ಇಂದಿನಿಂದ 15 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯ

ನವದೆಹಲಿ ಜ 3 : ಒಮಿಕ್ರಾನ್‌ ಸೋಂಕು ಜೊತೆಗೆ ಕೊರೊನಾ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಇಂದಿನಿಂದ  15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ (Vaccine For Children) ಹಾಕುವ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗುತ್ತಿದೆ. ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯನ್ನು ನೀಡುವುದಾಗಿ ಘೋಷಿಸಿದ್ದರು. ಇದಾದ ಬಳಿಕ ಜನವರಿ 1ರಿಂದ ಕೋವಿನ್ ಆ್ಯಪ್‌ನಲ್ಲಿ ಮಕ್ಕಳ ನೋಂದಣಿ ಆರಂಭವಾಗಿದ್ದು. ಮಾಹಿತಿ ಪ್ರಕಾರ, ಇದುವರೆಗೆ ದೇಶಾದ್ಯಂತ ಸುಮಾರು 6 ಲಕ್ಷ 80 ಸಾವಿರ ಮಕ್ಕಳು ಲಸಿಕೆಗೆ ನೋಂದಾಯಿಸಿಕೊಂಡಿದ್ದಾರೆ.

ಜನವರಿ 3 ರಿಂದ ದೇಶಾದ್ಯಂತ  15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯವಾಗಲಿದೆ. ಇದರ ಭಾಗವಾಗಿ ದೆಹಲಿಯಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಲು 159 ಕೇಂದ್ರಗಳನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ಕೂಡ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರಗಳನ್ನು ಗುರುತಿಸಿದೆ.  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಈ ಲಸಿಕೆ ಕೇಂದ್ರಗಳನ್ನು (Vaccination Centers) ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು, ಪಾಲಿಕ್ಲಿನಿಕ್‌ಗಳು, ದೆಹಲಿ ಸರ್ಕಾರ ಮತ್ತು ಪುರಸಭೆಯ ಶಾಲೆಗಳಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

Exit mobile version