25 ರಾಜ್ಯಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತ

ನವದೆಹಲಿ ನ 13 : 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದುವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್‌ನ ಪ್ರಮಾಣವನ್ನು ಕಡಿತಗೊಳಿಸಿವೆ ಎಂದು ಕೇಂದ್ರ ಹೇಳಿದೆ.

ಈ ತಿಂಗಳ 3 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಐದು ರೂಪಾಯಿ ಮತ್ತು ಹತ್ತು ರೂಪಾಯಿಗಳಷ್ಟು  ಕಡಿಮೆ ಮಾಡಿದ ಕೇಂದ್ರದ ನಿರ್ಧಾರವನ್ನು ಒಟ್ಟು 25 ರಾಜ್ಯಗಳು ಅನುಸರಿಸಿವೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್‌ನಲ್ಲಿ ಯಾವುದೇ ಕಡಿತವನ್ನು ಮಾಡದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ, ಮಹಾರಾಷ್ಟ್ರ,  ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ರಾಜಸ್ಥಾನ. ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಸರ್ಕಾರ ಕೇರಳದಿಂದ ವ್ಯಾಟ್ ಪಾವತಿಸಿದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸಂಗ್ರಹಿಸುತ್ತದೆ. ಪ್ರಸ್ತುತ ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೂನ್ಯ ತೆರಿಗೆ ಇದೆ.

ವ್ಯಾಟ್ ಕಡಿತದ ನಂತರ, ಪೆಟ್ರೋಲ್ ಬೆಲೆ ಪಂಜಾಬ್‌ನಲ್ಲಿ ಲೀಟರ್‌ಗೆ 16 ರೂಪಾಯಿ 2 ಪೈಸೆಯಷ್ಟು ಕಡಿಮೆಯಾಗಿದೆ, ನಂತರ ಲಡಾಖ್‌ನಲ್ಲಿ 13 ರೂಪಾಯಿ 43 ಪೈಸೆ ಮತ್ತು ಕರ್ನಾಟಕದಲ್ಲಿ 13 ರೂಪಾಯಿ 35 ಪೈಸೆ ಕಡಿಮೆಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಪೆಟ್ರೋಲ್ ಅಗ್ಗವಾಗಿದ್ದು, ಲೀಟರ್‌ಗೆ 82 ರೂಪಾಯಿ 96 ಪೈಸೆ ಇದೆ, ಆದರೆ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಲೀಟರ್‌ಗೆ 92 ರೂಪಾಯಿ 2 ಪೈಸೆ ಇದೆ.

Exit mobile version