Odisha : ಪತ್ನಿಯ ಒಪ್ಪಿಗೆ ಪಡೆದು, ಮಂಗಳಮುಖಿಯ ಜೊತೆ ಎರಡನೇ ವಿವಾಹವಾದ ವ್ಯಕ್ತಿ!

Odisha : ಒಡಿಶಾದ ಕಲಹಂಡಿಯಲ್ಲಿ ವಿಶಿಷ್ಟ ವಿವಾಹ (Weird Marriage) ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿವಾಹಿತ ಪುರುಷನೊಬ್ಬ ತನ್ನ ಹೆಂಡತಿಯ ಅನುಮತಿಯನ್ನು ಪಡೆದು ಮಂಗಳಮುಖಿಯನ್ನು ಮದುವೆಯಾಗಿದ್ದಾನೆ.

ಈ ಪ್ರಕರಣ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.


ಘಟನೆಯ ವಿವರಣೆ ಹೀಗಿದೆ. ನರ್ಲಾ ಬ್ಲಾಕ್ ವ್ಯಾಪ್ತಿಯ ಧುರ್ ಕುಟಿ ಗ್ರಾಮದ ತೃತೀಯ ಲಿಂಗಿ (Transgender) ಸಂಗೀತಾ,

ಭವಾನಿ ಪಟ್ಟಣದ ದೇವ್ ಪುರ್ ಗ್ರಾಮಕ್ಕೆ ಸೇರಿದ ಫಕೀರಾ ನಿಯಾಲ್ ಅವರನ್ನು ಮದುವೆಯಾಗಿದ್ದಾರೆ.

ದಿನಗೂಲಿ ಕಾರ್ಮಿಕರಾಗಿರುವ ಫಕೀರಾನಿಗೆ ಐದು ವರ್ಷಗಳ (5 Years) ಹಿಂದೆಯೇ ವಿವಾಹವಾಗಿದ್ದು, ಮೂರು ವರ್ಷದ ಗಂಡು ಮಗುವಿದೆ.

ಕಳೆದ ವರ್ಷ ರಾಯಘಡ (Raygad) ಅಂಬಾಡೋಲದಲ್ಲಿ ತೃತೀಯ ಲಿಂಗಿ ಮಹಿಳೆಯೊಬ್ಬಳು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದದ್ದನ್ನು ನೋಡಿದ್ದ ವಿವಾಹಿತ ಪುರುಷ ಆಕೆಗೆ ಮಾರು ಹೋಗಿದ್ದರು.

ಕೂಡಲೇ ಆತ ತೃತೀಯ ಲಿಂಗಿಯ ಮೊಬೈಲ್‌ ನಂಬರ್ (Mobile No) ಅನ್ನು ಪಡೆದುಕೊಂಡು ಪ್ರತಿ ದಿನ ಮಾತಾನಾಡಲು ಶುರು ಮಾಡಿದ್ದರು.

ಇದನ್ನೂ ಓದಿ: https://vijayatimes.com/india-will-reach-3rd-place-in-largest-economy/


ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಫಕೀರಾ ನಿಯಾಲ್ (Fakira Niyal)ಅವರ ಪತ್ನಿ, ಪ್ರತಿನಿತ್ಯ ಯಾರೊಂದಿಗೆ ಫೋನಿನಲ್ಲಿ ಮಾತಾನಾಡುತ್ತಿದ್ದೀರಾ ಎಂದು ಕೇಳಿದಾಗ,

ತೃತೀಯ ಲಿಂಗಿಯೊಂದಿಗಿನ ಸಂಬಂಧವನ್ನು ಇವರು ಹೆಂಡತಿ ಬಳಿ ಹೇಳಿಕೊಂಡಿದ್ದಾರೆ.

ಮೊದಲು ಈಕೆಗೆ ಗಂಡನ ಸಂಬಂಧವನ್ನು ತಿಳಿದು ಬೇಸರವಾದರೂ, ನಂತರ ಒಪ್ಪಿಕೊಳ್ಳುತ್ತಾಳೆ. ಇದಾದ ಬಳಿಕ ಗಂಡ (Husband) ಹಾಗೂ ತೃತೀಯ ಲಿಂಗಿಯ ವಿವಾಹವನ್ನು ಮಾಡಿಸಲು ಹೆಂಡತಿ ಸಿದ್ಧತೆ ನಡೆಸುತ್ತಾಳೆ.

ಭಾನುವಾರ (Sunday) ನಾರ್ಲಾದಲ್ಲಿರುವ ದೇವಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಮದುವೆ ನಡೆಯಿತು. ಈ ಸಮಯದಲ್ಲಿ ತೃತೀಯ ಲಿಂಗಿ ಸಮುದಾಯದ ಕೆಲವು ಸದಸ್ಯರು ಸಹ ಭಾಗಿಯಾಗಿದ್ದರು.

ಸೆಬ್ಕಾರಿ ಕಿನ್ನರ್ ಮಹಾಸಂಘದ ಅಧ್ಯಕ್ಷೆ ಕಾಮಿನಿ ಅವರು ಇಬ್ಬರಿಗೂ ಕನ್ಯಾದಾನ ನೆರವೇರಿಸಿದರು. “ವಧು ವರರು ಹಾಗೂ ನಾವೂ ಸಹ ತುಂಬಾ ಸಂತೋಷವಾಗಿದ್ದೇವೆ ಮತ್ತು ಅವರಿಗೆ ಸಮೃದ್ಧ ಜೀವನವನ್ನು ಹಾರೈಸುತ್ತೇವೆ” ಎಂದು ಹೇಳಿದ್ದಾರೆ.

ವಿಶೇಷ ಎಂದರೆ, ಮೊದಲ ಪತ್ನಿ (First marriage)ಇಬ್ಬರ ಮದುವೆ ಮಾಡಿಸಿದ್ದು ಮಾತ್ರವಲ್ಲದೇ, ಆಕೆಯನ್ನು ತಮ್ಮ ಮನೆಯಲ್ಲಿಯೇ ಇರುವುದಕ್ಕೆ ಒಪ್ಪಿಗೆ ನೀಡಿದ್ದಾರೆ.

https://youtu.be/7CZbXW4vyjs

ಹಿಂದೂ ಸಂಪ್ರದಾಯದ ಹಾಗೂ ಭಾರತೀಯ ಕಾನೂನಿನ ಪ್ರಕಾರ ಎರಡನೇ ವಿವಾಹ (ತೃತೀಯ ಲಿಂಗಿ ಅಥವಾ ಮಹಿಳೆಯೊಂದಿಗಿನ) ಸಮ್ಮತವಲ್ಲ ಎಂದು ಒರಿಸ್ಸಾ ಹೈಕೋರ್ಟ್‌ನ(Odisha Highcourt) ಹಿರಿಯ ವಕೀಲ ಶ್ರೀನಿವಾಸ ಮೊಹಂತಿ ಹೇಳಿದ್ದಾರೆ.
Exit mobile version