ಬೇರೆಯವರ ಮೊಬೈಲ್‌ ಮುಟ್ಟಿದರೆ 6 ತಿಂಗಳು ಜೈಲು ಶಿಕ್ಷೆ !

pakistan horrible law

ಇಸ್ಲಾಮಾಬಾದ್ ನ 27 : ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವಿವಿಧ ರೀತಿಯ ಕಾನೂನುಗಳು ಇವೆ. ಕೆಲವೊಂದು ಸಾಮಾನ್ಯವಾಗಿದ್ದರೆ, ಇನ್ನೂ ಕೆಲವು ಕಠಿಣವಾಗಿದೆ. ಆದರೆ, ನಮ್ಮ ನೆರೆಯ ದೇಶ ಪಾಕಿಸ್ತಾನದಲ್ಲಿ ಜಾರಿಗೆ ತಂದಿರುವ ಹೊಸತೊಂದು ಕಾನೂನು ಭಾರೀ ವಿವಾದಕ್ಕೆ ಕಾರಣವಾಗಿದೆ.

ಹೌದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸರ್ಕಾರ ವಿಚಿತ್ರವಾದ ಕಾನೂನು ಜಾರಿಗೊಳಿಸಿದೆ. ಇದರ ಪ್ರಕಾರ, ಯಾವುದೇ ಒಬ್ಬ ವ್ಯೆಕ್ತಿ ಇನ್ನೊಬ್ಬರ ಮೊಬೈಲ್‌ ಮುಟ್ಟಿದ್ದರೆ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ ಮೊಬೈಲ್ ಮೂಲಕ ಉಂಟಾಗುವ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾನೂನು ಜಾರಿಗೊಳಿಸಲಾಗಿದೆಯಂತೆ. ಆದರೆ, ನಿಯಮಕ್ಕೆ ಅಲ್ಲಿನ ಯುವಜನತೆಯಿಂದ ಭಾರಿ ಖಂಡನೆ ವ್ಯಕ್ತವಾಗಿದೆ. ಕಾನೂನು ಹಿಂಪಡಿಯುವಂತೆ ಪ್ರತಿಭಟನೆಗಳು ಶುರುವಾಗಿವೆ. ಇದು ಮಾತ್ರವಲ್ಲದೆ, 18 ವರ್ಷ ಮೇಲ್ಪಟ್ಟ ಯುವಕ- ಯುವತಿಯರು ಕಡ್ಡಾಯವಾಗಿ ಮದುವೆಯಾಗಬೇಕು ಎಂಬ ನಿಯಮವೂ ಇದೆ. ಅತ್ಯಾಚಾರದಂತಹ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಈ ನಿಯಮ ರೂಪಿಸಲಾಗಿದೆ

Exit mobile version