ಓವೈಸಿ ಮನೆ ಮೇಲೆ ಹಿಂದೂ ಸೇನಾ ಕಾರ್ಯಕರ್ತರಿಂದ ದಾಳಿ

ಅಸಾದುದ್ದೀನ್ ಓವೈಸಿ ಮನೆಯ ಮೇಲೆ ದಾಳಿ ನಡೆದಿರುವ ದೃಶ್ಯ

ದೆಹಲಿ ಸೆ 23 :  ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲೀಸ್​-ಎ-ಇತ್ತೆಹಾದುಲ್ ಮುಸ್ಲಿಮೆನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ದೆಹಲಿ ಅಧಿಕೃತ ನಿವಾಸದ ಮೇಲೆ ಇತ್ತೀಚೆಗೆ ಕೆಲವು ಹಿಂದೂ ಸೇನಾ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮನೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.

ದೆಹಲಿಯ ಅಶೋಕ ರಸ್ತೆಯಲ್ಲಿರುವ ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸತ್ ಸದಸ್ಯನ ಮನೆಯನ್ನು ಧ್ವಂಸ ಮಾಡಿದ ಆರೋಪದ ಮೇಲೆ ಐದು ಮಂದಿ ಹಿಂದೂ ಸೇನೆ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈಶಾನ್ಯ ದೆಹಲಿಯ ಮಂಡೋಲಿ ಪ್ರದೇಶದ ನಿವಾಸಿಗಳಾದ ಐವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ದೀಪಕ್ ಯಾದವ್ ತಿಳಿಸಿದ್ದಾರೆ.

ಮನೆಗೆ ಹಾಕಿದ್ದ ನಾಮಫಲಕನ್ನು ಛಿದ್ರಗೊಳಿಸಿರುವ ಗೂಂಡಾಗಳು, ಮನೆಯಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆಳಿನ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಮು ಪ್ರಚೋದಿತ ಘೋಷಣೆಗಳನ್ನು ಕೂಗುತ್ತಿದ್ದ ವರು ನನ್ನನ್ನ ಸಾಯಿಸುವ ಬೆದರಿಕೆ ಹಾಕಿದ್ದಾರೆ. ಇವರ ಈ ವರ್ತನೆಯಿಂದ ಮನೆಯಲ್ಲಿದ್ದ ಕೆಲಸದವನ ಮಗ ಭಯಭೀತನಾಗಿದ್ದಾರೆ ಎಂದು ಓವೈಸಿ ತಿಳಿಸಿದ್ದಾರೆ

ನನ್ನ ಮನೆಗೆ ಮೂರನೇ ಬಾರಿ ನಡೆಯುತ್ತಿರುವ ದಾಳಿ ಇದಾಗಿದೆ. ನನ್ನ ಮನೆ ಬಳಿ ಗೃಹ ಸಚಿವರ ನಿವಾಸವಿದೆ. ಪ್ರಧಾನ ಮಂತ್ರಿಗಳ ನಿವಾಸ ಕೇವಲ ಎಂಟು ನಿಮಿಷದಷ್ಟು ದೂರದಲ್ಲಿದೆ. ಸಂಸದನ ಮನೆಯೇ ಇಲ್ಲಿ ಸರಕ್ಷಿತವಾಗಿಲ್ಲ ಎಂದ ಮೇಲೆ ಜನ ಸಾಮಾನ್ಯರಿಗೆ ಭದ್ರತೆ ಕೊಡುವ ಬಗ್ಗೆ ನೀವು ಹೇಗೆ ಮಾತನಾಡುತ್ತೀರಿ ಎಂದು ಓವೈಸಿ ಗೃಹ ಸಚಿವರಿಗೆ ಪ್ರಶ್ನಿಸಿದ್ದಾರೆ.

Exit mobile version