ಪ್ರೀತಿ ಚಿಗುರುವ ಸಮಯದಲ್ಲಿ ಈ ಮಾತುಗಳು ಬೇಡ

ಸಾಂದರ್ಭಿಕ ಚಿತ್ರ

ಪ್ರೀತಿ ಚಿಗುರೊಡೆಯುತ್ತಿರುವ ಸಂಬಂಧದಲ್ಲಿ ಮಾತನಾಡುವಾಗ ಬಹಳ ಸೂಕ್ಷ್ಮವಾಗಿರಬೇಕು. ಏಕೆಂದರೆ ಸಣ್ಣ ತಪ್ಪು ದೊಡ್ಡ ಬಿರುಕುಗಳಿಗೆ ಅಥವಾ ನಿಮ್ಮ ಬಗ್ಗೆ ನೆಗೆಟಿವ್ ಭಾವನೆ ಹುಟ್ಟಿಕೊಳ್ಳಲು ಕಾರಣವಾಗಬಹುದು. ಆದ್ದರಿಂದ ಹೊಸದಾಗಿ ಆರಂಭವಾದ ಸಂಬಂಧದಲ್ಲಿ ಮಾತನಾಡಲೇಬಾರದಂತಹ ಕೆಲವು ವಿಚಾರಗಳಿವೆ, ಅವುಗಳಾವುವು ಎಂಬುದನ್ನು ನೋಡೋಣ.

ಮಾಜಿ ಪ್ರೇಮಿಯ ಬಗ್ಗೆ ಮಾತು:
ನಿಮ್ಮ ಮಾಜಿ ಪ್ರೇಮಿಯ ಬಗ್ಗೆ ಮಾತನಾಡುವುದು ಸರಿಯಲ್ಲ. ನಿಮ್ಮ ಜೀವನದಲ್ಲಿ ಇಲ್ಲದವರ ಬಗ್ಗೆ ನೀವೇಕೆ ಮಾತನಾಡಲು ಬಯಸುತ್ತೀರಿ?. ಅವರ ಬಗ್ಗೆ ಒಮ್ಮೆ ಹೇಳಿಕೊಳ್ಳುವುದು ಒಳ್ಳೆಯದು, ಆದರೆ ಪದೇ ಪದೇ ಅವರ ಬಗ್ಗೆಯೇ ಮಾತನಾಡುವುದು, ನಿನ್ನಿಂದ ನನಗೆ ಹಳೇ ಪ್ರೇಮಿಯ ನೆನಪಾಗುತ್ತಿದೆ ಎಂದು ಹೇಳುವುದು ಸಂಬಂಧದಲ್ಲಿ ಸಮಸ್ಯೆಯುಂಟುಮಾಡಬಹುದು. ಜೊತೆಗೆ ನಿಮ್ಮ ಪ್ರಸ್ತುತ ಸಂಗಾತಿಯನ್ನು ಮಾಜಿ ಪ್ರೇಮಿ ಜೊತೆ ಹೋಲಿಕೆ ಮಾಡಬೇಡಿ. ಇದು ಸರಿಯಲ್ಲ.

ಸ್ನೇಹಿತರ ಬಗೆಗಿನ ಅಭಿಪ್ರಾಯ:
ನಿಮಗೆ ನಿಮ್ಮ ಸಂಗಾತಿಯ ಯಾವುದೋ ಒಬ್ಬ ಸ್ನೇಹಿತ ಇಷ್ಟವಾಗದಿದ್ದರೂ ಅದನ್ನು ಅವರ ಮುಂದೆಯೇ ಹೇಳಬೇಡಿ. ಆಗ ನಿಮ್ಮ ಸ್ನೇಹಿತರನ್ನು ಕರೆದು, ನೀವು ಬಯಸುವ ಯಾವುದೇ ವಿಷಯದ ಬಗ್ಗೆ ಮಾತನಾಡಿ. ಹಾಗೆಯೇ ಇಷ್ಟವಿಲ್ಲದಿದ್ದರೂ, ಬೆಸ್ಟ್‌ ಫ್ರೆಂಡ್ ಎಂಬಂತೆ ನಾಟಕ ಮಾಡುವುದು ಬೇಡ. ಅವರಿಂದ ದೂರವಿರಿ.

