ಆಕ್ಸಿಜನ್ ಟ್ಯಾಂಕ್ ಸ್ಫೋಟ: 82 ಮಂದಿ ಸಾವು; ಬಾಗ್ದಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ

ಬಾಗ್ದಾದ್, ಏ. 26: ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡ ಪರಿಣಾಮ 82 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಇಕಾರ್ ರಾಜಧಾನಿ ಬಾಗ್ದಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಬಾಗ್ದಾದ್ ನಗರದ ಐಬಿಎನ್ ಕತಿಬ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಸಂಗ್ರಹಿಸಲಾಗಿತ್ತು. ಆದರೆ ಕಳೆದ ರಾತ್ರಿ ಆಕ್ಸಿಜನ್ ಟ್ಯಾಂಕಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.‌ ಅಲ್ಲದೇ ಈ ಬೆಂಕಿಯ ಕಿಡಿ ನಿಧಾನವಾಗಿ ಆಸ್ಪತ್ರೆಯನ್ನು ಆವರಿಸಿದೆ.

ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ಕೊರೊನಾ ರೋಗಿಗಳು, ರೋಗಿಗಳ ಕೇರ್ ಟೇಕ್ ಮಾಡುತ್ತಿದ್ದ 12 ಮಂದಿ ಸೇರಿದಂತೆ ವೈದ್ಯರು ಹಾಗೂ ದಾದಿಯರು ಸೇರಿದಂತೆ ‌ಒಟ್ಟು 82 ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬಾಗ್ದಾದ್ ಆಂತರಿಕ ಸಚಿವಾಲಯ, ಇಂತಹ ದುರಂತಗಳು ಮರುಕಳಿಸಿದ ರೀತಿಯಲ್ಲಿ ಎಲ್ಲಾ ಆಸ್ಪತ್ರೆಗಳ ಪರಿಶೀಲನೆ ತಿಳಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಇದೇ ರೀತಿಯ ಆಕ್ಸಿಜನ್ ಸೋರಿಕೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ರೋಗಿಗಳು ಮೃತಪಟ್ಟಿದ್ದರು. ಈ ಘಟನೆ ಇಡೀ ದೇಶಾದ್ಯಂತ ಕಳವಳ ಮೂಡಿಸಿತ್ತು.

Exit mobile version