ಶಿವಮೊಗ್ಗ ಪ್ರಕರಣ: ಇದೆಲ್ಲಾ ಏನ್ ಹೊಸದಾಗಿ ನಡೆಯುತ್ತಾ? ಗೃಹ ಸಚಿವ ಪರಮೇಶ್ವರ್ ಅಸಡ್ಡೆಉತ್ತರ

Shimoga: ಈದ್‌ ಮಿಲಾದ್‌ (Eid Milad) ಹಬ್ಬದ ವೇಳೆ ಶಿವಮೊಗ್ಗದಲ್ಲಿ (Shimoga) ಕಲ್ಲು ತೂರಾಟ ನಡೆದಿದ್ದು, ಎರಡು ಧರ್ಮಗಳ ನಡುವೆ ಕೋಮು ಸಂಘರ್ಷ ನಡೆದಿದ್ದರೂ ಇದೆಲ್ಲ ಏನ್‌ ಹೊಸತ್ತಾಗಿ ನಡೆಯುತ್ತಿದಿದೆಯೇ ಎಂದು ಗೃಹ ಸಚಿವ ಪರಮೇಶ್ವರ ಅಸಡ್ಡೆ ಉತ್ತರ ನೀಡಿದ್ದಾರೆ.

Shimoga Case

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ (G.Parameshwara) ಅವರು ನಗರದಲ್ಲಿ ನಡೆದಿರುವ ಹಿಂದೂ ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ಹಾಗೂ ಕಲ್ಲು ತೂರಾಟದಿಂದ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಇಡೀ ರಾಜ್ಯವೇ ತಲೆ ತಗ್ಗಿಸುವಂತ ಘಟನೆ ನಡೆದಿದ್ದರೂ ಶಿವಮೊಗ್ಗದಲ್ಲಿ ಇದೆಲ್ಲಾ ಏನ್‌ ಹೊಸದಾಗಿ ಮಾಡ್ತಾರಾ? ಎಂದು ಅಸಡ್ಡೆ ಉತ್ತರವನ್ನು ನೀಡಿದ್ದಾರೆ.

ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ಆಗಲು ಬಿಟ್ಟಿಲ್ಲ. ಅದನ್ನ ಮೀರಿ ಹೋದ್ರೆ ಕ್ರಮ ತಗೆದುಕೊಳ್ತಾರೆ . ಕಲ್ಲು ತೂರಾಟ ಮಾಡಿದ್ರು ಎಂಬ ಮಾಹಿತಿ ಇದೆ. ಈ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ಏನಾಗಿದೆ ಎಂದು ನಮಗೆ ಗೊತ್ತಿದೆ, ಹೇಳಿಕೆ ಕೊಡುವವರು ಕೊಡ್ತಾರೆ. ನಾವು ಮೊದಲೇ ಕಟ್ಟೆಚ್ಚರ ವಹಿಸಿದ್ದೆವು. ಇದೆಲ್ಲವೂ ಅನುಮತಿ ಇಲ್ಲದೆ ಆಗಿದೆ ಹಾಗಾಗಿ ಇಂತಹದಕ್ಕೆಲ್ಲೆ ಪ್ರಚೋದನೆ ಕೊಡಲ್ಲ ಎಂದು ತಿಳಿಸಿದರು.

ಸೋಮವಾರ ಬೆಂಗಳೂರಿನಲ್ಲಿ (Bengaluru) ಶಿವಮೊಗ್ಗ ಗಲಾಟೆ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಶಿವಮೊಗ್ಗದಲ್ಲಿ ಇದೆಲ್ಲ ಏನ್ ಹೊಸದಾಗಿ ನಡೆಯುತ್ತಾ? ದೊಡ್ಡ ಪ್ರಮಾಣದ ಗಲಾಟೆಯನ್ನು ಪೋಲೀಸರು ತಪ್ಪಿಸಿದ್ದಾರೆ. ಎರಡೂ ಗುಂಪಿನ 4 ಜನರನ್ನ ಬಂಧಿಸಿದ್ದಾರೆ. ಬ್ಯಾನರ್ ಕಟ್ತಾರೆ, ಪೋಸ್ಟರ್ ಹಾಕ್ತಾರೆ , ಇದನ್ನ ಕೆಲವರು ಅಡ್ವಾನ್ಟೇಜ್ (Advantage) ಆಗಿ ತಗೋತಾರೆ. ಶಿವಮೊಗ್ಗದ ಘಟನೆಗೆ ಕಾರಣ ಏನು ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version