ಭಾರತದ ಮಾಜಿ ಅಥ್ಲೀಟ್‌ ಮೇಲೆ ವಂಚನೆ ಪ್ರಕರಣ ದಾಖಲು

ಭಾರತದ ಮಾಜಿ ಅಥ್ಲೀಟ್‌ ಒಲಿಂಪಿಕ್‌ ತಾರೆ ಪಿ.ಟಿ. ಉಷಾ ವಿರುದ್ದ ಪೊಲೀಸರು ವಂಚನೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ . ಕೇರಳದ ಕೋಯಿಕ್ಕೋಡ್ ಪೊಲೀಸರು ಭಾರತದ ‘ಚಿನ್ನದ ಹುಡುಗಿ’ ಪಿ.ಟಿ ಉಷಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾಜಿ ಅಫೀಟ್‌ ಜೆಮ್ಮಾಜೋಸೆಫ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಉಷಾ ಮತ್ತು ಇತರ ಆರು ಮಂದಿ ಐಪಿಸಿ 420 (ವಂಚನೆ ಮತ್ತು ಅಪ್ರಾಮಾಣಿಕತೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ.

ಕೋಯಿಕ್ಕೋಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಜೋಸೆಫ್ ಅವರು ನೀಡಿದ ದೂರಿನ ಆಧಾರದ ಮೇಲೆ ಕ್ರಮ ಜರುಗಿಸಲಾಗಿದೆ. ಶುಕ್ರವಾರ ಪ್ರಕರಣ ದಾಖಲಾಗಿದ್ದು, ಶೀಘ್ರವೇ ತನಿಖೆ ಆರಂಭವಾಗಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹೊಸ ಅಪಾರ್ಟೆಂಟ್ ಹೊಂದುವ ನಿರೀಕ್ಷೆಯಲ್ಲಿ ಜೆಮ್ಮಾ ಜೋಸೆಫ್ ಅವರು 46 ಲಕ್ಷ ರೂ.ಗಳನ್ನು ಉಷಾಗೆ ಪಾವತಿಸಿದ್ದಾರೆ. ಆದರೆ, ನಿಗದಿತ ಸಮಯದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವುದಾಗಿ ಉಷಾ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಜೋಸೆಫ್ ದೂರಿನಲ್ಲಿ ವಿವರಿಸಿದ್ದಾರೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಬಿಲ್ಡರ್‌ಗಳ ಮೇಲೆ ನಿಗಾ ಇಡುವ ನಿಯಂತ್ರಕ ಸಂಸ್ಥೆ ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ದೂರುದಾರರು ಸಂಪರ್ಕಿಸಿದ್ದಾರೆ.

Exit mobile version