ಪ್ಯಾರಾಲಿಂಪಿಕ್‌ ಭಾರತಕ್ಕೆ ಮತ್ತೊಂದು ಚಿನ್ನ

ಟೋಕಿಯೋ ಆ 30 : ಟೋಕಿಯೋ ದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಚಿನ್ನದ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ.

ಇಂದು ನಡೆದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಸುಮಿತ್ 68.55 ಮೀ ಎಸೆಯುವ ಮೂಲಕ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತ ಈ ಪ್ಯಾರಾಲಿಂಪಿಕ್‌ನಲ್ಲಿ ಒಂದೇ ದಿನ 2 ಚಿನ್ನದ ಪದಕವನ್ನು ಬೇಟೆಯಾಡಿದೆ. ಬೆಳಗ್ಗೆ ನಡೆದ ಶೂಟಿಂಗ್ ವಿಭಾಗದಲ್ಲಿ ಅವನಿ ಲೇಖರ ಮೊದಲ ಸ್ವರ್ಣದ ಪದಕವನ್ನು ಪಡೆದುಕೊಂಡಿದ್ದರು

Exit mobile version