ಪಠಾಣ್ ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗೊಳಿಸಿ : ದೆಹಲಿ ಹೈಕೋರ್ಟ್

New Delhi : ಕಳೆದ ವಾರ ಪಠಾಣ್(Pathan) ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ದೆಹಲಿ ಹೈಕೋರ್ಟ್ ಸೋಮವಾರ ಯಶ್ ರಾಜ್ ಫಿಲ್ಮ್ಸ್ (Pathan movie on prime video) ನಿರ್ಮಾಣದ ಚಿತ್ರದಲ್ಲಿ ಕೆಲವು ಬದಲಾವಣೆಗಳು ಮಾಡುವಂತೆ ನಿರ್ದೇಶಿಸಿದೆ!

ಸದ್ಯ ಹೊಸ ವರದಿಯಲ್ಲಿ ತಿಳಿಸಲಾಗಿರುವ ಮಾಹಿತಿ ಅನುಸಾರ, ಶ್ರವಣ ಮತ್ತು ದೃಷ್ಟಿಹೀನ ಜನರು ಈ ಸಿನಿಮಾವನ್ನು ಓಟಿಟಿ (Pathan movie on prime video) ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಲು ಹಿಂದಿ ಭಾಷೆಯಲ್ಲಿಸಬ್ ಟೈಟಲ್‌ಗಳು,

ಟೈಟ ಮತ್ತು ಆಡಿಯೊ ವಿವರಣೆಯನ್ನು ಸೇರಿಸಲು ನ್ಯಾಯಾಲಯವು ನಿರ್ಮಾಣ ಸಂಸ್ಥೆಗೆ ತಿಳಿಸಿದೆ.


ಮರು ಪ್ರಮಾಣೀಕರಣಕ್ಕಾಗಿ ಮತ್ತೊಮ್ಮೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ಗೆ(CBFC) ಬದಲಾವಣೆಗಳನ್ನು ಸಲ್ಲಿಸಲು ಯಶ್ ರಾಜ್ ಫಿಲ್ಮ್ಸ್ಗೆ ತಿಳಿಸಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ನಾಯಕ ನಟನಾಗಿ ಶಾರುಖ್ ಖಾನ್(Sharukh khan), ನಟಿಯಾಗಿ ದೀಪಿಕಾ ಪಡುಕೋಣೆ(Deepika padukone) ಕಾಣಿಸಿಕೊಂಡರೆ, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಠಾಣ್ ಚಿತ್ರ ಈ ಹಿಂದೆ ನಿಗದಿಪಡಿಸಿದಂತೆ ಜನವರಿ 25, 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ!

ಇತ್ತೀಚಿಗೆ ಬಾರ್ ಅಂಡ್ ಬೆಂಚ್ ನೀಡಿರುವ ಮಾಹಿತಿ ಪ್ರಕಾರ, ಫೆಬ್ರವರಿ 20 ರೊಳಗೆ ಚಿತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಲು ನಿರ್ಮಾಪಕರಿಗೆ ನ್ಯಾಯಾಲಯ ಸೂಚಿಸಿದೆ.

ಮಾರ್ಚ್ 10 ರೊಳಗೆ ನಿರ್ಧಾರವನ್ನು ತೆಗೆದುಕೊಳ್ಳುವಂತೆ CBFC ಗೆ ಆದೇಶಿಸಿದೆ.

ಸದ್ಯ ಪಠಾಣ್ ಚಿತ್ರವು ಜನವರಿ 25 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಆದ್ರೆ, ಚಿತ್ರಮಂದಿರಗಳಲ್ಲಿ ಪಠಾಣ್ ಪ್ರದರ್ಶನಕ್ಕೆ ನ್ಯಾಯಾಲಯವು(Court) ಸದ್ಯ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂಬುದು ಗಮನಾರ್ಹ!

ಇದನ್ನೂ ಓದಿ: https://vijayatimes.com/congress-simply-giving-offers/

ಪಠಾಣ್ ಚಿತ್ರವು ಏಪ್ರಿಲ್‌ನಲ್ಲಿ ಪ್ರೈಮ್ ವಿಡಿಯೋದಲ್ಲಿ(Prime video) ಸ್ಟ್ರೀಮ್ ಆಗಲಿದೆ ಎಂದು ಹೇಳಿದ್ದು, ನಿರ್ಮಾಪಕರು ಆ ಸಮಯದೊಳಗೆ ಬದಲಾವಣೆ ಮಾಡಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಇತ್ತೀಚೆಗೆಷ್ಟೇ ಪಠಾಣ್ ಚಿತ್ರತಂಡವು ಚಿತ್ರದ ಅಧಿಕೃತ ಟ್ರೇಲರ್(trailer) ಅನ್ನು ಯೂಟ್ಯೂಬ್(youtube) ಅಲ್ಲಿ ಅನಾವರಣಗೊಳಿಸಿದ್ದು,

ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಹಿಂದೆ ಬಿಡುಗಡೆಯಾದ ಚಿತ್ರದ ಮೊದಲ ಹಾಡು ಬೇಷರಂ ರಂಗ್(Besharang), ದೇಶದಲ್ಲಿ ಭಾರಿ ವಿವಾದವನ್ನು ಹುಟ್ಟುಹಾಕಿತ್ತು!

Exit mobile version