ಕನ್ನಡ ಕಣ್ಮಣಿಗಳಾದ ‘ವೃಕ್ಷಮಾತೆ’, ‘ಅಕ್ಷರ ಸಂತನಿಗೆ’ ಪದ್ಮ ಗೌರವ. ಬರಿಗಾಲಲ್ಲೇ ಪ್ರಶಸ್ತಿ ಸ್ವೀಕರಿಸಿದ ಸರಳತೆ ಮೆರೆದ ಸಾಧಕರು.


Tulasi Bommegowda and Harekala Hajabba has received 2020 Padmashri award from President Ramanath Kovind today in Rashtrapati Bhavan for their social work.
ಕನ್ನಡ ಕಣ್ಮಣಿಗಳಿಗೆ ಪದ್ಮಶ್ರೀ ಪ್ರಶಸ್ತಿ ಗೌರವ. ಪದ್ಮ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ ತುಳಸಜ್ಜಿ. ಬರಿಗಾಲಲ್ಲಿ ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಸಂತ ಹಾಜಬ್ಬ. ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ಕೋವಿಂದ್‌

ವೃಕ್ಷಮಾತೆ, ಸಾವಿರಾರು ಮರಗಳ ಸಾಕು ತಾಯಿ ತುಳಸಿಗೌಡ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಇಂದು ಪದ್ಮಶ್ರೀ ಪ್ರಶಸ್ತಿಯ ಗೌರವ ಸಂದಿದೆ. ರಾಷ್ಟ್ರಪತಿ ರಮಾನಾಥ್‌ ಕೋವಿಂದ್ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ರು.
ವೃಕ್ಷಮಾತೆಗೆ ಪದ್ಮಶ್ರೀ: ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಳ್ಳಿಯ ಹಾಲಕ್ಕಿ ಜನಾಂಗದ ತುಳಸೀ ಗೌಡ ಅವರಿಗೆ ರಾಷ್ಟ್ರಪತಿ ರಮಾನಾತ್ ಕೋವಿಂದ್‌ ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಕೃತಿಯ ಮಡಲಲ್ಲಿ ಹುಟ್ಟಿ ಬೆಳೆದ ತುಳಸಜ್ಜಿಗೆ ಮರಗಿಡಗಳೇ ಪ್ರಪಂಚ. ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಅರಣ್ಯ ಇಲಾಖೆಯಲ್ಲಿ ದುಡಿದ ತುಳಸಜ್ಜಿ ನೆಟ್ಟು ಬೆಳೆಸಿದ ಮರಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು.
ಎರಡನೆ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ತುಳಸಜ್ಜಿಗೆ ಶಾಲೆ ಮೆಟ್ಟಿಲೇರುವ ಭಾಗ್ಯ ಸಿಗಲಿಲ್ಲ. ಹೊಟ್ಟೆ ಪಾಡಿಗೆ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ರು. ಆ ಬಳಿಕ ಅವರು ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿಗೆ ಸೇರಿ ಗಿಡ ಮರಗಳ ಆರೈಕೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು ಇವರ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ,ಕನ್ನಡ ಸಾಹಿತ್ಯ ಪ್ರಶಸ್ತಿ,”ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ” ಹೀಗೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಈ ಇವರಿಗೆ ಪದ್ಮಶ್ರೀ ಪ್ರಶಸ್ತಿಯ ಗೌರವವೂ ಲಭಿಸಿದೆ.
ಅಕ್ಷರ ಸಂತನಿಗೆ ಪದ್ಮ ಗೌರವ : ಅಕ್ಷರ ಸಂತ, ಮಂಗಳೂರಿನ ಹರೇಕಳ ಹಾಜಬ್ಬ ಅವರಿಗೂ ಇಂದು ಪದ್ಮಶ್ರೀ ಪ್ರಶಸ್ತಿಯ ಗೌರವ ಸಂದಿದೆ. ಸರಳತೆಯ ಪ್ರತೀಕವಾಗಿರುವ ಹಾಜಬ್ಬ ಅವರು ಬರಿಗಾಲಲ್ಲೇ ನಡೆದು ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಬಡ ಮಕ್ಕಳಿಗೆ ಅಕ್ಷರ ಭಾಗ್ಯ ನೀಡೋ ಸಲುವಾಗಿ ಕಿತ್ತಳೆ ಮಾರಿ ಶಾಲೆ ನಿರ್ಮಿಸಿದ್ರು ಹರೇಕಳ ಹಾಜಬ್ಬ. ಅವರು ಸಮಾಜಕ್ಕಾಗಿ ಮಾಡಿದ ಹೋರಾಟವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಗೌರವ ನೀಡಿದೆ.
ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮೆರೆದ ಸಾಧಕರಿಗೆ 2020 ಹಾಗೂ 2021ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

Exit mobile version