‘ವಿಜಯ ಟೈಮ್ಸ್ ಇಂಪ್ಯಾಕ್ಟ್’ ಅಪರೇಷನ್ ಖೋಟಾ ನೋಟು ! ಬಯಲಾಯ್ತು ಕೋಟೆ ನಾಡಿನ ರಾಜಕಾರಣಿಯ ದಂಧೆಯ ರಹಸ್ಯ, ಪ್ರಮುಖ ಆರೋಪಿ ಚಂದ್ರಶೇಖರನ ಬಂಧನ

ಕಳೆದ ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ಶಿಬರೂರು ನೇತೃತ್ವದ ವಿಜಯ ಟೈಮ್ಸ್‌ ಕವರ್‌ ಸ್ಟೋರಿ ತಂಡ ಚಿತ್ರದುರ್ಗದಲ್ಲಿರುವ ಖೋಟಾ ನೋಟು ಅಡ್ಡೆಯಲ್ಲಿ ಸ್ಟಿಂಗ್‌ ಆಪರೇಷನ್‌ ನಡೆಸಿತ್ತು. ಈ ಕಾರ್ಯಚರಣೆಯು ರಾಜ್ಯಾದ್ಯಂತ ಸಾಕಷ್ಟು ಸಂಚಲನವನ್ನು ಮೂಡಿಸಿತ್ತು. ಈ ದಂಧೆಯನ್ನು ವಿಜಯ ಟೈಮ್ಸ್‌ ತಂಡ ಬಯಲು ಮಾಡಿದ ಬೆನ್ನಲ್ಲೇ ಚಿತ್ರದುರ್ಗ ಪೊಲೀಸರು ಖೋಟಾ ನೋಟು ದಂಧೆಯ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗ ನಗರಸಭೆಯ  ಸದಸ್ಯ ಚಂದ್ರಶೇಖರ್‌ ಅಲಿಯಾಸ್‌ ಖೋಟಾ ನೋಟು ಚಂದ್ರು  ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯ ಟೈಮ್ಸ್  ಕವರ್‌ ಸ್ಟೋರಿ ಕಾರ್ಯಚರಣೆ :   ಬ್ಲ್ಯಾಕ್ ಮನಿ ವೈಟ್‌ ಮಾಡಿ ಕೊಡ್ತೀವಿ ಅಂತ ಹೇಳೋದು ಇವರ ಮೈನ್‌ ಟ್ರಿಕ್‌. ಇದೇ ಕತೆ ಹೇಳಿ ಅನೇಕರಿಗೆ ಮೋಸ ಮಾಡಿ ಅವರಿಂದ ಕೋಟ್ಯಾಂತರ ಲೂಟಿ ಮಾಡಿದೆ ಈ ಗ್ಯಾಂಗ್. ಈ ಗ್ಯಾಂಗ್‌ನ ಮೋಸಕ್ಕೆ ಬಲಿಯಾದ ಅಮಾಯಕ ನಾಗರಾಜ್ ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡವನ್ನು ಭೇಟಿ ಮಾಡಿದ್ರು. ಅವರು ಈ ಗ್ಯಾಂಗ್‌ ಮಾಡೋ ಮೋಸದ ಕತೆಯನ್ನು ವಿವರಿಸಿದ್ರು.

ಮನೆಯಲ್ಲಿ ಈ ಗ್ಯಾಂಗ್‌ ನಡೆಸುತ್ತಿದ್ದ ಕಳ್ಳ ದಂಧೆಗೆ ಪೂರಕವಾದ ದಾಖಲೆಗಳು ಸಿಕ್ಕಿದವು. ಇಷ್ಟಕ್ಕೆ ನಿಲ್ಲದ ಚಿತ್ರದುರ್ಗ ಪೊಲೀಸರು ಗ್ಯಾಂಗ್ ಸದಸ್ಯರ ಬೆನ್ನು ಹತ್ತಿದರು, ಗ್ಯಾಂಗ್‌ನ ಪ್ರಮುಖ ಆರೋಪಿ ಮೂರ್ತಿ ಹಾಗೂ ನವೀನನ್ನು ಬಂಧಿಸಿ ಜೈಲಿಗೆ ಅಟ್ಟಿದರು.ಇನ್ನು ಹಲವರಿಗೆ ಬಲೆ ಬೀಸಿದ್ದರು.

