ನಿಮಗೆ ಗೊತ್ತೇ ಗರಿಕೆ ಹುಲ್ಲಿನ ಔಷದೀಯ ಗುಣ?:

ಗರಿಕೆ ಹುಲ್ಲು ವರ್ಷವಿಡೀ ಬೆಳೆಯುವುದು ಇದು ಪೋಯಸೀ ಗ್ರಾಮಿನೇ ಸಸ್ಯ ಕುಟುಂಬಕ್ಕೆ ಸೇರಿದೆ. ಇದರ ವೈಜ್ಙಾನಿಕ ಹೆಸರು ಸಿಂಡ್ರನ್ ಡೆಕ್ವಾಲನ್ ಎಂದಾಗಿದ್ದು,  ಮಳೆಗಾಲದಲ್ಲಿ ದಟ್ಟವಾಗಿ ಬಹು ವೇಗವಾಗಿ ಎಲ್ಲೆಡೆ ಹರಡಿಕೊಂಡು ಬೆಳೆಯುತ್ತದೆ. ಇದು  ರಕ್ತಸೋರುವಿಕೆಯನ್ನು ತಡೆಗಟ್ಟುತ್ತದೆ. ಮೂಗಿನಲ್ಲಿ ರಕ್ತ ಸೋರುತಿದ್ದರೆ ತಕ್ಷಣ ಎರಡು ಹನಿ ಗರಿಕೆ ಹುಲ್ಲಿನ ರಸವನ್ನು ಬಿಟ್ಟರೆ  ರಕ್ತ ಸೋರುವುದು ಕೂಡಲೇ ನಿಲ್ಲುತ್ತದೆ. ಕೇವಲ ಎರಡೇ ಹನಿಗಳನ್ನು ಮೂಗಿಗೆ ಬಿಡಬೇಕು ಹೆಚ್ಚು ಬಿಟ್ಟರೆ ಒಳ್ಳೆಯದಲ್ಲ.

ಎಲುಬು ಗಟ್ಟಿಗೊಳಿಸಲು ಮತ್ತು ಮೂತ್ರಕೋಶದಿಂದ ಮೂತ್ರ ಸರಾಗವಾಗಿ ಹೋಗಲು ಗರಿಕೆ ಹುಲ್ಲಿಗೆ ಜೀರಿಗೆ ಮತ್ತು ಕೆಂಪು ಕಲ್ಲು ಸಕ್ಕರೆಯನ್ನು ಬೆರೆಸಿ   ಕಷಾಯವನ್ನು ಮಾಡಿಕೊಂಡು  ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತದ್ದರೆ ಚೇತರಿಕೆಯನ್ನು  ಕಾಣಬಹುದು. ಇದು ರಕ್ತದೊತ್ತಡವನ್ನೂ ಮತ್ತು ಸಕ್ಕರೆ ಕಾಯಿಲೆಯನ್ನೂ ಹತೋಟಿಗೆ ತರುವಲ್ಲಿ ಸಹಕಾರಿಯಾಗಿದೆ. ಸ್ವಲ್ಪ ಗರಿಕೆ ಹುಲ್ಲನ್ನು ಚೆನ್ನಾಗಿ ತೊಳೆದು ಒಂದು ಲೋಟ ನೀರಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಜೂಸ್ ತೆಗೆದು ಅದಕ್ಕೆ ಚೂರು ಉಪ್ಪನ್ನು ಸೇರಿಸಿ ಕುಡಿಯಬೇಕು. ಇದರ ರಸವನ್ನು  ಒಂದು ಚಮಚ ಜೇನು ತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮೂಲವ್ಯಾದಿಯಿಂದ ಬಳಲುತಿದ್ದರೆ ಗರಿಕೆ ರಸವನ್ನು ದಿನಕ್ಕೆರಡು ಬಾರಿಯಂತೆ ಮೂರು ನಾಲ್ಕು ಚಮಚ ಕುಡಿಯುತ್ತಾ ಬಂದಲ್ಲಿ ಮೂಲವ್ಯಾಧಿ ನಿವಾರಣೆಯಾಗುತ್ತದೆ.

ಗ್ರಹಣದ ದಿನ ಗರಿಕೆ ಹುಲ್ಲುಗಳನ್ನು ಮನೆಯಲ್ಲಿ ಆಹಾರದ ವಸ್ತುಗಳ ಮೇಲೆ ಇಡುತ್ತಾರೆ, ಈ ಪದ್ದತಿ ನಮ್ಮ ಪೂರ್ವಜರ ಕಾಲದಿಂದಲೂ ಇದೆ. ಯಾಕೆಂದರೆ ಇದರಲ್ಲಿ ಅಷ್ಟು ಅದ್ಬುತವಾದ ರೋಗನಿರೋಧಕ ಶಕ್ತಿಯು ಅಡಗಿದೆ ಎಂಬುದು ನಮಗೆ ತಿಳಿಯುತ್ತದೆ.  ಅಂದ ಮೇಲೆ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮವಿದೆ ಎಂದು ತಿಳಿಯುವುದು.   ಈ ಗರಿಕೆ ಹುಲ್ಲುಗಣಪತಿ ದೇವರಿಗೆ ಬಹಳ ಪ್ರಿಯವೆಂದೇ ಪ್ರಸಿದ್ದಿ ಇದೆ. ಗರಿಕೆ ಹುಲ್ಲಿನ ಪೂಜೆಯಿಂದ ಗಣಪತಿ ದೇವರು ಬಹಳಬೇಗನೆ ಪ್ರಸನ್ನಗೊಳ್ಳುತ್ತಾರೆ ಎಂಬ ಪ್ರತೀತಿಯಿದೆ. ಹೀಗೆ ಇದು ಹತ್ತಾರು ಔಷದೀಯ ಗುಣವನ್ನು ಹೊಂದಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಲು ಇನ್ನೇಕೆ ತಡ?

Exit mobile version