ನಿತ್ಯದ ಆಹಾರದಲ್ಲಿ ಇದನ್ನು ಬಳಸಿ ಆರೋಗ್ಯವಂತರಾಗಿ

ಮೆಕ್ಕೆ ಜೋಳವನ್ನು (ಬೇಬಿ ಕಾರ್ನ್) ಇಷ್ಟಪಟ್ಟು ತಿನ್ನುವವರೇ ಹೆಚ್ಚು. ಆರೋಗ್ಯಕ್ಕೆ ಇದು ಬಹಳ ಒಳ್ಳೆಯದಾಗಿದ್ದು, ಸ್ವೀಟ್ ಕಾರ್ನ್ ಎಂದೂ ಇದನ್ನು ಕರೆಯುತ್ತಾರೆ. ಇದರಲ್ಲಿ ಅಧಿಕ ಫೈಬರ್ ಅಂಶ,  ಇದ್ದು ಜೀರ್ಣಕ್ರಿಯೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಕಣ್ಣಿನ ದೃಷ್ಟಿಗೂ ಇದು ಉತ್ತಮ, ಇನ್ನು ಇದರಲ್ಲಿ ಅಧಿಕ ಪ್ರೋಟೀನ್‌ಗಳು ಇರುವುದರಿಂದ ಗರ್ಬಿಣಿಯರಿಗೆ ಇದು ತುಂಬಾ ಉತ್ತಮವಾಗಿದೆ. ಗರ್ಬಿಣಿಯರು ಪ್ರತೀ ದಿನ ಇದನ್ನು ತಿನ್ನುವುದರಿಂದ ತಾಯಿ ಮಗು ಇಬ್ಬರೂ ಆರೋಗ್ಯವಂತರಾಗಿರುತ್ತಾರೆ. ಕರುಳಿನ ಕ್ಯಾನ್ಸರ್‌ಗಳು ಬರುವುದನ್ನು ಇದು ತಡೆಯುತ್ತದೆ. ಮೆಕ್ಕೆ ಜೋಳವನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ ನರಗಳು ಸದೃಡವಾಗುತ್ತವೆ, ಆಂಟಿ-ಆಕ್ಸಿಡೆಂಟಾಗಿ ಇದು ಕೆಲಸ ಮಾಡಿ ಹೃದಯದ ಕಾಯಿಲೆಗಳನ್ನು ದೂರ ಮಾಡುತ್ತದೆ.

ದೇಹದಲ್ಲಿ ಶೇಖರಣೆಯಾಗುವ ಕೆಟ್ಟ ಕೊಲೆಸ್ಟರಾಲನ್ನು ನಾಶ ಮಾಡಿ ತೂಕವನ್ನು ಇಳಿಸುವುದರಲ್ಲೂ ಇದು ಸಹಕಾರಿಯಾಗಿದೆ. ಕಡಿಮೆ ಪ್ರಮಾಣದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್‌  ಇದರಲ್ಲಿದ್ದು, ನಾರಿನಂಶದಿಂದ ತುಂಬಿರುತ್ತದೆ. ವಿಟಮಿನ್‌-ಬಿ ಹಾಗೂ ಫಾಲಿಕ್-ಆಸಿಡ್ ಇರುವುದರಿಂದ ರಕ್ತ ಹೀನತೆಯನ್ನು ದೂರ ಮಾಡುತ್ತದೆ. ರಕ್ತದಲ್ಲಿರುವ ಕೊಬ್ಬಿನಂಶವನ್ನು ಇದು ನಾಶಪಡಿಸುತ್ತದೆ.  ರಕ್ತದ ಒತ್ತಡವನ್ನು ಕಡಿಮೆ ಮಾಡಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಿಸುತ್ತದೆ.  ಜೀರ್ಣಕ್ರಿಯೆಗೆ ಸಹಾಯಕವಾಗಿ, ಮಲಬದ್ಧತೆಯನ್ನು ನಿವಾರಿಸುತ್ತದೆ. ನರಮಂಡಲವನ್ನು ಆರೋಗ್ಯವಾಗಿಡುತ್ತದೆ ಅಲ್ಲದೇ ಅಧಿಕ ಪೋಷಕಾಂಶವನ್ನು ಹೊಂದಿರುತ್ತದೆ. ನಿತ್ಯದ ಆಹಾರದಲ್ಲಿ ಮೆಕ್ಕೆಜೋಳವನ್ನು ಬಳಸಿ ಆರೋಗ್ಯವಂತರಾಗಿ.

Exit mobile version