‘ಒಂದೆಲಗ’ದಲ್ಲಿದೆ ಆರೋಗ್ಯ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ವೃದ್ಧಿಸಬಹುದು. ಅನೇಕ ಬಾರಿ ನಮಗೆ ಅದರ ಮೌಲ್ಯಗಳೇ ತಿಳಿದಿರುವುದಿಲ್ಲ. ಒಂದೆಲಗ ಇದೊಂದು ಗಿಡಮೂಲಿಕೆಯೂ ಹೌದು, ಇದರ ಹೆಸರೇ ಹೇಳುವಂತೆ ಏಕಪರ್ಣೀ ಎಂದು ಕರೆಯುತ್ತಾರೆ. ಭಾರತದಲ್ಲಿ ಇದು ವಿಶೇಷವಾಗಿ ಸಿಗುತ್ತದೆ. ಇದು ತುಂಬಾ ಸಣ್ಣ ಗಿಡಮೂಲಿಕೆಯಾಗಿದ್ದು, ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವುದು. ಇದನ್ನು ತರಕಾರಿಯಾಗಿಯೂ ಪ್ರತಿನಿತ್ಯ ಸೇವಿಸಬಹುದು ಮತ್ತು ಔಷಧಿಗೆ ಗಿಡಮೂಲಿಕೆಯಾಗಿಯೂ ಬಳಸಬಹುದು. ಇದರಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ವಿಜ್ಞಾನಿಗಳು ದೃಢಪಡಿಸಿದ್ದರೂ ಕೆಲವರು ಇನ್ನೂ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ. ಒಂದೆಲಗದಿಂದ ಆರೋಗ್ಯಕ್ಕೆ, ತ್ವಚೆ ಹಾಗೂ ಕೂದಲಿಗೆ ಯಾವ ರೀತಿಯ ಲಾಭಗಳು ಇವೆ ಎಂಬುದನ್ನು ಇಲ್ಲಿ ತಿಳಿಯೋಣ.

ಈ ಗಿಡಮೂಲಿಕೆಯನ್ನು ಸಾಮಾನ್ಯವಾಗಿ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ಆಯುರ್ವೇದಲ್ಲಿ ಹೇಳಿದೆ. ಮನುಷ್ಯರಲ್ಲಿ ಕಾಣಿಸುವ ವೈರಲ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕಿಗೆ ಇದನ್ನು ಬಳಸಲಾಗುವುದು. ಈ ಗಿಡಮೂಲಿಕೆಯ ಪ್ರಮುಖ ಉಪಯೋಗಗಳೇನು ಎಂಬುದನ್ನು ನೋಡೋಣ.

ಹೀಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಈ ಗಿಡಮೂಲಿಕೆಯು ಪರಿಹಾರವಾಗಿದೆ. ಆದ್ದರಿಂದ ಪ್ರತಿನಿತ್ಯದ ಆಹಾರದಲ್ಲಿ ಈ ಗಿಡಮೂಲಿಕೆಯನ್ನು ಹೆಚ್ಚಾಗಿ ಬಳಸಿದರೆ ಉತ್ತಮ.

Exit mobile version