ಪ್ರೀತಿಯನ್ನು ಸಾಬೀತುಪಡಿಸಲು ಹೇಳುವುದು:
ಅವರು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಸಾಬೀತು ಪಡಿಸಲು ಹೇಳುವುದು ಕೇವಲ ಸಿನಿಮಾಕ್ಕೆ ಸರಿ, ನಿಜಜೀವನಕ್ಕೆ ಅಲ್ಲ. ಒಂದು ವೇಳೆ ಹಾಗೇ ಹೇಳಿದರೆ, ಸಂಬಂಧದಲ್ಲಿನ ಅಸುರಕ್ಷತೆಯನ್ನು ಸೂಚಿಸುತ್ತದೆ. ಅವರ ಪ್ರೀತಿಯನ್ನು ನಿಮಗೆ ಸಾಬೀತುಪಡಿಸಲು ಎಂದಿಗೂ ಕೇಳಬಾರದು. ಅದನ್ನು ಅರ್ಥಮಾಡಿಕೊಳ್ಳಲು ಅವರ ಕಾರ್ಯಗಳು ಮತ್ತು ಪ್ರತಿಕ್ರಿಯೆಗಳು ಸಾಕು.

ನಾನಾ ಅಥವಾ ಅವರಾ?:
ನಿಮ್ಮ ಸಂಗಾತಿಗೆ ಆಯ್ಕೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಅಥವಾ ಪ್ರಶ್ನೆ ಕೇಳಬೇಡಿ. ಇದು ಅನಾರೋಗ್ಯಕರ ಸಂಬಂಧದ ಸಂಕೇತವಾಗಿದೆ. ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು ಅಥವಾ ದಿನವಿಡೀ ನಿಮ್ಮೊಂದಿಗೆ ಮನೆಯಲ್ಲಿಯೇ ಇರುವುದು ಇವುಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೇಳಬೇಡಿ. ಏಕೆಂದರೆ ಉತ್ತಮ ಸಂಬಂಧಕ್ಕೆ ಎರಡೂ ಮುಖ್ಯ.

ಅಭ್ಯಾಸದ ಬಗ್ಗೆ ಕಾಮೆಂಟ್ ಮಾಡುವುದು:
ಅವರ ಆರೋಗ್ಯದ ಕುರಿತು ಕೆಲವೊಂದು ಸಲಹೆ ನೀಡುವುದು ಒಳ್ಳೆಯದೇ. ಉದಾ: “ನೀವು ತುಂಬಾ ಎಣ್ಣೆಯುಕ್ತ ಆಹಾರವನ್ನು ತಿನ್ನುತ್ತೀರಿ” ಎಂದು ಹೇಳುವ ಮೂಲಕ ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಬಹುದು. ಆದರೆ ಇದನ್ನು ಸಂಬಂಧದ ಆರಂಭದಲ್ಲಿಯೇ ಹೇಳುವುದು ಸರಿಯಲ್ಲ. ನಿಮ್ಮ ಸಂಬಂಧ ಆರಂಭಿಕ ಹಂತದಲ್ಲಿದ್ದಾಗ ಅವರ ಅಭ್ಯಾಸಗಳ ಬಗ್ಗೆ ಪ್ರತಿಕ್ರಿಯಿಸಬೇಡಿ. ಸಮಯ ಕಳೆದಂತೆ ನಿಧಾನವಾಗಿ ಅರ್ಥೈಸಬಹುದು.

ಅಸಭ್ಯ ಪದಗಳು:
ವಾದ ಮಾಡುವಾಗ “ ಬಾಯಿ ಮುಚ್ಚಿ” ಅಥವಾ “ಈಗಲೇ ಹೊರಟು ಹೋಗು” ಎಂದು ಹೇಳುವುದು ಉತ್ತಮವೇ, ಆದರೆ ಪ್ರತಿ ವಾದದಲ್ಲೂ ಇದನ್ನು ಹೇಳಬೇಡಿ. ಆರಂಭದಲ್ಲಿ, ನೀವು ತಮಾಷೆ ಮಾಡುತ್ತಿದ್ದೀರಾ ಅಥವಾ ಗಂಭೀರವಾಗಿರುತ್ತೀರಾ ಎಂದು ಅವರಿಗೆ ಅರ್ಥವಾಗದಿರಬಹುದು. ಪರಸ್ಪರ ಗೌರವ ನೀಡುವುದು ತುಂಬಾ ಮುಖ್ಯ.

Exit mobile version