ಹೆಬ್ಬಾಳದಲ್ಲಿ ಪಂಚರತ್ನಯಾತ್ರೆ: ರಾಜಧಾನಿಯಲ್ಲಿ ಮೊಳಗಲಿದೆ ಜೆಡಿಎಸ್‌ ರಣಕಹಳೆ

ಬೆಂಗಳೂರಿನ ಹೆಬ್ಬಾಳದಲ್ಲಿ ಇಂದು ಮೊಳಗಲಿದೆ ಜಾತ್ಯತೀತ ಜನತಾ ದಳದ (JDS)) ಚುನಾವಣಾ ರಣ ಕಹಳೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ರಥ ಯಾತ್ರೆಗೆ (pancharatna in hebbal) ಬೆಂಗಳೂರಿನ ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಾಲಯದಲ್ಲಿ ಚಾಲನೆ ನೀಡಲಿದ್ದಾರೆ.

ಬೆಂಗಳೂರು ನಗರದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಈ ಪಂಚರತ್ನ ರಥ ಯಾತ್ರೆ, ಬೆಂಗಳೂರಿನ ಮೇಖ್ರಿ ಸರ್ಕಲ್‌ನಿಂದ ಪ್ರಾರಂಭಗೊಂಡು ನಾಗಶೆಟ್ಟಿ ಹಳ್ಳಿ ಬಸ್ ನಿಲ್ದಾಣ, ಭೂಪಸಂದ್ರ ಮುಖ್ಯ ರಸ್ತೆ,

ಹೆಬ್ಬಾಳ ಫ್ಲೈಓವರ್ ಸುಮಂಗಲಿ ಸೇವಾಶ್ರಮ ರಸ್ತೆ, ಕನಕನಗರ ರಸ್ತೆ, ದೇವೇಗೌಡ ರಸ್ತೆ, ರವೀಂದ್ರನಾಥ ಟ್ಯಾಗೋರ್ ವೃತ್ತ ಹೀಗೆ ಹೆಬ್ಬಾಳ ವಿಧಾನಸಭಾ (pancharatna in hebbal) ಕ್ಷೇತ್ರಾದ್ಯಂತ ಸಾಗಲಿದೆ.

ಈ ಸಂದರ್ಭಲ್ಲಿ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ ಸಯ್ಯದ್‌ ಮೋಹಿದ್ ಅಲ್ತಾಫ್‌ ಅವರ ಪರವಾಗಿ ಜೆಡಿಎಸ್‌ ಮುಖಂಡರು ಮತಯಾಚಿಸಲಿದ್ದಾರೆ.

ಡಾ. ಸಯ್ಯದ್‌ ಮೋಹಿದ್ ಅಲ್ತಾಫ್‌ ಅವರು ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬೈರತಿ ಸುರೇಶ್‌ ಹಾಗೂ ಬಿಜೆಪಿ ನಾಯಕರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗುತ್ತಿದ್ದಾರೆ.

ಮನೆಮನೆಗೆ ಪಂಚರತ್ನ ಯೋಜನೆ ಎಂಬ ಹೆಸರಿನಲ್ಲಿ ನಡೆಯಲಿರುವ ಈ ರಥಯಾತ್ರೆಯ ವೇಳೆ ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ಜನರಿಗೆ ನೀಡಲಿರುವ ಶಿಕ್ಷಣ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ರೈತ ಕಲ್ಯಾಣ,

ವಸತಿ ಹಾಗೂ ಯುವ/ಮಹಿಳಾ ಸಬಲೀಕರಣ ಮುಂತಾದ ಯೋಜನೆಗಳ ಕುರಿತು ಜನರಿಗೆ ವಿವರಿಸಿ ಅವರ ಬೆಂಬಲ ಪಡೆಯಲಿದ್ದಾರೆ.

https://youtu.be/a-5NZADVZqc

ಹೆಬ್ಬಾಳ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಆರಿಸಿದ್ರೆ ಸುಸಜ್ಜಿತ ಸರ್ಕಾರಿ ಮಾದರಿ ಶಾಲೆ, ಹೈಟೆಕ್‌ ಆಸ್ಪತ್ರೆಗಳು, ಯುವಕರಿಗೆ ಉದ್ಯೋಗವಕಾಶಗಳು,

ಮಹಿಳೆಯರಿಗೆ ಸಾಲ ಸೌಲಭ್ಯಗಳು, ವಸತಿಹೀನ ಕಾರ್ಮಿಕರಿಗೆ, ಬಡವರಿಗೆ ಮನೆಗಳು ಹೀಗೆ ಕ್ಷೇತ್ರಕ್ಕೆ ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಅನ್ನೋದನ್ನು ವಿವರಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಪಂಚರತ್ನ ಯಾತ್ರೆಯು ಸಂಜೆ ಏಳು ಗಂಟೆಗೆ ಹೆಚ್‌ಎಂಟಿ ಮೈದಾನದಲ್ಲಿ ಬೃಹತ್‌ ಜೆಡಿಎಸ್‌ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ.

ಈ ಸಮಾವೇಶದಲ್ಲಿ ಹೆಚ್‌ಡಿ ಕುಮಾರಸ್ವಾಮಿ, ಜೆಡಿಎಸ್‌ನ ರಾಷ್ಟ್ರಿಯ ಉಪಾಧ್ಯಕ್ಷರಾದ ಉಬೇದುಲ್ಲಾ ಖಾನ್‌ ಆಜ್ಮಿ ಇನ್ನಿತ ಜೆಡಿಎಸ್‌ನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಇದೇ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಪ್ರಮುಖ ನಾಯಕರು ಕುಮಾರ ಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ.

Exit mobile version