ಅಮೇರಿಕಾದ ಈ ನಗರದಲ್ಲಿ ಮೊಬೈಲ್​, ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿದರೆ ಜೈಲು ಗ್ಯಾರಂಟಿ!

America: ಮೊಬೈಲ್​ ಫೋನನ್ನು ಈ ಅಂತರ್ಜಾಲ ಯುಗದಲ್ಲಿ ಬಳಸದೆ ಇಅರಳು ಸಾಧ್ಯವಿಲ್ಲ. ಅದನ್ನು (no usage of electronic items) ಊಹಿಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ

ಸೆಲ್ ಫೋನ್ ಬಳಸುವುದನ್ನು ನಿಷೇಧಿಸಿದರೆ, ಇದು ನಿಜವೇ, ಅದು ಸಾಧ್ಯವಾದೀತಾ ಎಂದು ಆಶ್ಚರ್ಯಪಡುತ್ತೀರಿ. ಆದರೆ ಅಮೇರಿಕಾದಲ್ಲಿ ಸೆಲ್ ಫೋನ್ ಬಳಕೆಯನ್ನು ನಿಷೇಧಿಸಿರುವ ನಗರವೊಂದಿದ್ದು,

ಅಲ್ಲಿರುವ ಜನರು ಫೋನ್ ಅಥವಾ ಆಧುನಿಕ ತಂತ್ರಜ್ಞಾನವನ್ನು ಬಳಸುವಂತಿಲ್ಲ. ಒಂದುವೇಳೆ (no usage of electronic items) ಉಪಯೋಗಿಸಿದರೆ ಜೈಲು ಶಿಕ್ಷೆ ಖಚಿತ.

ಈ ಗ್ರಾಮದ ಜನಸಂಖ್ಯೆ ಕೇವಲ 150 ರಷ್ಟಿದ್ದು, ವಿಶ್ವದ ಅತಿದೊಡ್ಡ ಸ್ಟೀರಬಲ್ ರೇಡಿಯೊ ದೂರದರ್ಶಕವು ಈ ನಗರದಲ್ಲಿದೆ. ಇಲ್ಲಿರುವ ಗ್ರೀನ್ ಬ್ಯಾಂಕ್ ದೂರದರ್ಶಕ ಅತ್ಯಂತ ದೊಡ್ಡದು. ಇದರ ಉದ್ದ 485 ಅಡಿ

ಇದರ ತೂಕ 7600 ಮೆಟ್ರಿಕ್ ಟನ್. ಈ ಟೆಲಿಸ್ಕೋಪ್‌ ಮೊಬೈಲ್​ ದೂರದರ್ಶಕವಾಗಿದ್ದು, ಚಲಿಸಬಲ್ಲದು. ಅಂದರೆ ಅದನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು.

ಅಮೆರಿಕದ ರಾಷ್ಟ್ರೀಯ ರೇಡಿಯೋ ಖಗೋಳ ವೀಕ್ಷಣಾಲಯವು ಈ ಸ್ಟೀರಬಲ್ ರೇಡಿಯೋ ದೂರದರ್ಶಕದ ಬಳಿ ಇದೆ. ಇಲ್ಲಿಂದ ವಿಜ್ಞಾನಿಗಳು ಬಾಹ್ಯಾಕಾಶದಿಂದ ಭೂಮಿಯನ್ನು ತಲುಪುವ ಅಲೆಗಳ ಬಗ್ಗೆ

ಸಂಶೋಧನೆ ನಡೆಸುತ್ತಿರುತ್ತಾರೆ.

ಎಲೆಕ್ಟ್ರಾನಿಕ್ ಉಪಕರಣ ಬಳಸಿದರೆ ಜೈಲು ಶಿಕ್ಷೆ:


ಅಮೆರಿಕದಂತಹ ಅತ್ಯಾಧುನಿಕ ದೇಶದ ಪಟ್ಟಣವೊಂದರಲ್ಲಿ ಸೆಲ್ ಫೋನ್ ಮೇಲೆ ನಿಷೇಧ ಹೇರಲಾಗಿದ್ದು, ಅಮೆರಿಕದ ಪಶ್ಚಿಮದಲ್ಲಿರುವ ವರ್ಜೀನಿಯಾದ ಪೊಕಾಹೊಂಟಾಸ್ ಕೌಂಟಿಯಲ್ಲಿರುವ ಗ್ರೀನ್

ಬ್ಯಾಂಕ್ ಸಿಟಿಯ (Green Bank City) ಜನರು ತಂತ್ರಜ್ಞಾನವನ್ನು ಬಳಸುವುದಿಲ್ಲ.

ಮೊಬೈಲ್, ಟಿವಿ, ರೇಡಿಯೋ ಬಳಕೆ ನಿಷೇಧ


ಇನ್ನು ಮೊಬೈಲ್, ಟಿವಿ ಮತ್ತು ರೇಡಿಯೋ ಬಳಸುವುದಿಲ್ಲ. ಈ ನಗರದಲ್ಲಿ ಈ ವಿದ್ಯುನ್ಮಾನ ಸಾಧನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅಂದರೆ ಇಲ್ಲಿ ವಾಸಿಸುವವರು ಎಲೆಕ್ಟ್ರಾನಿಕ್ ವಸ್ತುಗಳನ್ನು

ಬಳಸಿದರೆ ಜೈಲು ಸೇರಬೇಕಾಗುತ್ತದೆ

ಈ ದೂರದರ್ಶಕದ ಮೂಲಕ ಬಾಹ್ಯಾಕಾಶದಲ್ಲಿರುವ 13 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ಸಂಕೇತಗಳನ್ನು ಸಹ ಪಡೆಯಬಹುದು. ಹಾಗಾಗಿ ಇದಕ್ಕೆ ಬಾಧಕವಾಗಬಾರದು ಎಂದು ಈ ನಗರದಲ್ಲಿ

ವಿದ್ಯುತ್ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದನ್ನು ಓದಿ: ಆ್ಯಪ್ ಮೂಲಕ ಲೈವ್ ಸೆಕ್ಸ್ ಶೋ ; ಇಬ್ಬರು ನಟಿಯರು ಅರೆಸ್ಟ್

Exit mobile version