ಆದ್ರೆ ವಿಜಯ ಟೈಮ್ಸ್‌ನ ಕವರ್‌ ಸ್ಟೋರಿ ತಂಡದ ಆಗಮನದ ಮಾಹಿತಿ ಗೊತ್ತಾದ ಖದೀಮರ ಅಲ್ಲಿಂದ ಕಾಲ್ಕಿತ್ತರು. ಆದ್ರೆ ಇಷ್ಟಕ್ಕೆ ಆ ಗ್ಯಾಂಗನ್ನು ಬಿಡದ ಪೊಲೀಸರ ತಂಡ ಮೋಸ ಮಾಡಿರುವ ಬಗ್ಗೆ ದೂರು ದಾಖಲಿಸಿದ್ರು. ನ್ಯಾಯಾಲಯದ ಆದೇಶ ಪಡೆದು ಮೋಸ ಮಾಡಲು ಬಳಸುತ್ತಿದ್ದ ಮನೆಗೆ ನುಗ್ಗಿಯೇ ಬಿಟ್ರು.ಬೀಗ ಒಡೆದು ಚಂದ್ರು ಗ್ಯಾಂಗ್‌ನ ಹೆಡೆ ಮುರಿ ಕಟ್ಟಲು ಸಿದ್ಧರಾಗಿದ್ದರು. ವಿಜಯ ಟೈಮ್ಸ್‌ ದಾಳಿ ನಡೆಸಿದ 2 ವಾರದ ಒಳಗೆ ಚಿತ್ರದುರ್ಗ ಪೊಲೀಸರು ಪ್ರಮುಖ ಆರೋಪಿಯಾದ ಚಂದ್ರಶೇಖರ್‌ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃತ್ಯ  ಮಾಡುತ್ತಿದ್ದ ವಿಧಾನ:-  ಚಿತ್ರದುರ್ಗ ನಗರದ ಕೋಟೆ ರಸ್ತೆ ವಾಸಿ ಹಾಗೂ ಹಾಲಿ ಚಿತ್ರದುರ್ಗ ನಗರಸಭಾ ಸದಸ್ಯನಾದ ಚಂದ್ರಶೇಖರ ಬಿನ್ ನರಸಿಂಹಲು ರವರು ಮದ್ಯವರ್ತಿಗಳ ಮುಖಾಂತರ ಹಾಗೂ ತಮ್ಮ ಕುಟುಂಬ ಸದಸ್ಯರ ಸಹಾಯದೊಂದಿಗೆ ಗಿರಾಕಿಗಳನ್ನು ( ಜನಸಾಮಾನ್ಯರು) ಸಂಪರ್ಕಿಸಿ,

 1) ಒಂದು ಪಟ್ಟು ಹಣಕ್ಕೆ ಮೂರು ಪಟ್ಟು ಹಣಕೊಡುವುದಾಗಿ ನಂಬಿಸಿ, ಅವರಿಗೆ ಚಿತ್ರದುರ್ಗ ನಗರದ ಫಿಲ್ಟರ್ ಹೌಸ್ ಹಿಂಭಾಗದ ರಸ್ತೆಯಲ್ಲಿ ತಾನು ವ್ಯವಹಾರ ಮಾಡುವ ವಾಸದ ಮನೆಗೆ ಕರೆಸಿಕೊಂಡು, ಗಿರಾಕಿಗಳಿಗೆ ನೋಟಿನ ಅಳತೆಯಲ್ಲಿ ಕಟ್ ಮಾಡಿದ ಕಪ್ಪು ಬಣ್ಣದ ಪೇಪರ್ ಕಟಿಂಗ್‌ಗಳನ್ನು ಕಟ್ಟುಗಳನ್ನಾಗಿ ಕಟ್ಟಿ,  ಕಟ್ಟುಗಳ ಮೇಲ್ಮಾಗದಲ್ಲಿ, ಮತ್ತು ಕೆಳಭಾಗದಲ್ಲಿ ಒಂದೊಂದು ಅಸಲಿ ನೋಟುಗಳನ್ನು ಇಟ್ಟು, ಆ ಕಟ್ಟುಗಳನ್ನು ಬ್ಯಾಗ್ ನಲ್ಲಿ ಸುಂಬಿ, ತಮ್ಮ ಬಳಿ ಬರುವ ಗಿರಾಕಿಗಳಿಗೆ ನೀವುಗಳು ಕೊಡುವ ಒಂದು ಪಟ್ಟು ಹಣಕ್ಕೆ ನಾವುಗಳು ಕೊಡುವ ಮೂರು ಪಟ್ಟು ಹಣ ಇದೇ ಆಗಿರುತ್ತದೆಂದು  ನಂಬಿಸುವುದು.

