ಮೂರನೇ ಅಲೆ ಎದುರಿಸಲು ದೇಶ ಸನ್ನದ್ದ: ನಿರ್ಮಲಾ ಸೀತಾರಾಮನ್

ನವದೆದಲಿ.ಜು.02: ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲಾಗಿದ್ದು, ಕೊರೊನಾ ಮೂರನೇ ಅಲೆ ನಿಭಾಯಿಸಲು ಅದು ಸಿದ್ಧವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ಇಂಡಿಯಾ ಗ್ಲೋಬಲ್ ಫೋರಂ’ನಲ್ಲಿ ಮಾತನಾಡಿದ ಅವರು, ಆದಾಯ ಸಂಗ್ರಹದಲ್ಲಿ ವೃದ್ಧಿಯಾಗಿರುವುದು ವೈದ್ಯಕೀಯ ಮೂಲಸೌಕರ್ಯ ಹೆಚ್ಚಳಕ್ಕೆ ನೆರವಾಗಲಿದೆ. ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದರ ಜತೆಗೆ ಸರ್ಕಾರದ ಯೋಜಿತ ಖಾಸಗೀಕರಣಕ್ಕೆ ಚಾಲನೆ ಪ್ರಕ್ರಿಯೆಯೂ ಸಹಜವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಯಾರೂ ಮೂರನೇ ಅಲೆ ಬರಲಿ ಎಂದು ಬಯಸುವುದಿಲ್ಲ. ಆದರೆ ಅದನ್ನು ಗಮನದಲ್ಲಿಟ್ಟುಕೊಂಡು ನಾವು ಮೂಲಸೌಕರ್ಯ, ವೈದ್ಯಕೀಯ ಮೂಲಸೌಕರ್ಯಗಳ ಹೆಚ್ಚಳಕ್ಕೆ ಒತ್ತು ನೀಡಿದ್ದೇವೆ. ಮೆಟ್ರೊಪಾಲಿಟನ್ ನಗರಗಳಲ್ಲಿ ಮಾತ್ರವಲ್ಲದೆ ಎರಡು ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಸುಧಾರಿಸಲು ನಾವು ವಿಭಿನ್ನ ಕ್ರಮಗಳನ್ನು ಘೋಷಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.

Exit mobile version