ಬೆಂಗಳೂರು, ಡಿ. 26: ಪರಪ್ಪನ ಅಗ್ರಹಾರ ಜೈಲು ಸೇರಿರುವ ರೌಡಿಯೊಬ್ಬ ಜೈಲಿನಲ್ಲಿ ಕೇಕ್ ಕತ್ತರಿಸಿ ಭರ್ಜರಿಯಾಗಿ ಬರ್ತ್ ಡೇ ಆಚರಿಸಿರುವ ವಿಡಿಯೊವೊಂದು ವೈರಲ್ ಆಗಿದ್ದು, ಪರಪ್ಪನ ಅಗ್ರಹಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಬ್ರಮಣ್ಯನಗರ ಠಾಣೆಯ ರೌಡಿ ರಿಜ್ವಾನ್ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಗೂಂಡಾ ಕಾಯಿದೆಯಡಿ ಬಂಧಿತನಾಗಿದ್ದಾನೆ. ಈ ವೇಳೆ ಆತನ ಜನ್ಮ ದಿನದಂದು ಆತನಿರುವ ಜೈಲಿನ ಒಂದು ಬ್ಯಾರಕ್ನ ದ್ವಾರದಿಂದ ಪ್ರವೇಶಿಸುವ ಆತ ಕೇಕ್ ಇಟ್ಟಿರುವ ಜಾಗಕ್ಕೆ ಬರುತ್ತಾನೆ. ಅಲ್ಲಿಗೆ ಆತನ ಸಹಚರರು ಸ್ವಾಗತ ಕೋರಿ ಕೈ ಕುಲುಕಿ ಕೇಕ್ ಕಟ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೌಡಿ ರಿಜ್ವಾನ್ನನ್ನು ಸಹಚರರು ಹಿರೋ ಹಾಗೇ ಬಿಂಬಿಸಲು ಯತ್ನಿಸಿದ್ದಾರೆ ಕೂಡ. ಇದಲ್ಲದೇ ಜೈಲಿನೊಳಿಗಿನ ಸವಲತ್ತುಗಳು ಕೂಡ ಯಾವ ರೆಸಾರ್ಟ್ಗಿಂತ ಕಮ್ಮಿ ಇಲ್ಲ ಎನ್ನಲಾಗಿದ್ದು, ವಿಡಿಯೋ ಮಾಡಲು ಮೊಬೈಲ್ ನೀಡಿದ್ದು, ಯಾರು? ಯಾವಾಗ ನೀಡಿದ್ರು? ಜೈಲಿನೊಳಗೆ ಇವೆಲ್ಲವೂ ಹೇಗೆ ಹೋಗೋಕ್ಕೆ ಸಾಧ್ಯ ಅಂತ ಸಾರ್ವಜನಿಕರ ಪ್ರಶ್ನೆಯಾಗಿದೆ.