3000 ಮೀ. ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಅಥ್ಲಿಟ್ ಪಾರುಲ್ ಚೌಧರಿ

Athlete

ಇಂದು ಮಹಿಳೆ ಸಮಾಜದಲ್ಲಿ ಸಾಕಷ್ಟು ಹೆಸರು ಗಳಿಸುತ್ತಿದ್ದಾಳೆ, ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿ ಮುನ್ನುಗ್ಗುತ್ತಿದ್ದಾಳೆ(Parul chaudhary makes a record).

ಪುರುಷನಿಗೆ ಸಮನಾಗಿ ವಿದ್ಯೆ ಗಳಿಸಿ, ಕೆಲಸಕ್ಕೆ ಸೇರಿ ಸಂಪಾದನೆ ಮಾಡಿ ತನ್ನಷ್ಟಕ್ಕೆ ಬದುಕು ರೂಪಿಸುವಷ್ಟು ಬುದ್ದಿವಂತಳೂ, ಸಮರ್ಥಳೂ ಇದ್ದಾಳೆ.

ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಅಪಾರ. ಇದಕ್ಕೆ ಒಂದು ಉದಾಹರಣೆ ಪಾರುಲ್ ಚೌಧರಿ.

ಭಾರತದ ಮಹಿಳಾ ಟ್ರ್ಯಾಕ್ ಅಥ್ಲೀಟ್ ಪಾರುಲ್ ಚೌಧರಿ(Parul chaudhary makes a record) ಅವರು ಭಾನುವಾರ ಯುಎ ಸನ್‌ಸೆಟ್ ಟೂರ್‌ನ 3000 ಮೀಟರ್ ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. 
https://vijayatimes.com/moulana-badruddin-statement/

27 ವರ್ಷದ ಚೌಧರಿ ಅವರು ಮಹಿಳೆಯರ 3000 ಮೀ ಓಟವನ್ನು 8:57.19 ರಲ್ಲಿ ಪೂರ್ಣಗೊಳಿಸುವ ಮೂಲಕ ಸೂರಿಯಾ ಲೋಗನಾಥನ್ ಅವರ ಆರು ವರ್ಷಗಳ ಹಳೆಯ 9:04.5ರ ದಾಖಲೆಯನ್ನು ಮುರಿದರು.


ಓಟದ ಆರಂಭಿಕ ಹಂತದಲ್ಲಿ ಅವರು ಐದನೇ ಸ್ಥಾನದಲ್ಲಿದ್ದರು. ಆದರೆ ಕೊನೆಯ ಎರಡು ಲ್ಯಾಪ್‌ಗಳಲ್ಲಿ ಅವರು ತಮ್ಮ ವೇಗವನ್ನು ಹೆಚ್ಚಿಸಿಕೊಂಡು ಮೂರನೇ ಸ್ಥಾನವನ್ನು ಆಕ್ರಮಿಸಿದರು.


ಇದೇ, ಜುಲೈ 15 ರಿಂದ ಚೌಧರಿ ಅವರು ಯುಎಸ್ಎನ ಒರೆಗಾನ್‌ನಲ್ಲಿ 2022 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
Exit mobile version