ಶಾಸಕನಲ್ಲದ, ಎಂಎಲ್‌ಸಿಯೂ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ ; ಜಗದೀಶ್‌ ಶೆಟ್ಟರ್, ಲಕ್ಷ್ಮಣ ಸವದಿ, ಬಿ.ಕೆ.ಹರಿಪ್ರಸಾದ್‌ಗೆ ಕೈ ತಪ್ಪಿದ ಮಂತ್ರಿಗಿರಿ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಚಿವ ಸಂಪುಟ ರಚನೆ ಮಾಡಿದ್ದು, ಅಚ್ಚರಿ ಎಂಬಂತೆ ಹಲವು ಹಿರಿಯ ನಾಯಕರಿಗೆ ಈ ಬಾರಿ ಸಚಿವ (oath by congress ministers) ಸ್ಥಾನ ಕೈತಪ್ಪಿದೆ.

ಅನೇಕ ಹಿರಿಯ ನಾಯಕರು (oath by congress ministers) ದೆಹಲಿಯಲ್ಲೇ ಬೀಡುಬಿಟ್ಟು ಮಂತ್ರಿಗಿರಿಗಾಗಿ ಭಾರೀ ಲಾಬಿಯನ್ನೇ ನಡೆಸಿದ್ದರು.

ಆದರೆ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಹೈಕಮಾಂಡ್‌ ಸಾಕಷ್ಟು ಅಳೆದು-ತೂಗಿ ಮಂತ್ರಿ ಸ್ಥಾನಕ್ಕೆ ಶಾಸಕರನ್ನು ಆಯ್ಕೆ ಮಾಡಿದೆ.

ಇನ್ನು ವಿಧಾನ ಪರಿಷತ್‌ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಹಿರಿಯ ಕಾಂಗ್ರೆಸ್‌ನಾಯಕ ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯನವರ ಆಪ್ತ ಬಸವರಾಜ ರಾಯರೆಡ್ಡಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಆದರೆ ಅಚ್ಚರಿ ಎಂಬಂತೆ ಶಾಸಕನಲ್ಲ,

ಎಂಎಲ್‌ಸಿಯೂ ಅಲ್ಲದ ರಾಯಚೂರಿನ ಬೋಸರಾಜುಗೆ ಸಚಿವ ಸ್ಥಾನ ನೀಡಲಾಗಿದೆ. ರಾಯಚೂರು ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬೋಸರಾಜುಗೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡುವ ದೃಷ್ಟಿಯಿಂದ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.

ಇದೀಗ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. 1999 ಹಾಗೂ 2004 ರಲ್ಲಿ ಮಾನ್ವಿ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದ ಇವರು 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಸದ್ಯ ಎಐಸಿಸಿ ಕಾರ್ಯದರ್ಶಿಯಾಗಿರುವ ಬೋಸರಾಜು ತೆಲಂಗಾಣ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೈಕಮಾಂಡ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.

ಇದನ್ನೂ ಓದಿ : https://vijayatimes.com/gold-and-silver-prices-decrease/

ಬಿಜೆಪಿ ತೊರೆದು ಕಾಂಗ್ರೆಸ್‌ಸೇರಿದ್ದ ಲಿಂಗಾಯತ ಸಮುದಾಯದ ಜಗದೀಶ್‌ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿಗೂ ಸಚಿವ ಸ್ಥಾನ ನೀಡಿಲ್ಲ. ಅದೇ ರೀತಿ ಬಂಜಾರ ಸಮಾಜದ ಏಕೈಕ ಶಾಸಕ ರುದ್ರಪ್ಪ ಲಮಾಣಿಗೂ ನಿರಾಸೆಯಾಗಿದೆ.

https://youtu.be/EURGsio5Qw8

ಮಂತ್ರಿ ಸ್ಥಾನ ಯಾರಿಗಿಲ್ಲ?
ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್, ತನ್ವೀರ್ ಸೇಠ್, ಶಾಮನೂರು ಶಿವಶಂಕರಪ್ಪ, ರುದ್ರಪ್ಪ ಲಮಾಣಿ, ಶಿವಲಿಂಗೇಗೌಡ, ಅಜಯ್ ಸಿಂಗ್, ಆರ್.ವಿ ದೇಶಪಾಂಡೆ, ಹ್ಯಾರಿಸ್, ಎಂ.ಕೃಷ್ಣಪ್ಪ, ಟಿ.ಬಿ ಜಯಚಂದ್ರ, ಬಿ.ಕೆ ಹರಿಪ್ರಸಾದ್,

ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ನರೇಂದ್ರಸ್ವಾಮಿ, ತುಕರಾಂ

ನೂತನ ಸಚಿವರು :


ಶಿವಾನಂದ ಪಾಟೀಲ್, ಎಸ್‍ಎಸ್ ಮಲ್ಲಿಕಾರ್ಜುನ್, ಹೆಚ್.ಕೆ.ಪಾಟೀಲ್ , ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ , ಚಲುವರಾಯ ಸ್ವಾಮಿ , ಕೆ. ವೆಂಕಟೇಶ್, ಎಚ್.ಸಿ ಮಹದೇವಪ್ಪ , ಕೆ.ಎನ್ ರಾಜಣ್ಣ, ಶರಣ ಬಸಪ್ಪ

ದರ್ಶನಾಪೂರ್, ಆರ್. ಬಿ ತಿಮ್ಮಾಪೂರ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್, ಮಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಂ ಖಾನ್, ಎಂ.ಸಿ ಸುಧಾಕರ್, ಡಿ ಸುಧಾಕರ್, ಸಂತೋಷ್ ಲಾಡ್ , ಬೋಸರಾಜು ,

ಬೈರತಿ ಸುರೇಶ್ , ಮಧು ಬಂಗಾರಪ್ಪ, ಬಿ. ನಾಗೇಂದ್ರ.

Exit mobile version