2) ಗಿರಾಕಿಗಳ ಗಮನವನ್ನು ಬೇರೆಡೆ ಸೆಳೆದು, ಬ್ಯಾಗ್ ನಿಂದ ಈಗಾಗಲೇ ತಯಾರಾಗಿಟ್ಟುಕೊಂಡ ಸದರಿ ಒಂದು ಅಥವಾ ಎರಡು ನೋಟುಗಳನ್ನು ಎತ್ತಿಕೊಂಡು, ಸದರಿ ನೋಟನ್ನು ಯಾವುದೋ ಕೆಮಿಕಲ್‌ ಬಳಸಿ, ತೊಳೆದು, ಆ ನೋಟನ್ನು  ಪಾರ್ಟಿಗಳಿಗೆ ನೀಡಿ, ಅವರುಗಳಿಗೆ ಕಪ್ಪು ಬಣ್ಣದ  ನೋಟು ಗಳನ್ನು ಕೆಮಿಕಲ್ ನಿಂದ ತೊಳೆದಾಗ ಅಸಲಿಯಾಗುತ್ತದೆ, ನಿಮಗೆ ಅನುಮಾನ ಬಂದಲ್ಲಿ ಈ ನೋಟನ್ನು ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಚೆಕ್‌ ಮಾಡಿಸಿ ಎಂದು ಹೇಳಿ ನಂಬಿಸುತ್ತಿದ್ದರು.

3 ) ಗಿರಾಕಿಗಳಿಗೆ ನಗರದಲ್ಲಿ ಯಾವುದಾದರೂ ರಸ್ತೆಗೆ ಬರುವಂತೆ ಹೇಳಿ ಕಳುಹಿಸಿ, ನಂತರ ಆರೋಪಿಗಳು, ಗಿರಾಕಿಗಳ ಬಳಿ ಮೂರು ಪಟ್ಟು ಹಣವನ್ನು ತೆಗೆದುಕೊಂಡು ಹೋಗುವಂತೆ ಮಾಡಿ, ಅದೇ ವೇಳೆಗೆ ಆರೋಪಿತರ ಕಡೆಯ ಯಾರಾದರೂ ಒಬ್ಬರು ಪೊಲೀಸ್ ಸಮವಸ್ತ್ರದಲ್ಲಿ ವಿಜಲ್ ಹಾಕುತ್ತಾ ಸ್ಥಳಕ್ಕೆ ಬಂದಾಗ, ಆರೋಪಿಗಳು ಪೊಲೀಸ್, ಪೊಲೀಸ್ ಅಂತ ಹೇಳಿ ಎಲ್ಲರೂ ಅಲ್ಲಿಂದ ಓಡಿಹೋಗಿ, ನಂತರ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡು, ಮೋಸ ಮಾಡುತ್ತಿರುತ್ತಾರೆ.

 4) .ಚಂದ್ರಶೇಖರ ಬಿಸ್ ನರಸಿಂಹಲು ಈತನು ಈ ರೀತಿ ಅನೇಕ ವಿಧವಾದ ರೀತಿಯಲ್ಲಿ ಜನರಿಗೆ ಒಂದು ಪಟ್ಟು ಹಣಕ್ಕೆ ಮೂರು ಪಟ್ಟು ಹಣ ನೀಡುವುದಾಗಿ ಮೋಸ ಮಾಡುತ್ತಿರುತ್ತಾನೆ. ಈತನ ವಿರುದ್ಧ ಚಿತ್ರದುರ್ಗ ಜಿಲ್ಲೆಯಲ್ಲಿ ಹಾಗೂ ಇತರ ಕಡೆ ಹಲವಾರು ಪ್ರಕರಣಗಳು ದಾಖಲಾಗಿರುತ್ತವೆ

Exit mobile version