ನಿತ್ಯಾನಂದನ `ಕೈಲಾಸ’ ರಾಷ್ಟಕ್ಕೆ ವಿಶ್ವಸಂಸ್ಥೆ ಸಮಿತಿ ಸದಸ್ಯತ್ವ ! ಸುದ್ದಿ ನಿಜನಾ? ಸುಳ್ಳಾ?

Geneva : ಅಚ್ಚರಿಯ ಬೆಳವಣಿಗೆಯಲ್ಲಿ ಫೆಬ್ರವರಿ 24 ರಂದು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ (nityananda new drama) ಹಕ್ಕುಗಳ ಸಮಿತಿ ನಡೆಸಿದ ಚರ್ಚೆಯಲ್ಲಿ ಭಾರತದಿಂದ ಪಲಾಯನಗೈದ

‘ಸ್ವಯಂ ಘೋಷಿತ ದೇವಮಾನವ’ ನಿತ್ಯಾನಂದನ ಸ್ವಯಂಘೋಷಿತ ದೇಶವಾದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (United States of Kailash) ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಭಾಗಿಯಾಗಿರುವ ಕೈಲಾಸ ಪ್ರತಿನಿಧಿ ಈ ಕುರಿತು ಟ್ಚೀಟ್‌ಮಾಡಿದ್ದು, ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (United States of Kailash) ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು

ಚರ್ಚೆಯಲ್ಲಿ ಭಾಗವಹಿಸಿದ ಕ್ಷಣ. ಸುಸ್ಥಿರ ಅಭಿವೃದ್ಧಿ ಕುರಿತ ಸಾಮಾನ್ಯ ಅಭಿಪ್ರಾಯದ ಚರ್ಚೆಯಲ್ಲಿ ಕೈಲಾಸ ಪಾಲ್ಗೊಂಡಿತ್ತು” ಎಂದು (nityananda new drama) ಹೇಳಿಕೊಂಡಿದ್ದಾರೆ.


ನಿತ್ಯಾನಂದನ(Nityananda)ಪ್ರತಿನಿಧಿಗಳು ಮಾತ್ರ ಸಮಿತಿ ಸಭೆಯಲ್ಲಿ ಭಾಗವಹಿಸಿರುವ ಕ್ಷಣವನ್ನು, ತಮ್ಮ ಕೈಲಾಸ ದೇಶವನ್ನು ವಿಶ್ವಸಂಸ್ಥೆ ಗುರುತಿಸಿ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ

ಸದಸ್ಯತ್ವ ನೀಡಿದೆ ಅನ್ನೋ ರೀತಿ ಪೋಸ್ ಕೊಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಇದು ಸಾರ್ವಜನಿಕರಲ್ಲಿ ಮಾತ್ರವಲ್ಲ ಮಾಧ್ಯಮಗಳ ತಪ್ಪು ಗ್ರಹಿಕೆಗೆ ಕಾರಣವಾಗಿದೆ. ಕೆಲವು ಮಾಧ್ಯಮಗಳು ಈ ಬಗ್ಗೆ ಸುಳ್ಳು ಸುಳ್ಳು ಸುದ್ದಿಯನ್ನೇ ಬರೆದು ಕೈಲಾಸ ದೇಶಕ್ಕೆ ವಿಶ್ವಸಂಸ್ಥೆ ಸಮಿತಿ ಸದಸ್ಯತ್ವ ಅಂತೆಲ್ಲಾ ಬರೆದುಕೊಂಡಿದೆ.

ಆದ್ರೆ ಈ ಸುದ್ದಿಯ ಅಸಲಿಯತ್ತು ಏನು ಗೊತ್ತಾ? ವಿಶ್ವಸಂಸ್ಥೆಯಲ್ಲಿ ಸದ್ಯ 193 ರಾಷ್ಟ್ರಗಳಿಗೆ ಸದಸ್ಯತ್ವ ನೀಡಲಾಗಿದೆ. ಈ ದೇಶಗಳು ಮಾತ್ರ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅವಕಾಶ ಹೊಂದಿರುತ್ತವೆ.

ಆದರೆ ಸಾರ್ವಜನಿಕರಿಗೆ ಮಾತನಾಡಲು ಕೂಡಾ ಕೆಲವು ಅವಕಾಶ ನೀಡಲಾಗುತ್ತದೆ.

