ಯಾವಾಗ ಕೊಡ್ತೀರಿ ಮುಕ್ತಿ? ಕೆ.ಆರ್‌ ಪೇಟೆಯಲ್ಲಿ ಅರ್ಧಕ್ಕೆ ನಿಂತಿದೆ ರಸ್ತೆ ಕಾಮಗಾರಿ. ಹಿಂಸೆ ತಾಳಲಾಗದೆ ಗ್ರಾಮಸ್ಥರಿಂದ ಆಕ್ರೋಶ

ಯಾವಾಗ ಕೊಡ್ತೀರಿ ಮುಕ್ತಿ? ಕೆ.ಆರ್‌ ಪೇಟೆಯಲ್ಲಿ ಅರ್ಧಕ್ಕೆ ನಿಂತಿದೆ ರಸ್ತೆ ಕಾಮಗಾರಿ| Now or never!

ರಸ್ತೆ ಅಂದ್ರೆ ಬೆಚ್ಚಿ ಬೀಳ್ತಾರೆ ಕೆ. ಆರ್‌ ಪೇಟೆಯ ಸಂತೆಬಾಚಹಳ್ಳಿ ಹೋಬಳಿಯ ಚಿಕ್ಕಕ್ಯಾತನಹಳ್ಳಿ ಗ್ರಾಮದ ಜನತೆ. ಯಾಕಂದ್ರೆ ಈ ಊರಿನ ರಸ್ತೆ ಅಷ್ಟೊಂದು ದುಸ್ಥಿತಿಗೆ ಬಂದು ತಲುಪಿದೆ. 

ಅರ್ಧಂಬರ್ಧ ಮುಗಿದಿರುವ ರಸ್ತೆ ಕಾಮಗಾರಿ, ಓಡಾಡಲು ಕಷ್ಟ ಪಡುತ್ತಿರುವ ವಾಹನ ಸವಾರರು, ಇನ್ನೊಂದು ಕಡೆ ಕಳಪೆ ಚರಂಡಿ ವ್ಯವಸ್ಥೆ… ಒಟ್ಟಾರೆಯಾಗಿ ಇಲ್ಲಿನ ಜನರ ಗೋಳು ಕೇಳುವವರಿಲ್ಲದಂತಾಗಿದೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಸ್ತೆ ಸರಿ ಮಾಡಿಕೊಡುತ್ತೇವೆ, ಚರಂಡಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂಬ ಆಶ್ವಾಸನೆ ಕೋಡುತ್ತಾರೆಯೇ ಹೊರತು ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಮಾತ್ರ ಇಲ್ಲಿ ನಡೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಗೋಳಾಗಿದೆ.

ಅಲ್ಲದೇ ಮಳೆಗಾಲ ಬಂದರೆ ಸಾಕು ಇಲ್ಲಿನ ಮಣ್ಣಿನ ರಸ್ತೆಗಳು ಕೆರು ಗದ್ದೆಯಾಗಿ ಪರಿವರ್ತನೆ ಹೊಂದುತ್ತವೆ. ಈ ರಸ್ತೆಗಳಲ್ಲಿ ನಡೆದು ಹೋಗುವುದು ಕಷ್ಟಸಾಧ್ಯ. ಆದರೆ ಇಲ್ಲಿನ ಜನಪ್ರತಿನಿಧಿಗಳಾಗಲೀ, ಸಂಬಂಧಪಟ್ಟ ಅಧಿಕಾರಿಗಳಾಗಲೀ, ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಈ ವರದಿಯನ್ನು ನೋಡಿಯಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.

ಕೆ. ಆರ್‌ ಪೇಟೆಯಿಂದ ಸಿಟಿಜನ್‌ ಜರ್ನಲಿಸ್ಟ್‌ ಮಹೇಶ್‌ ಗಂಜಿಗೆರೆ ವಿಜಯಟೈಮ್ಸ್‌

Exit mobile version