Visit Channel

ರಾಜ್ಯದಲ್ಲಿ 100ರ ಗಡಿ ದಾಟಿದ ಡೀಸೆಲ್

ನವದೆಹಲಿ ಅ 23 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ ಮತ್ತೆ ಏರಿಕೆಯಾಗಿದ್ದು, ದೇಶಾದ್ಯಂತ ಮತ್ತೊಂದು ದಾಖಲೆಯ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ 35 ಪೈಸೆ ಏರಿಕೆ ಆಗಿ 107.24 ರೂ.ಗೆ ತಲುಪಿದೆ.  ಡೀಸೆಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿ 95.97 ರೂ.ಗೆ ಬಂದು ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 110.98 ರೂ. ಇದ್ದು, ಡೀಸೆಲ್ ಬೆಲೆ ಲೀಟರ್‌ಗೆ 101.86 ರೂ. ಆಗಿದೆ. ಮುಂಬೈನಲ್ಲಿ, ಪೆಟ್ರೋಲ್ ಅನ್ನು ಲೀಟರ್‌ಗೆ  113.12 ರೂ.ಗೆ ಖರೀದಿಸಬಹುದು, ಈಗ 34 ಪೈಸೆ ಹೆಚ್ಚಾಗಿದೆ ಮತ್ತು ಡೀಸೆಲ್ ಬೆಲೆ ಒಂದು ಲೀಟರ್‌ಗೆ 104 ರೂ. 37 ಪೈಸೆ ದುಬಾರಿಯಾಗಿದೆ.

ಚೆನ್ನೈನಲ್ಲಿ, ಒಂದು ಲೀಟರ್ ಪೆಟ್ರೋಲ್ ಬೆಲೆ 104.22 ರೂ, ಇದು 30 ಪೈಸೆ ದುಬಾರಿಯಾಗಿದೆ. ಶನಿವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 33 ಪೈಸೆ ಏರಿಕೆಯಾಗಿ 100.25 ರೂ.ಗೆ ತಲುಪಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.78, 34 ಪೈಸೆ ದುಬಾರಿ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 99.08 ರೂ, ಇದು 35 ಪೈಸೆ ಹೆಚ್ಚಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.