ಪೆಟ್ರೋಲ್‌ ಬೆಲೆ ಏರಿಕೆ ಹಿನ್ನಲೆ, ದ್ವಿಚಕ್ರ ವಾಹನ ಖರೀದಿಯಲ್ಲಿಇಳಿಕೆ

tvs-scooty

ನವದೆಹಲಿ ಅ 27 : ದೇಶಾದ್ಯಂತ ಪೆಟ್ರೋಲ್‌(Petrol) ಬೆಲೆ ದೆನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಇತ್ತ ದ್ವಿಚಕ್ರ ವಾಹನ ಖರೀದಿಯಲ್ಲಿ ತೀವ್ರ ಇಳಿಮುಖವಾಗಿದೆ.  ಹೊಸದಾಗಿ ವಾಹನ ಖರೀದಿಯ ಉತ್ಸುಕದಲ್ಲಿರುವವರು ಎಲೆಕ್ಟ್ರಿಕ್‌ ವಾಹನಗಳತ್ತ ಮನಸ್ಸು ಮಾಡುತ್ತಿದ್ದು, ಇದರಿಂದಾಗಿ ಹೊಸ ಪೆಟ್ರೋಲ್‌ ವಾಹನಗಳಿಗೆ ಎಲ್ಲೋ ಒಂದು ಕಡೆ ಬೇಡಿಕೆ ಕಡಿಮೆಯಾದಂತಿದೆ.

ಪೆಟ್ರೋಲ್ ದರ ಏರಿಕೆಯಿಂದಾಗಿ ಈ ಬಾರಿಯ ದಸರಾ ಹಬ್ಬದಲ್ಲಿ(Festival) ಹೀರೋ(Hero), ಸುಜಕಿ(Suzuki), ಹೊಂಡಾ(Honda), ಟಿವಿಎಸ್‌(TVS) ಸೇರಿದಂತೆ ಪ್ರಮುಖ ಕಂಪನಿಗಳ ವಾಹನ ಮಾರಾಟದಲ್ಲಿತೀವ್ರ ಹಿನ್ನಡೆಯುಂಟಾಗಿದ್ದು, ಆದರೆ ಎಲೆಕ್ಟ್ರಿಕ್‌ ವಾಹನಗಳ(Electric Vehicles)ಖರೀದಿಯಲ್ಲಿ ಏರಿಕೆ ಕಂಡು ಬಂದಿದೆ.

ಕಳೆದ ಮೂರು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈ ಬಾರಿ ದ್ವಿಚಕ್ರ ವಾಹನ ಖರೀದಿದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕೋವಿಡ್‌(Covid19) ಅಲೆಯ ಹೊಡೆತದಿಂದಾದ ಆರ್ಥಿಕ ಹಿಂಜರಿತ ಹಾಗೂ ಉದ್ಯೋಗ(Job) ನಾಶಗಳು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಪೆಟ್ರೋಲ್‌ ಬೆಲೆ ತೀವ್ರ ಏರಿಕೆ ಹಾಗೂ ಕೋವಿಡ್‌ನಿಂದ ಕಳೆದ ಎರಡು ವರ್ಷಗಳಲ್ಲಿ ಜನರ ಬದುಕಿನ ಮೇಲಾದ ಆರ್ಥಿಕ ಪರಿಣಾಮಗಳು ಹೊಸ ವಾಹನ ಖರೀದಿಗೆ ಜನರು ಬರುತ್ತಿಲ್ಲ. ಏತನ್ಮಧ್ಯೆ ವಾಹನಗಳ ಬೆಲೆ ಏರಿಕೆಯೂ ಆಗಿದೆ. 60 ಸಾವಿರಕ್ಕೆ ಸಿಗುತ್ತಿದ್ದ 100 ಸಿಸಿ ದ್ವಿಚಕ್ರ ವಾಹನ ಇದೀಗ 90 ಸಾವಿರ ದಾಟಿದೆ. ಒಂದೆಡೆ ಪೆಟ್ರೋಲ್‌ ಬೆಲೆ ಏರಿಕೆ ಮತ್ತೊಂದೆಡೆ ವಾಹನಗಳ ಬೆಲೆ ಏರಿಕೆಯಾದರೆ ಮಧ್ಯಮ ವರ್ಗದವರು ವಾಹನ ಖರೀದಿಸಲು ಹೇಗೆ ಸಾಧ್ಯ ಎಂಬುವುದು ಡೀಲರ್‌ಗಳ ಪ್ರಶ್ನೆಯಾಗಿದೆ.

Exit mobile version