Bengaluru: ಬೆಂಗಳೂರು ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ? ಈ ಪ್ರಶ್ನೆ ಇದೀಗ ಬೆಂಗಳೂರಿಗರನ್ನು (one day five murders) ಕಾಡುತ್ತಿದೆ. ಇದಕ್ಕೆ ಕಾರಣ ಕಳೆದ
ಮಂಗಳವಾರ ಒಂದೇ ದಿನದಲ್ಲಿ ನಡೆದ ಐದು ಹತ್ಯೆ. ಈ ಎಲ್ಲಾ ಹತ್ಯೆಗಳು (Murder) ಹಳೇ ದ್ವೇಷಕ್ಕೇ ನಡೆದಿವೆ. ರೌಡಿಶೀಟರ್ಸ್, ಅಪರಾಧ ಹಿನ್ನಲೆಯುಳ್ಳವರು ಮತ್ತೆ ಬಾಲ ಬಿಚ್ಚಿದ್ದಾರಾ
ಅನ್ನೋ ಸಂಶಯ (one day five murders) ಮೂಡಲಾರಂಭಿಸಿದೆ.
ಒಂದೆಡೆ ಪೊಲೀಸ್ ವ್ಯವಸ್ಥೆ ‘ಡಿಜಿಟಲೀಕರಣ’ವಾಗುತ್ತಿದೆ. ಮತ್ತೊಂದೆಡೆ ರೌಡಿ, ಪರೋಡಿಗಳು ಮಚ್ಚು ಲಾಂಗುಗಳು ಝಳಪಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು
ಡಿಜಿಟಲ್ ಕ್ರೈಂಗಳ (Digital Crime) ಬಗ್ಗೆಹೆಚ್ಚು ನಿಗಾ ಇಡುತ್ತಿರುವ ಕಾರಣ ಬೇಸಿಕ್ ಪೊಲೀಸಿಂಗ್ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಕಾನೂನಿನ ಭಯವಿಲ್ಲದೆ
ಮಚ್ಚು ಲಾಂಗುಗಳನ್ನು ಹಿಡಿಯುತ್ತಿದ್ದಾರೆ. ಇದಕ್ಕೆ ಉತ್ತಮ ಸಾಕ್ಷಿ ಮಂಗಳವಾರ ಮಹಾನಗರಿಯಲ್ಲಿ ನಡೆದ 5 ಕೊಲೆಗಳು.

ಎಲ್ಲೆಲ್ಲಿ ನಡೆಯಿತು ಹತ್ಯೆ?
ಹತ್ಯೆ – 1 ಉಪ್ಪಾರ ಪೇಟೆ:
ಉಪ್ಪಾರ ಪೇಟೆ(Uppara pete) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುರಳಿ(Murali) ಎಂಬಾತನ ಕೊಲೆ ನಡೆದಿದೆ. ತನಗೆ ಹಲವು ತಿಂಗಳಿನಿಂದ ಅವಮಾನ ಮಾಡುತ್ತಿದ್ದ ಮುರಳಿಯನ್ನು ರೋಹಿತ್ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದ.
ಹತ್ಯೆ – 2 ಚಂದ್ರಾಲೇಔಟ್
ಚಂದ್ರಾಲೇಔಟ್(Chandra Layout) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವಂತೆ ತಾರಿಕ್(Tariq) ಎಂಬಾತನ ಕೊಲೆ ನಡೆದಿದೆ. ಒಂದು ವರ್ಷದಿಂದ ಆರೋಪಿ ನ್ಯಾಮತ್ ಹಾಗು ತಾರಿಕ್ ಹುಡುಗಿ ವಿಚಾರಕ್ಕೆ ಹಗೆ ಬೆಳೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಕಿಡ್ನ್ಯಾಪ್ ಮಾಡಿ ತಾರೀಕ್ ಕೊಲೆ ಮಾಡಲಾಗಿದೆ.
