ಗ್ಯಾರಂಟಿ ಎಫೆಕ್ಟ್ : ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಉಚಿತ ಔಷಧಿ ; ಬಡರೋಗಿಗಳ ಪರದಾಟ

Bengaluru: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ (noFree medicine- govt hospitals) ಉಂಟಾಗಿದ್ದು, ಬಡರೋಗಿಗಳಿಗೆ ಉಚಿತ ಔಷಧಿ ಸಿಗದೇ, ಹೆಚ್ಚಿನ ಬೆಲೆಯನ್ನೂ ನೀಡಿ

ಔಷಧಿಗಳನ್ನು ಖರೀದಿಸಲಾಗದೇ ಪರದಾಡುವಂತಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಔಷಧಗಳನ್ನು

ಖರೀದಿಸಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಬೇಕಿತ್ತು. ಆದರೆ ಹಣಕಾಸಿನ ಕೊರತೆಯಿಂದಾಗಿ ಸುಮಾರು 700ಕ್ಕೂ ಅಧಿಕ ಔಷಧಿಗಳನ್ನು ಖರೀದಿಯೇ ಮಾಡಿಲ್ಲ.

ಇದರಿಂದಾಗಿ ಗಂಭೀರ ಕಾಯಿಲೆಗಳಿಗೆ ಬಳಸುವ ಜೀವರಕ್ಷಕ ಔಷಧಗಳು ಸಿಗದೆ ಬಡ ರೋಗಿಗಳು (Poor patients) ಪರದಾಡುವಂತಾಗಿದೆ.

ಮೂಲಗಳ ಪ್ರಕಾರ, ಪ್ರಸಕ್ತ ತ್ರೈಮಾಸಿಕದದಲ್ಲಿಸುಮಾರು 600 ಕೋಟಿ ರೂಪಾಯಿ ಮೊತ್ತದ 733 ಔಷಧಗಳಿಗೆ ಖರೀದಿಗೆ ಬೇಡಿಕೆಯಿದೆ. KSMSCL ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ

ಮೌಲ್ಯದ ಆಂಟಿಬಯೋಟಿಕ್ ಔಷಧಿ (Antibiotic medication) ಮತ್ತು ವೈದ್ಯಕೀಯ ಸಲಕರಣೆ ಸೇರಿ ಅನೇಕ ಔಷಧಗಳನ್ನು ಖರೀದಿಸಿ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ,

ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಪೂರೈಸುತ್ತದೆ. ಆದರೆ ಸರ್ಕಾರ ಹಣಕಾಸಿಕ ಕೊರತೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ಇನ್ನೂ

ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಔಷಧಿಗಳನ್ನು (noFree medicine- govt hospitals) ಖರೀದಿಸಲು ಸಾಧ್ಯವಾಗಿಲ್ಲ.

ಬಿಲ್ಗಳ ಸಮಸ್ಯೆ : ಈ ಹಿಂದೆ ಔಷಧಿಗಳನ್ನು ಪೂರೈಕೆ ಮಾಡಿರುವ ಕಂಪನಿಗಳಿಗೆ ಬಿಲ್ ಪಾವತಿ ಮಾಡಿಲ್ಲ. ಔಷಧಗಳ ಪೂರೈಕೆ ಮಾಡಿರುವ ಕಂಪನಿಗಳಿಗೆ ನಿಗದಿತ ಸಮಯದಲ್ಲಿ ಹಣ ಪಾವತಿ

ಆಗುತ್ತಿಲ್ಲ. ಹೀಗಾಗಿ ಅನೇಕ ಕಂಪನಿಗಳು ಔಷಧಿ ಪೂರೈಕೆಗೆ (Drug supply companies) ಹಿಂದೇಟು ಹಾಕುತ್ತಿವೆ. ಆದರೆ ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ237 ಕೋಟಿ

ರೂಪಾಯಿ ಹಣ ಬರಬೇಕಿದೆ. ಆ ಹಣ ಬಂದ ಕೂಡಲೇ ಹಣ ಪಾವತಿಸಲಾಗುವುದು ಎಂದು KSMSCL ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್. ವಟಾರೆ ಹೇಳಿದ್ದಾರೆ.

ಯಾವ ಔಷಧಗಳ ಕೊರತೆ : ರಕ್ತದೊತ್ತಡ, ಗರ್ಭಾಶ್ರಯ ರಕ್ತಸ್ರಾವ, ಹೃದಯಾಘಾತ, ಮೂಳೆ, ತುರಿಕೆ, ಫಂಗಸ್, ಮೈಗ್ರೇನ್, ಹುಣ್ಣು, ಅಸ್ತಮಾ, ಸಕ್ಕರೆ ಕಾಯಿಲೆ, ನಿದ್ರಾಹೀನತೆ ಅನೆಸ್ತೀಯಾ,

ಹೃದಯ ಶಸಚಿಕಿತ್ಸೆ, ರಕ್ತ ರಕ್ತಹೀನತೆ, ಸರ್ಪಸುತ್ತು, ನ್ಯುಮೋನಿಯಾ, ಕ್ಯಾನ್ಸರ್, , ಶ್ವಾಸಕೋಶ, ಕರುಳು, ನೋವು, ಯೋನಿ ಸೋಂಕು, ಶೀತ, ಹೆಪ್ಪುಗಟ್ಟುವಿಕೆ, ವಾಕರಿಕೆ, ವಾಂತಿ, ಮಿದುಳು

ಮತ್ತು ನರ, ಕಣ್ಣಿನ ಸೊಂಕು ಸೇರಿ ವಿವಿಧ ಗಂಭೀರ ಕಾಯಿಲೆಗಳ ನಿವಾರಿಸುವ ಔಷಧಗಳ ಕೊರತೆ ಉಂಟಾಗಿದೆ.

ಇದನ್ನು ಓದಿ: ಗೂಳಿಹಟ್ಟಿ ಶೇಖರ್‌ಗೆ ಆದ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿತ್ತು: ಮುಖ್ಯಮಂತ್ರಿ ಚಂದ್ರು

Exit mobile version