ಈ ಅವಕಾಶವನ್ನೇ ಕೈಲಾಸ ಪ್ರತಿನಿಧಿಗಳು ಬಳಸಿಕೊಂಡಿದ್ದಾರೆ. ಅವರು ಸಾರ್ವಜನಿಕರ ಪ್ರತಿನಿಧಿಗಳಾಗಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗಿಯಾಗಿದ್ದಾರೆ ಹೊರತು ಯಾವುದೇ ದೇಶದ ಪ್ರತಿನಿಧಿಗಳಾಗಿ ಸಭೆಯಲ್ಲಿ ಭಾಗಿಯಾಗಿಲ್ಲ.

ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆಯಬೇಕಾದರೆ, ಭದ್ರತಾ ಮಂಡಳಿ ಮತ್ತು ಸಾಮಾನ್ಯ ಸಭೆಯಿಂದ ಒಪ್ಪಿಗೆ ಪಡೆಯಬೇಕು.

ಭಾರತದಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020ರಲ್ಲಿ ಈಕ್ವೆಡಾರ್ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿದ ನಂತರ ಹೊಸ ದೇಶವನ್ನು ಸ್ಥಾಪಿಸಿದ್ದಾನೆ. ಈ ದೇಶವು ಧ್ವಜ,

ಸಂವಿಧಾನ, ಆರ್ಥಿಕ ವ್ಯವಸ್ಥೆ, ಪಾಸ್ಪೋರ್ಟ್ ಮತ್ತು ಲಾಂಛನವನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾನೆ.

ವರದಿಗಳ ಪ್ರಕಾರ, ಕೈಲಾಸ ಪ್ರತಿನಿಧಿ ತನ್ನನ್ನು ವಿಜಯಪ್ರಿಯಾ ನಿತ್ಯಾನಂದ (Vijaypriya Nithyananda) ಎಂದು ಪರಿಚಯಿಸಿಕೊಂಡಿದ್ದು, “ಕೈಲಾಸವು ಸುಸ್ಥಿರ ಅಭಿವೃದ್ಧಿಗಾಗಿ ಸಮಯ-ಪರೀಕ್ಷಿತ ಹಿಂದೂ ತತ್ವಗಳಿಗೆ

ಹೊಂದಿಕೆಯಾಗುವ ಪ್ರಾಚೀನ ಹಿಂದೂ ನೀತಿಗಳು ಮತ್ತು ಸ್ಥಳೀಯ ಪರಿಹಾರಗಳನ್ನು ಜಾರಿಗೆ ತರುತ್ತಿದೆ.

ಅದೇ ರೀತಿ ಕೈಲಾಸದಲ್ಲಿ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿ, ಬಟ್ಟೆ, ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ” ಎಂದು ಹೇಳಿದ್ಧಾರೆ. ಇದೇ ವೇಳೆ ಇಯಾನ್ ಕುಮಾರ್ ಎಂದು ಗುರುತಿಸಲ್ಪಟ್ಟ ಇನ್ನೊಬ್ಬ ಪ್ರತಿನಿಧಿ,

ಪ್ಯಾನೆಲ್ನಲ್ಲಿನ ತಜ್ಞರನ್ನು “ಸ್ಥಳೀಯ ಕಾನೂನುಗಳು ತಮ್ಮ ಸಾಂಸ್ಕೃತಿಕ ಕೃಷಿ ಸಂಪ್ರದಾಯಗಳನ್ನು ಅಧಿಕೃತವಾಗಿ ಅಭ್ಯಾಸ ಮಾಡಲು ಬಯಸುವ ಸ್ಥಳೀಯ ಗುಂಪುಗಳನ್ನು ಗಮನಾರ್ಹವಾಗಿ ನಿಗ್ರಹಿಸಬಹುದೇ..?

ಎಂದು ಪ್ರಶ್ನೆ ಕೇಳಿದರು. ಆದರೆ ಯಾವುದೇ ಪ್ಯಾನೆಲಿಸ್ಟ್ಗಳು ಅವರ ಪ್ರಶ್ನೆಗಳಿಗೆ ಮತ್ತು ಕಾಮೆಂಟ್ಗಳಿಗೆ ಪ್ರತಿಕ್ರಿಯಿಸಲಿಲ್ಲ ಎನ್ನಲಾಗಿದೆ.

Exit mobile version