ನವದೆಹಲಿ, ಮೇ. 10: ಆಮೆರಿಕಾದಿಂದ ಭಾರತಕ್ಕೆ 2200 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಾಗೂ 10 ಸಾವಿರ ಆಕ್ಸಿಮೀಟರ್ ಸಹ ಭಾರತಕ್ಕೆ ರವಾನೆಯಾಗಿದೆ. ಕೇಂದ್ರ ಸರ್ಕಾರವು ಇವುಗಳನ್ನ ತಕ್ಷಣ ಕೆಲ ರಾಜ್ಯಗಳಿಗೆ ಹಂಚಿಕೆ ಮಾಡಿದ್ದು, ಕೇಂದ್ರ ನೀತಿ ಆಯೋಗ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ಕರ್ನಾಟಕಕ್ಕೆ ಹೆಚ್ಚು ಪಾಲು ಸಂದಾಯವಾಗಿದೆ ಎಂಬುದು ಸಮಧಾನಕರ ವಿಷಯ.
ಕೊರೊನಾ ಸಂಕಷ್ಟ ಕಾಲದಲ್ಲಿ ಅಮರಿಕದಿಂದ ಬಂದಿಳಿದಿರುವ ವೈದ್ಯಕೀಯ ನೆರವಿನಲ್ಲಿ ಕರ್ನಾಟಕಕ್ಕೆ 400 ಆಕ್ಸಿಜನ್ ಕಾನ್ಸೆಂಟ್ರೇಟರ್ಗಳು (Oxygen Concentrators), ಮಹಾರಾಷ್ಟ್ರಕ್ಕೆ 300 ಆಕ್ಸಿಜನ್ ಕಾನ್ಸೆಂಟ್ರೇಟರ್ ನೀಡಿಕೆಯಾಗಿದೆ. ಇನ್ನು ಪಲ್ಸ್ ಆಕ್ಸಿಮೀಟರ್ (Oximeters) ಪೈಕಿ ಕರ್ನಾಟಕಕ್ಕೆ 1,308 ನೀಡಲಾಗಿದೆ. ಮಹಾರಾಷ್ಟ್ರಕ್ಕೆ 2,144 ಆಕ್ಸಿಮೀಟರ್ಗಳು ಹೋಗಿವೆ. ಕೇರಳಕ್ಕೆ 1048 ಆಕ್ಸಿಮೀಟರ್ ನೀಡಲಾಗಿದೆ.