ನವದೆಹಲಿ ನ 25 : ಕೊರನಾ ಮತ್ತು ಬೆಲೆ ಏರಿಕೆ ಬಿಸಿಯಿಂದ ದೇಶದಲ್ಲಿ ಜನ ಈಗಾಗಲೇ ತತ್ತರಿಸಿ ಹೋಗಿದ್ದಾರೆ ಇದಕ್ಕೆ ಇನ್ನೂ ಹೊರೆ ಎಂಬಂತೆ ಇದೀಗ .ಜನಪ್ರಿಯ ಪಾರ್ಲೆ ಕಂಪನಿಯ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಿದೆ.
ಪಾರ್ಲೆ-ಜಿ ಬಿಸ್ಕತ್, ಹೈಡ್ ಅಂಡ್ ಸೀಕ್ ಮತ್ತು ಕ್ರಾಕ್ಜಾಕ್ನಂತಹ ಜನಪ್ರಿಯ ಬ್ರಾಂಡ್ಗಳನ್ನು ಹೊಂದಿರುವ ಪಾರ್ಲೆ ಶೇ 5-10 ರಷ್ಟು ಬೆಲೆಯನ್ನು ಹೆಚ್ಚಿಸಿದೆ. ಗ್ಲುಕೋಸ್ ಬಿಸ್ಕತ್ತು ಪಾರ್ಲೆ- ಜಿ ಬೆಲೆ ಈಗ 6-7 ಶೇಕಡಾ ಹೆಚ್ಚಾಗಿದೆ.
ಸಕ್ಕರೆ, ಗೋಧಿ ಮತ್ತು ಖಾದ್ಯ ತೈಲದಂತಹ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಉತ್ಪನ್ನಗಳ ದರ ಹೆಚ್ಚಳ ಅನಿವಾರ್ಯ ಎಂದು ಸಂಸ್ಥೆ ಹೇಳಿಕೊಂಡಿದೆ