ಹತ್ಯೆ – 3 ಅಮೃತಹಳ್ಳಿ
ಫಣೀಂದ್ರ(Phaneendra) ಹಾಗೂ ವಿನಯ್(Vinay) ಡಬಲ್ ಮರ್ಡರ್ ಅಮೃತಹಳ್ಳಿಯಲ್ಲಿ ನಡೆದಿದೆ. ಅರುಣ್(Arun) ಒಡೆತನದ ಜಿ ನೆಟ್ ಕಂಪನಿ ಬಿಟ್ಟು ಬೇರೆ ಕಂಪನಿಯನ್ನ ಕಟ್ಟಿ ಅರುಣ್
ಇದನ್ನು ಓದಿ: ಬಿಜೆಪಿ –ಜೆಡಿಎಸ್ ಮೈತ್ರಿ : ಈ 7 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ಯಾ ಜೆಡಿಎಸ್..?
ಒಡೆತನದ ಜಿ ನೆಟ್ ಕಂಪನಿಯ ಲಾಸ್ಗೆ ಕಾರಣವಾಗಿದ್ದ ಫಣೀಂದ್ರ. ಈ ಬಗ್ಗೆ ಅರುಣ್ ಫಣೀಂದ್ರನ ಮೇಲೆ ದ್ವೇಷವಿಟ್ಟುಕೊಂಡಿದ್ದ, ನಂತರ ಫೆಲಿಕ್ಸ್ ಜೊತೆ ಪ್ಲಾನ್ ಮಾಡಿ ಫಣೀಂದ್ರ ಹಾಗೂ ವಿನಯ್
ಇಬ್ಬರನ್ನ ಹತ್ಯೆ ಮಾಡಲಾಗಿತ್ತು.

ಹತ್ಯೆ – 4
ಕೇರಳ(Kerala) ಮೂಲದ ವಿನು ಕುಮಾರ್(Vinu Kumar) ಎಂಬಾತನ ಹತ್ಯೆ. ಹೌದು ಕೊಲೆಯಾದ ವಿನುಗೆ ಮೃತ ಫಣೀಂದ್ರ ಹಾಗೂ ಅರುಣ್ ಸಾವಿನ ವಿಚಾರ ತಿಳಿದಿರಲಿಲ್ಲ.
ಆದರೆ ಈತ ಫಣೀಂದ್ರ ಜೊತೆಲಿದ್ದ ಎಂಬ ಕಾರಣಕ್ಕೆ ಹತ್ಯೆಯಾದ.
ಹತ್ಯೆ – 5 ಡಿಜೆ ಹಳ್ಳಿ
ರೌಡಿಶೀಟರ್ ಕಪೀಲ್(Kapil) ಕೊಲೆ. ಈ ಹಿಂದೆ ಜಮೀನು ವಿಚಾರವಾಗಿ ಕಪೀಲ್ ಜೊತೆ ಹಂತಕ ನಖರಾ ಬಾಬು ನಡುವೆ ಕಿರಿಕ್ ಆಗಿತ್ತು. ಹಾಗಾಗಿ ಕಪೀಲ್ ನನ್ನು ಆ ಹಳೆ ದ್ವೇಷದಿಂದ ಹೊಡೆದು ಹಾಕಲು ಪ್ಲಾನ್
ಮಾಡಿದ್ದ. ನಿನ್ನೆ ಕಪೀಲ್ ನನ್ನು ದ್ವಿಚಕ್ರವಾಹನದಲ್ಲಿ ಬಂದ ಆರೋಪಿಗಳು ಡಿಜೆ ಹಳ್ಳಿ ಬಳಿ ಭೀಕರ ಹತ್ಯೆ ಮಾಡಿದ್ದರು. ಈ ಎಲ್ಲಾ ಕೊಲೆಗಳು ಮಂಗಳವಾರ ನಡೆದು ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು.