ಮನೆ ಬಾಗಿಲಿಗೇ ಆಕ್ಸಿಜನ್‌ ಕಾನ್ಸಂಟ್ರೇಟರ್‌, ಜಿಲ್ಲೆಗೊಂದು ಆಕ್ಸಿಜನ್‌ ಬ್ಯಾಂಕ್‌: ದೆಹಲಿ ಸರ್ಕಾರದ ಮಹತ್ವದ ನಿರ್ಧಾರ

ಹೊಸದಿಲ್ಲಿ, ಮೇ. 15: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ 2ನೇ ಅಲೆಯ ಆತಂಕ ಉಲ್ಬಣಿಸಿದ್ದು, ಇದನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಮನೆ ಮನೆಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಒದಗಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.

ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾದ ಪರಿಣಾಮ ‌ಹಲವೆಡೆ ಆಕ್ಸಿಜನ್ ಕೊರತೆ ಕಂಡುಬಂದ ಪರಿಣಾಮ, ಹೆಚ್ಚಿನ ಸಾವು ‌ನೋವುಗಳು ಸಂಭವಿಸಿತ್ತು. ಈ ಹಿನ್ನೆಲೆ ಆಕ್ಸಿಜನ್ ಪೂರೈಸುವ ಸಲುವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿರುವ ಸಿಎಂ ಅರವಿಂದ ಕೇಜ್ರಿವಾಲ್, ಬಹಳಷ್ಟು ಮಂದಿ ಆಕ್ಸಿಜನ್‌ ಸಿಗದೆ ಮನೆಯಲ್ಲೇ ಸಾವಿಗೀಡಾಗುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೌಲಭ್ಯವಿಲ್ಲದೆ ಸಾವಿಗೀಡಾಗುತ್ತಿರುವವರನ್ನೂ ನೋಡಿರಬಹುದು. ಈ ಎರಡೂ ವರ್ಗದ ರೋಗಿಗಳಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲೆಗೊಂದು ಆಕ್ಸಿಜನ್‌ ಬ್ಯಾಂಕ್‌ ರಚಿಸಲಾಗಿದೆ.

ಆಕ್ಸಿಜನ್‌ ಅಗತ್ಯ ಇರುವವರು ಕರೆ ಮಾಡಿ ಮನೆ ಬಾಗಿಲಿಗೇ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಅನ್ನು ಪಡೆಯಬಹುದಾಗಿದೆ. ಇದನ್ನು ಅಳವಡಿಸಿಕೊಳ್ಳುವುದು ಹೇಗೆ ಎಂದು ಬಲ್ಲ ತಾಂತ್ರಿಕ ತಜ್ಞರೊಬ್ಬರು ನಿಮಗೆ ಆಕ್ಸಿಜನ್‌ ಒದಗಿಸುವ ತಂಡದಲ್ಲಿ ಇರಲಿದ್ದಾರೆ. ಬಳಕೆದಾರರಿಗೆ ಇದರ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ. ಕೋವಿಡ್‌ ಸೊಂಕಿತರಿಗೆ ನೆರವಾಗಬಲ್ಲ ಸ್ವಯಂ ಸೇವಕರು ಈ ಯೋಜನೆಗೆ ಕೈ ಜೋಡಿಸಬಹುದು.

ಆಸ್ಪತ್ರೆಯಿಂದ ಬಿಡುಗಡೆಯಾಗಿಯೂ ಆಮ್ಲಜನಕದ ಅಗತ್ಯತೆ ಇರುವವರಿಗೂ ಈ ಸೇವೆ ಲಭ್ಯವಾಗಲಿದೆ. ನಮ್ಮ ರಾಜ್ಯದ ವೈದ್ಯರು ರೋಗಿಗಳೊಂದಿಗೆ ಸಂಪರ್ಕದಲ್ಲಿರಲಿದ್ದಾರೆ. ಏನೇ ಸಮಸ್ಯೆ ಇದ್ದರೂ 1031 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

Latest News

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.

ದೇಶ-ವಿದೇಶ

8ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ; `ಜನಾದೇಶಕ್ಕೆ ದ್ರೋಹʼ : ಬಿಜೆಪಿ

164 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಬಿಹಾರದಲ್ಲಿ ಹೊಸ ಸರ್ಕಾರ ರಚಿಸಲು ಏಳು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಇಂದು ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.