9ನೇ ದಿನ 150ರ ಗಡಿ ದಾಟುತ್ತ ಪೆಟ್ರೋಲ್? ; ಸತತ 08ನೇ ಬಾರಿಗೆ ಇಂಧನ ಬೆಲೆಯಲ್ಲಿ ಹೆಚ್ಚಳ!

petrol

ಕಳೆದ 09 ದಿನಗಳಲ್ಲಿ ಸತತವಾಗಿ 8ನೇ ಬಾರಿಗೆ ಇಂಧನ(Petrol-Diesel) ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಹೌದು, ಮತ್ತೊಮ್ಮೆ ಪೆಟ್ರೋಲ್(Petrol) ಬೆಲೆಯಲ್ಲಿ 30 ಪೈಸೆ ಹೆಚ್ಚಳ ಮಾಡಲಾಗಿದೆ! ಮೊದಲ ದಿನದಲ್ಲಿ 80 ಪೈಸೆ ಹೆಚ್ಚಳ ಮಾಡುವ ಮುಖೇನ ಗ್ರಾಹಕರಿಗೆ ದೊಡ್ಡ ಹೊಡೆತ ನೀಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿತ್ತು! ಆದ್ರೆ ಇಂದು ದಿನದಿಂದ ದಿನಕ್ಕೆ, ಹಂತ ಹಂತವಾಗಿ ಪೈಸೆಯಲ್ಲಿ ಏರಿಕೆ ಮಾಡಿ ರೂಪಾಯಿ ಮೌಲ್ಯವನ್ನು ತಲುಪಿಸಿದೆ.

ಭಾರತದಾದ್ಯಂತ ಮಂಗಳವಾರ ಪೆಟ್ರೋಲ್ ಬೆಲೆ 105.62 ಪೈಸೆ ಇತ್ತು, ಆದ್ರೆ ಅದೇ ಇಂದು 105.94 ಪೈಸೆಗೆ ದಿಢೀರ್ ಏರಿಕೆ ಕಂಡಿದೆ. ಒಟ್ಟಾರೆಯಾಗಿ ಕಳೆದ 5 ದಿನಗಳ ಪೈಸೆ ಲೆಕ್ಕಾಚಾರ ಮಾಡಿ ನೋಡುವುದಾದರೆ ಬರೋಬ್ಬರಿ 5.60 ಪೈಸೆ ಹೆಚ್ಚಳ ಮಾಡಲಾಗಿದೆ! ಇಂದು ನವದೆಹಲಿಯಲ್ಲಿ ಇಂಧನ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಬುಧವಾರ ಮಾರ್ಚ್ 30 ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 80 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ಪೆಟ್ರೋಲ್ ಬೆಲೆಯಲ್ಲಿ 5 ರೂ. 60 ಪೈಸೆ ಏರಿಕೆಯನ್ನು ಗ್ರಾಹಕರಿಗೆ ನೀಡಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ 4 ತಿಂಗಳ ಸುದೀರ್ಘ ವಿರಾಮಕ್ಕೆ ತೈಲ ಕಂಪನಿಗಳು ತೆರೆ ಎಳದಿವೆ, ಈ ಬಳಿಕ ಪ್ರತಿದಿನವೂ ವಾಹನ ಸವಾರರಿಗೆ 60-80 ಪೈಸೆ ಹೆಚ್ಚಳ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತ ಹೋಗುತ್ತಿದೆ. ಪ್ರಾರಂಭದ ನಾಲ್ಕು ದಿನವೂ 80 ಪೈಸೆ ಹೆಚ್ಚಿಸಿತು, ತದನಂತರ 40-50 ಪೈಸೆ ಹೆಚ್ಚಿಸುವ ಮೂಲಕ ಗ್ರಾಹಕರು ಪೆಟ್ರೋಲ್ ಹಾಕಿಸಬೇಕೋ, ಇಲ್ಲ ಗಾಡಿ ಬಿಟ್ಟು ಸೈಕಲ್ ಅಥವಾ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಬೇಕೋ ತಿಳಿಯದಾಗಿದೆ!

ಈ ಕುರಿತು ಜನಸಾಮಾನ್ಯರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ನಿರ್ಮಲಾ ಸೀತಾರಾಮನ್ ಅವರು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿರುವ ಹಿನ್ನೆಲೆ ಜಾಗತಿಕ ತೈಲ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

Exit mobile version