ಒಮಿಕ್ರೋನ್‌ ಹಿನ್ನಲೆ ಸಾರ್ವಜನಿಕ ಪ್ರದೇಶಗಳಲ್ಲಿ ಪಾಸ್‌ ವಿತರಿಸಲು ಸರ್ಕಾರ ಚಿಂತನೆ

ಬೆಂಗಳೂರು ಡಿ 17 : ಒಮಿಕ್ರೋನ್ ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಲು ಸರ್ಕಾರ ಪಾಸ್‌ ನೀಡುವ ಬಗ್ಗೆ ಚಿಂತನೆನಡೆಸಿದೆ. ನಿನ್ನೆ ವಿದೇಶದಿಂದ ಬಂದಂತ ಐವರಿಗೆ ಒಮಿಕ್ರಾನ್ ವೈರಸ್ ಸೋಂಕು ಪಾಸಿಟಿವ್ ( Omicron Variant ) ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿತ್ತು. ಹೀಗಾಗಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿತ್ತು. ಇದರಿಂದಾಗಿ ಸಾರ್ವಜನಿಕ ಪ್ರದೇಶಗಳ ಪ್ರವೇಶಕ್ಕೆ ಸರ್ಕಾರ ಪಾಸ್ ವಿತರಣೆ ಮಾಡೋ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೋವಿಡ್ ಲಸಿಕೆ ( Corona Vaccine ) ಪಡೆದವರಿಗೆ ಮಾತ್ರವೇ ಮಾಲ್, ಥಿಯೇಟರ್ ಸೇರಿದಂತೆ ಇತರೆ ಸಾರ್ವನಿಕ ಸ್ಥಳಗಳಲ್ಲಿ ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ ಕೊಡುವ ಅವಕಾಶ ಮಾಡಿಕೊಡುವಂತ ಕಠಿಣ ಕ್ರಮ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.

ಇ-ಪಾಸ್ ವ್ಯವಸ್ಥೆ ಜಾರಿಗೊಳಿಸೋದಕ್ಕೆ ತಾಂತ್ರಿಕ ತಜ್ಞರ ಸಲಹಾ ಸಮಿತಿಯು ಬಿಬಿಎಂಪಿ, ರಾಜ್ಯ ಸರ್ಕಾರ ಸಲಹೆ ಮಾಡಿದೆ ಎನ್ನಲಾಗಿದೆ. ಒಮಿಕ್ರಾನ್ ವೈರಸ್ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳೋದಕ್ಕೆ ಈ ಪಾಸ್ ವ್ಯವಸ್ಥೆಯನ್ನು ಜಾರಿಗೆ ಮಾಡುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಇದಷ್ಟೇ ಅಲ್ಲದೇ ಕೊರೋನಾ ಹೆಚ್ಚಳ ತಡೆ ಮತ್ತು ಒಮಿಕ್ರಾನ್ ಕೇಸ್ ಹತೋಟಿಗಾಗಿ ನೈಟ್ ಕರ್ಪ್ಯೂ ಕೂಡ ಜಾರಿಗೊಳಿಸುವಂತೆ ಸಲಹೆ ಮಾಡಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋದಕ್ಕೆ ಇ-ಪಾಸ್ ಅನ್ನು ಸರ್ಕಾರ ಕಡ್ಡಾಯಗೊಳಿಸೋದಕ್ಕೆ ಮುಂದಾಗಿದ್ದು, ಈ ಪಾಸ್ ಇದ್ದವರಿಗೆ ಮಾತ್ರ ಮಾಲ್, ಥಿಯೇಟರ್, ಪಾರ್ಕ್, ದೇವಸ್ಥಾನ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋದಕ್ಕೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ.

Exit mobile version