ಗೆಲವು ಸಿಗದಿದ್ದರೂ ಭಾರತೀಯರ ಪ್ರಿತಿ ಸಿಕ್ಕಿತು – ಪಾಕ್ ಆಟಗಾರ

ಭುಬನೇಶ್ವರ್, ಡಿ. 3: ನಮಗೆ ಸಿಕ್ಕ ಪ್ರೀತಿ ಮತ್ತು ಸ್ನೆಹ ನಮ್ಮೆಲ್ಲರಿಗೂ ಅಮೂಲ್ಯವಾದುದು ಸೋಲು ಗೆಲವು ಬೇರೆ ವಿಷಯ ಎಂದು ಪಾಕ್‌ ಆಟಗಾರನೊಬ್ಬ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನ ತಂಡದ ಆಟಗಾರರು ಭಾರತದಲ್ಲಿನ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದು, ಇಲ್ಲಿನ ಆತಿಥ್ಯ ಮತ್ತು ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಈ ವಿಶ್ವಕಪ್​ನಲ್ಲಿ ಕ್ವಾರ್ಟರ್​ಫೈನಲ್ ತಲುಪಲು ವಿಫಲವಾಗಿದೆ. ಆದರೆ, ಟೂರ್ನಿಯಲ್ಲಿ ನಾವು ಗೆದ್ದಿದ್ದೇವೋ, ಸೋತಿದ್ದೇವೋ ಎಂಬುದಕ್ಕಿಂತ ಹೆಚ್ಚಾಗಿ ನಮಗೆ ಭಾರತದಲ್ಲಿ ಸಿಕ್ಕ ಪ್ರೀತಿ ಮತ್ತು ಸ್ನೇಹ ಬಹಳ ಅಮೂಲ್ಯವಾದುದು ಎಂದು ಪಾಕಿಸ್ತಾನದ ಕಿರಿಯ ಹಾಕಿ ಆಟಗಾರರು ತಿಳಿಸಿದ್ದಾರೆ.

“ಭುಬನೇಶ್ವರ್ ನಗರದ ಕಳಿಂಗ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡುವುದರಿಂದು ಹಿಡಿದು ಟೂರ್ನಿಯ ಪಂದ್ಯ ಆಡುವವರೆಗೆ ಪ್ರತಿಯೊಂದೂ ನಮಗೆ ಖುಷಿ ಕೊಟ್ಟಿದೆ. ಗೆಲುವು ಅಥವಾ ಸೋಲು ಬೇರೆ ವಿಷಯ. ಆದರೆ, ಇಲ್ಲಿ ನಮಗೆ ಸಿಕ್ಕ ಪ್ರೀತಿ ಮತ್ತು ಸ್ನೇಹ ನಿಜಕ್ಕೂ ನಮಗೆಲ್ಲರಿಗೂ ಅಮೂಲ್ಯವಾದುದು. ಒಡಿಶಾ ಮತ್ತು ಹಾಕಿ ಇಂಡಿಯಾ ಮಾಡಿದ ಎಲ್ಲಾ ವ್ಯವಸ್ಥೆಗಳೂ ಉತ್ತಮವಾಗಿವೆ. ಹಾಕಿಗೆ ಕಳಿಂಗ ಸ್ಟೇಡಿಯಂ ಅತ್ಯುತ್ತಮ ಸ್ಥಳ” ಎಂದು ಪಾಕಿಸ್ತಾನದ ಕಿರಿಯ ಹಾಕಿ ಆಟಗಾರ ಅಬ್ದುಲ್ ಸಾಹಿದ್ ಹೇಳಿದ್ದಾರೆ

Exit mobile version