ಪಂಚಾಯತ್ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ಸಿಗರು ಗೋವು ಕಡಿಯಿರಿ ಎಂದು ಹೇಳಲಿ: ಕೆ.ಎಸ್. ಈಶ್ವರಪ್ಪ

ಬೆಂಗಳೂರು, ಡಿ. 07: ಗೋಹತ್ಯೆ ನಿಷೇಧದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ನಡುವಿನ ಮಾತಿನ ಸಮರ ಮುಂದುವರಿದಿದೆ.

ಸೋಮವಾರ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗೋವನ್ನು ನಾವು ತಾಯಿ ಸ್ವರೂಪ ಎಂದು ಕರೆಯುತ್ತೇವೆ. ಹೀಗಿರುವಾಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಎಲ್ಲಿ ಬೇಕಾದರೂ ಗೋವು ಕಡಿಯಿರಿ ಅಂತ ಕಾಂಗ್ರೆಸ್ ನವರು ಪಂಚಾಯತ್ ಪ್ರಣಾಳಿಕೆಯಲ್ಲಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಅವರು, ಗೋಹತ್ಯೆ ವಿಷಯದಲ್ಲಿ ಕೋಟಿ ಕೋಟಿ ಜನರ ನಂಬಿಕೆಗೆ ಯಾಕೆ ಧಕ್ಕೆ ತರ್ತೀರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಕ್ರಾಸ್ ಬ್ರೀಡ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದು ಸೂಕ್ತ ಪದ ಬಳಕೆಯಲ್ಲ. ಇಂದಿರಾಗಾಂಧಿ ಮದುವೆ ಆಗಿದ್ಯಾರಿಗೆ? ಇಂದಿರಾಗಾಂಧಿ ಮದುವೆ ಆಗಿದ್ದು ಕ್ರಾಸ್ ಬ್ರೀಡ್ ಅಂತ ಸಿದ್ದರಾಮಯ್ಯ ಒಪ್ಪಿಕೊಳ್ತಾರಾ. ಕ್ರಾಸ್ ಬ್ರೀಡ್ ಅನ್ನೋದು ನಾಯಿಗಳಿಗೆ ಆಗೋದು. ಕಾಂಗ್ರೆಸ್ ನವರಿಗೆ ನಾಯಿಗಳಿಗೂ ಮನುಷ್ಯ ರಿಗೂ ಇರುವ ವ್ಯತ್ಯಾಸ ಗೊತ್ತಿಲ್ವಾ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಅವರಿಗೆ ಈ ದೇಶದ ಸಂಸ್ಕೃತಿಯೇ ಗೊತ್ತಿಲ್ಲ. ಯಾರ ಹೆಣ್ಣು ಮಗಳನ್ನು ಯಾರು ಬೇಕಾದರೂ ಎತ್ತಿಕೊಂಡು ಹೋಗೋ ಪರಿಸ್ಥಿತಿ ಇದೆ. ಪ್ರೀತಿ ಮಾಡಿದಂಗೆ ನಾಟಕ ಮಾಡಿ ಕಂಡವರ ಮನೆ ಹೆಣ್ಣು ಮಕ್ಕಳನ್ನು ಎತ್ಕೊಂಡು ಹೋಗಿ ವಿದೇಶದಲ್ಲಿ ಮಾರಾಟ ಮಾಡೋ ಘಟನೆ ನಮ್ಮ ಬಳಿ ಇದೆ. ನನ್ನ ಅಥವಾ ಅವರ ಮಕ್ಕಳನ್ನೂ ಎತ್ಕೊಂಡು ಹೋದ್ರೆ ಆಗತ್ತಾ. ಇಂದು ಲೆಕ್ಕವಿಲ್ಲದಷ್ಟು ಜನ ಹೆಣ್ಣುಮಕ್ಕಳನ್ನು ಪ್ರೀತಿ ಮಾಡಿದಂತೆ ನಾಟಕ ಮಾಡ್ತಾರೆ. ಆದರೆ ಅಂತರ್ಜಾತಿ ಮದುವೆ ನಾನು ವಿರೋಧ ಮಾಡ್ತಿಲ್ಲ. ಬದಲಾಗಿ ಲವ್ ಜಿಹಾದ್ ನಂತ ಮೋಸವನ್ನು ವಿರೋಧ ಮಾಡ್ತೇವೆ.

Exit mobile version