ದೇಶದ ಸಂಸತ್ತು ಗಾಢ ಕತ್ತಲೆ ಚೇಂಬರ್ ಆಗಿ ಮಾರ್ಪಟ್ಟಿದೆ: ಒಬ್ರಿಯಾನ್ ಆಕ್ರೋಶ

ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ (Derek O’Brien) ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ #narendramodi ಹಾಗೂ ಗೃಹ ಸಚಿವ (Obrien against Modi-Amit shah) ಅಮಿತ್ ಶಾ

ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ‘ಸಂಸತ್ತು ಗಾಢ ಕತ್ತಲೆ ಕೋಣೆಯಾಗಿ (Obrien against Modi-Amit shah) ಮಾರ್ಪಟ್ಟಿದೆ’ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘2001ರ ಸಂಸತ್ ದಾಳಿಯ ನಂತರ, ಆಗಿನ ಪ್ರಧಾನಿ ಮತ್ತು ಗೃಹ ಸಚಿವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ’ ಎಂದು

ಟೀಕಿಸಿದ್ದಾರೆ. ‘2001 ಸಂಸತ್ ದಾಳಿ (Attack on Parliament) ನಡೆದಾಗ, ಸಂಸತ್ತಿನಲ್ಲಿ 3 ಕೆಲಸದ ದಿನ ಪೂರ್ಣ ಚರ್ಚೆ. ಪ್ರಧಾನ ಮಂತ್ರಿ ರಾಜ್ಯಸಭೆಯಲ್ಲಿ, ಗೃಹ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.

2023ರ ಉಲ್ಲಂಘನೆ; ಸರ್ಕಾರ ಮೌನವಾಗಿದೆ. ಗೃಹ ಸಚಿವರಿಂದ ಚರ್ಚೆ ಮತ್ತು ಹೇಳಿಕೆಗೆ ಒತ್ತಾಯಿಸಿದ್ದಕ್ಕಾಗಿ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತು ಗಾಢವಾದ ಕತ್ತಲೆಯ

ಕೋಣೆಯಾಗಿ ಮಾರ್ಪಟ್ಟಿದೆ’ ಎಂದು ಮೋದಿ-ಅಮಿತ್ ಶಾ @AmitShah ವಿರುದ್ಧ ಕಿಡಿಕಾರಿದ್ದಾರೆ. 2001ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 13 ರಂದು, ಲೋಕಸಭೆಯಲ್ಲಿ

ಚರ್ಚೆ ನಡೆಯುತ್ತಿದ್ದಾಗ ಸಾರ್ವಜನಿಕ ಗ್ಯಾಲರಿಯಿಂದ (Gallery) ಸಂಸತ್ತಿನ ಒಳಗೆ ಜಿಗಿದಿದ್ದ ಇಬ್ಬರು ಯುವಕರು, ತಮ್ಮ ಬೂಟುಗಳಲ್ಲಿ ಬಚ್ಚಿಟ್ಟಿದ್ದ ಡಬ್ಬಿಗಳಿಂದ ಹಳದಿ ಹೊಗೆಯನ್ನು ಬಿಡುಗಡೆ ಮಾಡಿದ್ದರು.

ಘಟನೆಯ ನಂತರ ವಿರೋಧ ಪಕ್ಷದ ಸಂಸದರು ಭದ್ರತೆ ಉಲ್ಲಂಘನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿ, ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದರು. ಈ ವಾಗ್ವಾದಿಂದ ಲೋಕಸಭೆಯ 100

ಮತ್ತು ರಾಜ್ಯಸಭೆಯ 46 ಪ್ರತಿಪಕ್ಷಗಳ ಸಂಸದರು ಅಶಿಸ್ತಿನ ಕಾರಣಕ್ಕಾಗಿ ಚಳಿಗಾಲ ಅಧಿವೇಶನದಿಂದ ಅಮಾನತುಗೊಂಡರು.

ಒಬ್ರೇನ್ ಅಮಾನತುಗೊಂಡ ಮೊದಲ ರಾಜ್ಯಸಭಾ ಸಂಸದರಾಗಿದ್ದಾರೆ. ಅಮಾನತುಗೊಂಡ ನಂತರವೂ ಅವರು ಸದನದಲ್ಲಿ ಉಳಿದುಕೊಂಡಿದ್ದಕ್ಕಾಗಿ ಅವರ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆಯ ಪ್ರಸ್ತಾಪವನ್ನು

ಸಹ ಮಾಡಿದ್ದಾರೆ. ಈ ವಿಷಯವನ್ನು ಸದನದ ವಿಶೇಷಾಧಿಕಾರ ಸಮಿತಿಗೆ ವಹಿಸಲಾಗಿದೆ.

ಸಂಸತ್ತಿನ ದಾಖಲೆಗಳ ಪ್ರಕಾರ, ಡಿಸೆಂಬರ್ (December) 2001ರ ಸಂಸತ್ತಿನ ಮೇಲಿನ ದಾಳಿಯ ನಂತರ, ಉಭಯ ಸದನಗಳಲ್ಲಿ ಚರ್ಚೆ ನಡೆದಿದ್ದು, ಅಂದಿನ ಗೃಹ ಸಚಿವ ಎಲ್. ಕೆ ಅಡ್ವಾಣಿ (L K Advani)

ಚರ್ಚೆಗೆ ಉತ್ತರ ನೀಡಿದ್ದರು. ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಉಭಯ ಸದನಗಳಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನು ಓದಿ: ದೇಶದ ಸಂಸತ್ತು ಗಾಢ ಕತ್ತಲೆ ಚೇಂಬರ್ ಆಗಿ ಮಾರ್ಪಟ್ಟಿದೆ: ಒಬ್ರಿಯಾನ್ ಆಕ್ರೋಶ

Exit mobile version