ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ಮೈಸೂರು,ಜೂ.29: ರಾಜ್ಯದಲ್ಲಿ ಕೊರೊನಾ ವಾಕ್ಸಿನ್ ಕೊರತೆ  ಇಲ್ಲ ಎಂದಿರುವ ಆರೋಗ್ಯ ಸಚಿವ ಡಾ. ಸುಧಾಕರ್, ಪ್ರತಿದಿನ ಎರಡರಿಂದ ಮೂರು ಲಕ್ಷ‌ ವ್ಯಾಕ್ಸಿನ್ ಪೂರೈಕೆ ಮಾಡುತ್ತಿರುವುದಾಗಿ ಹೇಳಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ  ಪ್ರತಿದಿನ ಈಗಲೂ ಎರಡ್ಮೂರು ಲಕ್ಷ ವಾಕ್ಸಿನ್ ಕೊಡುತ್ತಿದ್ದೇವೆ. ಈಗಲು ನಮ್ಮ ಬಳಿ ಐದು ಲಕ್ಷ ವಾಕ್ಸಿನ್ ದಾಸ್ತಾನು ಇದೆ.  ಕೇಂದ್ರದವರ ಜೊತೆ ನಾವು ಮಾತನಾಡಿದ್ದೇವೆ. ನಾಳೆ ಮತ್ತಷ್ಟು ವಾಕ್ಸಿನ್ ರಾಜ್ಯಕ್ಕೆ ಬರಲಿದೆ. ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದು ಎಂದರು.‌

ರಾಜ್ಯದಲ್ಲಿ ಒಟ್ಟು 20 ಕರೊನಾ ಹಾಟ್ ಸ್ಪಾಟ್ ಗುರ್ತಿಸಿದ್ದೇವೆ. ಮೈಸೂರಿನಲ್ಲಿ ಎರಡು ಹಾಟ್ ಸ್ಪಾಟ್ ಇದೆ. ಇದನ್ನ ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ. ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಲ್ಯಾಬ್ ಆರಂಭಕ್ಕೆ ಸಿದ್ದತೆ ಮಾಡುತ್ತಿದ್ದೇವೆ ಅಂತ ಹೇಳಿದರು.

ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುವ ವಿಚಾರದಲ್ಲಿ ಮುಖ್ಯಮಂತ್ರಿಯೇ ಹೇಳಿದ ಮೇಲೆ ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲ ಅಂತ ಈ‌ ಬಗ್ಗೆ ಪ್ರಶ್ನೆಗೆ ವಿವರಣೆ ನೀಡಲು ಸಚಿವರು ನಿರಾಕರಿಸಿದರು.

Exit mobile version