ರಿಪಬ್ಲಿಕ್ ಟೆಲಿವಿಷನ್(Republic TV) ಮುಖ್ಯಸ್ಥರಾದ ಆರ್ನಬ್ ಗೋಸ್ವಾಮಿ(Arnab Goswami) ಅವರು ಉಕ್ರೇನ್ ವಿಚಾರದಲ್ಲಿ ಚರ್ಚೆ ನಡೆಸುವ ಸಂದರ್ಭದಲ್ಲಿ ಬಳಸಿದ ಕೆಲ ಪದಗಳನ್ನು ಆರೋಪಿಸಿ ನೇರಪ್ರಸಾರದಲ್ಲೇ ವಿದೇಶಿ ಪ್ಯಾನೆಲಿಸ್ಟ್(Panelist) ಕೂಡಲೇ ಆರ್ನಬ್ ವಿರುದ್ದ ಮಾತಿನ ತಿರುಗೇಟು ನೀಡಿದ್ದಾರೆ. ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿರುವ ಆರ್ನಬ್ ಗೋಸ್ವಾಮಿ ಕಳೆದ ವರ್ಷ ಸಾಕಷ್ಟು ಚರ್ಚೆಯಲ್ಲಿ ಇದ್ದ ವ್ಯಕ್ತಿ. ತಮ್ಮ ಮಾತಿನ ವೈಖರಿಯಿಂದಲೇ ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಈಗ ಅದೇ ಮಾತಿನ ವೈಖರಿ ಮತ್ತೊಮ್ಮೆ ಅವರಿಗೆ ತಲೆಕಡಿಸಿಕೊಳ್ಳುವಂತೆ ಮಾಡಿದೆ.
ಹೌದು, ರಷ್ಯಾ ಉಕ್ರೇನ್ ಮೇಲೆ ಸಾರುತ್ತಿರುವ ಯುದ್ಧ ಕುರಿತು ಲೈವ್ ಸೆಷನ್ ನಲ್ಲಿ ಚರ್ಚಿಸುವಾಗ, ಪಾಶ್ಚಿಮಾತ್ಯ ದೇಶಗಳ ನಿಲುವೇನು ಎಂದು ಆರ್ನಬ್ ಬಳಸಿದ ಬೆನ್ನಲೇ ವಿದೇಶಿ ಟಿವಿ ಶೋ ಪ್ಯಾನಲಿಸ್ಟ್ ಮಾತಿನ ವರಸೆ ಕಂಡು ತರಾಟಗೆ ತೆಗೆದುಕೊಂಡಿದ್ದಾರೆ. ನಾನು ಬಂದಾಗಿನಿಂದ ಗಮನಿಸುತ್ತಿದ್ದೇನೆ ಆರ್ನಬ್ ನಿಮ್ನ ಮಾತು ಒಂದು ಕೂಡ ಸಂಬಂಧಿಸುತ್ತಿಲ್ಲ ಮತ್ತು ನಿಮ್ಮ ಚರ್ಚೆಗೂ ನಿಮ್ನ ಮಾತಿಗೂ ಸಂಬಂಧವೇ ಇಲ್ಲ! ನಿಮ್ಮ ಕಾರ್ಯಕ್ರಮ ನಿಮ್ಮದೇ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಇದಾದ ಬಳಿಕ ಕೆಂಡಮಂಡಲವಾದ ವಿದೇಶಿ ಪ್ಯಾನಲಿಸ್ಟ್ ನಮ್ಮನ್ನು ಮಾತನಾಡಲು ಕರೆಸಿದ್ದ ಅಥವಾ ಮೂಕಪ್ರೇಕಕರಂತೆ ಕುರಿಸಲು ಕರೆದಿದ್ದ ಎಂದು ಕೇಳಿದ್ದಾರೆ.
Arnab ko usi channel pe Anti-national bol diya 🙈 “You are against the interest of your country” pic.twitter.com/GV8kRvjrYk
— Mohammed Zubair (@zoo_bear) March 1, 2022
ಆರ್ನಬ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು ನಿಮ್ಮ ಭಾಷೆಯ ತೀವ್ರತೆಯನ್ನು ಆದಷ್ಟು ತಗ್ಗಿಸಬೇಕು ಇಲ್ಲ ಎಂದರೆ ಸರಿಯಾಗುವುದಿಲ್ಲ ಎಂದು ಹೇಳಿದರು. ಆರ್ನಬ್ ಅವರು ಚೀನಾದ ಪ್ಯಾನೆಲಿಸ್ಟ್ ಅವರೊಡನೆ ಸರಿಯಾಗ ಮಾತನಾಡಿಲ್ಲ ಮತ್ತು ವರ್ತನೆ ಸರಿಯಿಲ್ಲ ಎಂದು ಹೇಳಿದ್ದಾರೆ. ಈ ಲೈವ್ ಕಾರ್ಯಕ್ರಮ ನಡೆದ ಬೆನ್ನಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೀಡಿಯೊಗಳು ಹರಿದಾಡುತ್ತಿದೆ. ಇದರಲ್ಲಿ ಈ ವಿಡಿಯೋ ತುಣುಕು ಕೂಡ ಒಂದು.