೆಯ ತಂದೆ ತಾಯಿಗೆ ಒಪ್ಪಿಸಲಾಗಿದೆ. ಆಕೆಗೆ ಸರ್ಕಾರಿ ಪುನವರ್ವಸತಿ ಕೇಂದ್ರದಲ್ಲಿ ಮಾನಸಿಕ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ ಎಂದು ಗವರ್ನರ್‌ ಬಬಗನ ಜುಲುಮ್‌ ತಿಳಿಸಿದ್ದಾರೆ.

12 ರಿಂದ 17 ವರ್ಷದೊಳಗಿನ ಸುಮಾರು 300 ಶಾಲಾ ಬಾಲಕಿಯರನ್ನು 2014ರ ಏಪ್ರಿಲ್‌ನಲ್ಲಿ ಈಶಾನ್ಯ ನೈಜೀರಿಯಾದ ಚಿಬೋಕ್‌ನಿಂದ ಬೊಕೊ ಹರಮ್ ಉಗ್ರರು ಅಪಹರಿಸಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. #BringBackOurGirls ಎಂಬ ಹ್ಯಾಷ್‌ಟ್ಯಾಗ್‌ನ ಅಡಿಯಲ್ಲಿ ಸಾಮಾಜಿಕ ತಾಣಗಳಲ್ಲಿ ಚಳವಳಿ ನಡೆದಿತ್ತು.

Exit mobile version