ಒಬ್ಬಂಟಿ ಆನೆ ಕಾವನ್‌ಗೆ ಪಾಕಿಸ್ತಾನದಿಂದ ಮುಕ್ತಿ

ಇಸ್ಲಾಮಾಬಾದ್, ನ. 28:  35 ವರ್ಷಗಳಿಂದ ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಕಾವನ್ ಎಂಬ ಆನೆಗೆ ಅಂತಿಮವಾಗಿ ವಿಮುಕ್ತಿ ದೊರೆತಿದೆ.

ಭಾನುವಾರ ಕಾವನ್ ಆನೆಯನ್ನು ಪಾಕಿಸ್ತಾನದಿಂದ ಕಾಂಬೋಡಿಯಾಕ್ಕೆ ಅಮೆರಿಕಾದ ಪಾಪ್ ಗಾಯಕಿ ಚೇರ್ ಕೊಂಡೊಯ್ಯಲಿದ್ದಾರೆ. ಶುಕ್ರವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಗಾಯಕಿ ಚೇರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಆನೆಯನ್ನು ಕಾಂಬೋಡಿಯಾಕ್ಕೆ ಕಳುಹಿಸಲು ಸಹಾಯ ಮಾಡಿದ್ದಕ್ಕಾಗಿ ಅವರು ಟ್ವಿಟರ್ ಮೂಲಕ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮತ್ತೊಂದು ಕಡೆ ಆನೆಯನ್ನು ಕಾಂಬೋಡಿಯಾಕ್ಕೆ ಸ್ಥಳಾಂತರಿಸಲು ಮುಂದೆ ಬಂದಿರುವ ಗಾಯಕಿ ಚೇರ್ ಅವರನ್ನು ಪ್ರಧಾನಿ ಇಮ್ರಾನ್ ಖಾನ್ ಸಹ ಅಭಿನಂದನೆ ತಿಳಿಸಿದ್ದಾರೆ.

ಇದಲ್ಲದೆ, ಭವಿಷ್ಯದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಪರಿಸರ ಸಂಬಂಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಗಾಯಕಿ ಚೇರ್ ಅವರನ್ನು ಪ್ರಧಾನಿ ಇಮ್ರಾನ್ ಕೋರಿದ್ದಾರೆ ಎಂದು ಪಿಎಂಒ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

Exit mobile version