ಓಮಿಕ್ರಾನ್‌ ಹೆಚ್ಚಳ ಹಿನ್ನಲೆ ಹಲವು ರಾಜ್ಯಗಳಲ್ಲಿ ನೈಟ್‌ ಕರ್ಫ್ಯೂ ಜಾರಿ

 ನವದೆಹಲಿ ಡಿ 30 : ಕೋವಿಡ್ ಹೊಸ ರೊಪಾಂತಾರಿ ಓಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದ ಹಲವು ರಾಜ್ಯಗಳು ನೈಟ್‌ ಕರ್ಫ್ಯೂ ಮೊರೆ ಹೋಗಿವೆ. ಇಗಾಗಲೇ ಫೆಬ್ರವರಿಯಲ್ಲಿ ಕೋವಿಡ್ ಮೂರನೆ ಅಲೆಯ ಎಚ್ಚರಿಕೆಯನ್ನು ತಜ್ಞರು ನೀಡಿದ್ದು, ಆದರೆ ಆದರ ನಡುವೆಯೇ ಕೋವಿಡ್ ಹೊಸ ರೂಪಾಂತಾರಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿದೆ. ದೇಶಾದ್ಯಂತ ಒಟ್ಟು 415 ಮಂದಿಗೆ ಓಮಿಕ್ರಾನ್ ಸೋಂಕು ದೃಢವಾಗಿದೆ . 57ಕ್ಕೂ ಹೆಚ್ಚು ಮಂದಿ ಕೇವಲ 24 ಗಂಟೆಗಳಲ್ಲಿ ಓಮಿಕ್ರಾನ್‌ ಸೋಂಕಿಗೆ ಒಳಗಾಗಿದ್ದಾರೆ. ವಿದೇಶದಿಂದ ಬಂದ ಐವರಿಗೆ ಸೋಂಕು ಧೃಢಪಟ್ಟಿದೆ.

ಈ ಹಿನ್ನಲೆಯಲ್ಲಿ ಮೂರನೆ ಅಲೆ ಎದುರಿಸಲು ರಾಜ್ಯ ಸರಕಾರಗಳು ಸಿದ್ದತೆಯಲ್ಲಿ ತೊಡಗಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಹೊಸ ವರ್ಷಾಚರಣೆ, ಸಮಾವೇಶ, ಜನರು ಹೆಚ್ಚಾಗೆ ಸೇರುವ ಸಭೆ ಸಮಾರಂಭಗಳ ಮೇಲೆ ನಿರ್ಬಂಧ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗೂ ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಜೊತೆಗೆ  144  ಸೆಕ್ಷನ್‌  ಜಾರಿಗೊಳಿಸಲಾಗಿದೆ. ಕೋವಿಡ್ ರೂಪಾಂತಾರಿ ಓಮಿಕ್ರಾನ್ ದೇಶದಲ್ಲಿ ಹೆಚ್ಚುತ್ತಿರುವ ಕಾರಣ ರಾಜ್ಯಗಳು ಈ ದೃಷ್ಷಿಯಿಂದ ಹೊಸ ವರ್ಷಾಚರಣೆಯ ಸಂಭ್ರಮಗಳಿಗೆ ನಿರ್ಬಂಧ ಹೇರಲಾಗಿದೆ.

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಡಿಸೆಂಬರ್‌ 28 ರಿಂದ ಜನವರಿ 7ರ ವರೆಗೂ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು, ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್ ಮೇಲಿನ ನಿರ್ಬಂಧಗಳು ಜನವರಿ 7ರ ವರೆಗೂ ಇರುತ್ತದೆ ಈ ಸಂದರ್ಭದಲ್ಲಿ ಶೇ 50ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.ಜೊತೆಗೆ ಕೋವಿಡ್‌ ಟೆಸ್ಟ್ ರಿಪೋರ್ಟ ವ್ಯಾಕ್ಸಿನ್‌ ಪ್ರಮಾಣಪತ್ರ ಕೂಡ ನೀಡಬೇಕಾಗಿದೆ. ಕರ್ನಾಟಕ ಜೊತೆಗೆ  ಹರಿಯಾಣ, ಗುಜರಾತ್ , ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿ, ಅಸ್ಸಾಂ ರಾಜ್ಯಗಳೂ ಕೂಡ ನೈಟ್‌ ಕರ್ಫ್ಯೂ ವಿಧಿಸಿದೆ .ಕೊರೊನಾ ನಿಯಮನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೇಂದ್ರ ಸರ್ಕಾರ ಕೂಡ ಆಯಾ ರಾಜ್ಯಗಳಿಗೆ ಸೂಚಿಸಲಾಗಿದೆ

Exit mobile version