ಲೋಕಸಭಾ ಚುನಾವಣೆ ನಂತರ ಉ.ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ : ಉಮೇಶ್ ಕತ್ತಿ

Umesh Katti

2024ರಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ(Loksabha Election) ನಂತರ ಉತ್ತರ ಕರ್ನಾಟಕ(North Karnataka) ಪ್ರತ್ಯೇಕ ರಾಜ್ಯವಾಗಿ ನಿರ್ಮಾಣವಾಗಲಿದೆ ಎಂದು ಅರಣ್ಯ ಸಚಿವ(Forest Minister) ಉಮೇಶ್ ಕತ್ತಿ(Umesh Katthi) ಹೇಳಿದ್ದಾರೆ.
ಬೆಳಗಾವಿಯ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024ರ ಸಾರ್ವತ್ರಿಕ ಚುನಾವಣೆಯ ನಂತರ ದೇಶದಲ್ಲಿ ಹೊಸ ರಾಜ್ಯಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ.

ಉತ್ತಮ ಆಡಳಿತಕ್ಕಾಗಿ ಪ್ರಧಾನಿ(PrimeMinister) ನರೇಂದ್ರ ಮೋದಿಯವರು(Narendra Modi) ಹೊಸ 50 ರಾಜ್ಯಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕವೂ ಸೇರಿದೆ ಎಂದು ತಿಳಿಸಿದರು. ಉತ್ತರ ಕರ್ನಾಟಕ ಸ್ವತಂತ್ರ ರಾಜ್ಯವಾಗುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ. ಹೀಗಾಗಿ ಈಗಲೇ ನಾವು ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ನಾವು ಹೋರಾಟ ಮಾಡಬೇಕಾಗುತ್ತದೆ. ಇನ್ನು ಮಹಾರಾಷ್ಟ್ರವನ್ನು ಮೂರು ರಾಜ್ಯಗಳಾಗಿ, ಉತ್ತರ ಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ.

2024ರ ಲೋಕಸಭಾ ಚುನಾವಣೆ ನಂತರ ಇದೆಲ್ಲಕ್ಕೂ ಚಾಲನೆ ಸಿಗಲಿದೆ ಎಂದರು. ಇನ್ನು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಐಟಿ-ಬಿಟಿ ಕಂಪನಿಗಳು(IT-BT Companies) ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಇನ್ನಷ್ಟು ಹೊಸ ಕಂಪನಿಗಳು ಬರಲು ಆಸಕ್ತಿ ತೋರುತ್ತಿಲ್ಲ. ಹೊಸ ಕಂಪನಿಗಳಿಗೆ ಉತ್ತರ ಕರ್ನಾಟಕ ಉತ್ತಮ ಆಯ್ಕೆಯಾಗಲಿದೆ. ಇನ್ನು ಈಗಾಗಲೇ ಉತ್ತರ ಕರ್ನಾಟಕ ಜನರೇ ಬೆಂಗಳೂರಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಸಾಕಷ್ಟು ಉದ್ಯೋಗಾವಕಾಶಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version