ಜೇನುಕುರುಬ ಸೋಮಣ್ಣಗೆ ಪದ್ಮಶ್ರೀ, ನಟ ಚಿರಂಜೀವಿಗೆ ಪದ್ಮಭೂಷಣ ಸೇರಿ 132 ಸಾಧಕರಿಗೆ ಪದ್ಮ ಗೌರವ

New Delhi: 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಗೊಳಿಸಿದೆ. ಕರ್ನಾಟಕದ (Karnataka) 9 ಸಾಧಕರು (Padma awards – 2024) ಸೇರಿ ಒಟ್ಟು 132 ಸಾಧಕರನ್ನು

ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ (Padma awards – 2024) ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ

ಇನ್ನು 5 ಸಾಧಕರಿಗೆ ಪದ್ಮ ವಿಭೂಷಣ, 17 ಮಂದಿಗೆ ಪದ್ಮಭೂಷಣ ಹಾಗೂ 110 ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಇದರಲ್ಲಿ ವಿಶೇಷವಾಗಿ ಕರ್ನಾಟಕದ ಇಬ್ಬರು ಸಾಧಕರಿಗೆ ಪದ್ಮಶ್ರೀ

ಪ್ರಶಸ್ತಿ ಒಲಿದಿದೆ. ಸಾಮಾಜಿಕ ಕಾರ್ಯಕರ್ತೆ ಪ್ರೇಮ ಧನರಾಜ್ ಹಾಗೂ ಬುಡಕಟ್ಟು ಸಮುದಾಯದ ಮೈಸೂರಿನ ಜೇನುಕುರುಬ ಸೋಮಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ದಕ್ಕಿದೆ. ಸೋಮಣ್ಣ ಅವರು ಕಳೆದ

4 ದಶಕಗಳಿಂದ ಜೇನು ಕುರುಬ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ.


ವೈದ್ಯೆ ಹಾಗೂ ಸಮಾಜ ಸೇವಕಿಯಾಗಿರುವ ಪ್ರೇಮ ಧನರಾಜ್ ಅವರು, ಸುಟ್ಟುಹೋದ ದೇಹಗಳನ್ನು ಸರ್ಜರಿ ಮೂಲಕ ಸರಿಪಡಿಸುವುದು, ಅವರಲ್ಲಿ ಜೀವನೋತ್ಸಾಹ ಮೂಡಿಸುವ ಕಾರ್ಯವನ್ನು

ಮಾಡುತ್ತಾ ಬಂದಿದ್ದಾರೆ. ಸುಟ್ಟಗಾಯ ತಡೆಗಟ್ಟುವಿಕೆ ಜಾಗೃತಿ ಮತ್ತು ನೀತಿ ಸುಧಾರಣೆಗಾಗಿ ಹೋರಾಡುತ್ತಿದ್ದಾರೆ.

ಪದ್ಮ ಪ್ರಶಸ್ತಿಗಳಿಗೆ ಭಾಜನರಾದ 9 ಕನ್ನಡಿಗರು :


ಪದ್ಮಭೂಷಣ ಪ್ರಶಸ್ತಿಗೆ ಕನ್ನಡಿಗ ಸೀತಾರಾಮ್ ಜಿಂದಾಲ್ (ಉದ್ಯಮ), ಪದ್ಮಶ್ರೀ ಪ್ರಶಸ್ತಿಗೆ ರೋಹನ್ ಮಾಚಂಡ ಬೋಪಣ್ಣ (ಕ್ರೀಡೆ), ಶಶಿ ಸೋನಿ (ವ್ಯಾಪಾರ ಮತ್ತು ಕೈಗಾರಿಕೆ). ಪ್ರೇಮಾ ಧನರಾಜ್

(ವೈದ್ಯಕೀಯ), ಅನುಪಮಾ ಹೊಸಕೆರೆ (ಕಲೆ), ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ (ವೈದ್ಯಕೀಯ), ಶ್ರೀಧರ್ ಮಕಮ್ ಕೃಷ್ಣಮೂರ್ತಿ (ಸಾಹಿತ್ಯ ಮತ್ತು ಶಿಕ್ಷಣ), ಕೆ.ಎಸ್.ರಾಜಣ್ಣ (ಸಾಮಾಜಿಕ ಕಾರ್ಯ),

ಸೋಮಣ್ಣ (ಸಾಮಾಜಿಕ ಕಾರ್ಯ),

ಕಲೆ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಭಾಜನರಾದವರು

ವೈಜಯಂತಿಮಾಲಾ ಬಾಲಿ
ಮೆಗಾಸ್ಟಾರ್ ಚಿರಂಜೀವಿ
ಪದ್ಮ ಸುಬ್ರಹ್ಮಣ್ಯಂ (ತಮಿಳುನಾಡು)

ಕಲೆ ಕ್ಷೇತ್ರದಲ್ಲಿ ಪದ್ಮ ಭೂಷಣ ಪ್ರಶಸ್ತಿ ಭಾಜನರಾದವರು

ಮಿಥುನ್ ಚಕ್ರವರ್ತಿ
ದತ್ತಾತ್ರೇಯ ಅಂಬಾದಾಸ್ ಮೇಲು
ಉಷಾ ಉತ್ತುಪ್
ತಮಿಳಿನ ನಟ ವಿಜಯಕಾಂತ್

ಇದನ್ನು ಓದಿ: ನಮ್ಮ ಸರಕಾರ ಪ್ರಭು ಶ್ರೀರಾಮನ ಈ 10 ಆದರ್ಶಗಳನ್ನು ನನಸಾಗಿಸಲು ಪ್ರಯತ್ನಿಸಲಿದೆ: ದೆಹಲಿ ಸಿಎಂ ಕೇಜ್ರಿವಾಲ್ ಘೋಷಣೆ

Exit mobile version