ಒಮಿಕ್ರೋನ್‌ ಭೀತಿ ಮತ್ತಷ್ಟು ಹೆಚ್ಚಳ

ಲಕ್ನೋ, ಡಿ 10 : ಒಮಿಕ್ರೋನ್‌ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಸರ್ಕಾರಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ಮಹಾರಾಷ್ಟ್ರ, ದೆಹಲಿ, ಗುಜರಾತ್, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಇಲ್ಲಿ ತನಕ ಈ ಕೇಸ್‌ಗಳು ಪತ್ತೆಯಾಗಿದ್ದಾವೆ. ಡಿ.4 ರಂದು, ಜಿಂಬಾಬ್ವೆಯಿಂದ ಗುಜರಾತ್‌ನ ಜಾಮ್‌ನಗರಕ್ಕೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಲ್ಲಿ, ಒಮಿಕ್ರೋನ್‌ ರೂಪಾಂತರ ಕಂಡುಬಂದಿದ್ದುಅವರ ಸಂಪರ್ಕದಲ್ಲಿದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೂ ಕೂಡ ಸೋಂಕು ಪತ್ತೆಯಾಗಿವೆ.

ದಕ್ಷಿಣ ಆಫ್ರಿಕಾ ಹಿಂದಿರುಗಿದವರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಕನಿಷ್ಠ 10 ಜನರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಗೋವಾಗೆ ಬಂದವರಲ್ಲೂ ಒಮಿಕ್ರೋನ್‌ ಸೋಂಕು : ಲಂಡನ್‌ನಿಂದ ಗೋವಾಕ್ಕೆ ಆಗಮಿಸಿರುವ ಪ್ರಯಾಣಿಕರ ಪೈಕಿ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶುಕ್ರವಾರ ಈ ಕುರಿತು ಟ್ವೀಟ್ ಮಾಡಿ, ಯುಕೆಯಿಂದ ಎಐ-146 ವಿಮಾನ ಆಗಮಿಸಿದ ಬಳಿಕ 237 ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪೈಕಿ ಮೂವರು ಪ್ರಯಾಣಿಕರಲ್ಲಿ ಸೋಂಕು ಕಾಣಿಸಿ ಕೊಂಡಿದೆ ಎಂದು ಹೇಳಿದ್ದಾರೆ. ಮಾರ್ಗಸೂಚಿ ಅನ್ವಯ ಕೋವಿಡ್ ಪಾಸಿಟಿವ್ ಪ್ರಯಾಣಿಕರನ್ನು ಕ್ವಾರಂಟೈ‌ನ್‌ಗೆ ಒಳ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಎಂಟು ದಿನಗಳ ಬಳಿಕ ಅಥವಾ ಅದಕ್ಕಿಂತ ಮೊದಲು ಸೋಂಕಿನ ಲಕ್ಷಣಗಳು ಕಾಣಿಸಿ ಕೊಂಡರೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

ಕರೋನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದಿರುವ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ.

Exit mobile version