ನವದೆಹಲಿ ಸೆ 30 : ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರಫ್ತು ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ 4400 ಕೋಟಿ ನೆರವನ್ನು ನೀಡುವುದಾಗಿ ಕೇಂದ್ರ ಭರವಸೆ ನೀಡಿದೆ. ಇದರ ಭಾಗವಾಗಿ, ಸರ್ಕಾರವು ಇಂದು ಇಸಿಜಿಸಿ ಲಿಮಿಟೆಡ್‌ಗೆ ಐದು ವರ್ಷಗಳ ಅವಧಿಯಲ್ಲಿ, ಅಂದರೆ 2021-2022 ರಿಂದ 2025- 2026 ನೇ ಹಣಕಾಸು ವರ್ಷದವರೆಗೆ, 4,400 ಕೋಟಿ ರೂ ಬಂಡವಾಳ ಪುನರ್ಧನವನ್ನು ಅನುಮೋದಿಸಿದೆ. ಅನುಮೋದಿತ ಪುನರ್ಧನ ಮತ್ತು ಐಪಿಒ ಮೂಲಕ ಅಧಿಕ ರಫ್ತುಗಳಿಗೆ ಬೆಂಬಲ ನೀಡಲು ಇಸಿಜಿಸಿಯ ತಾಳಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ವಾಣಿಜ್ಯ ಮತ್ತು ರಾಜಕೀಯ ಕಾರಣಗಳಿಂದಾಗಿ ಸಾಗರೋತ್ತರ ಖರೀದಿದಾರರಿಂದ ಪಾವತಿ ಮಾಡದಿರುವ ಅಪಾಯಗಳ ವಿರುದ್ಧ ರಫ್ತುದಾರರಿಗೆ ಕ್ರೆಡಿಟ್ ವಿಮಾ ಸೇವೆಗಳನ್ನು ಒದಗಿಸುವ ಮೂಲಕ ರಫ್ತುಗಳನ್ನು ಉತ್ತೇಜಿಸಲು 1957 ರಲ್ಲಿ ಕಂಪನಿಗಳ ಕಾಯಿದೆಯಡಿಯಲ್ಲಿ ಭಾರತ ಸರ್ಕಾರವು ಇಸಿಜಿಸಿಯನ್ನು ಸ್ಥಾಪಿಸಿತು. ಇದು ರಫ್ತು ಸಾಲಗಾರರಿಗೆ ರಫ್ತು ಕ್ರೆಡಿಟ್ ಸಾಲದ ಅಪಾಯಗಳ ವಿರುದ್ಧ ಬ್ಯಾಂಕುಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇಸಿಜಿಸಿ ತನ್ನ ಅನುಭವ, ಪರಿಣತಿ ಮತ್ತು ಪ್ರಗತಿಗೆ ಮತ್ತು ಭಾರತದ ರಫ್ತುಗಳ ಮುನ್ನಡೆಯ ಬದ್ಧತೆಯೊಂದಿಗೆ ಭಾರತೀಯ ರಫ್ತು ಉದ್ಯಮವನ್ನು ಬೆಂಬಲಿಸಲು ಶ್ರಮಿಸುತ್ತಿದೆ.
ಹೆಚ್ಚು ಕಾರ್ಮಿಕರು ಅಗತ್ಯವಿರುವ ವಲಯಗಳ ರಫ್ತುಗಳನ್ನು ಬೆಂಬಲಿಸುವಲ್ಲಿ ಮತ್ತು ಸಣ್ಣ ರಫ್ತುದಾರರ ಉದ್ಯಮಗಳಿಗೆ ಬ್ಯಾಂಕ್ ಸಾಲವನ್ನು ಉತ್ತೇಜಿಸುವಲ್ಲಿ ಇಸಿಜಿಸಿ ಅಪಾರ ಪಾತ್ರ ವಹಿಸುತ್ತದೆ. ಇದರಿಂದಾಗಿ ಅವರ ಪುನರುಜ್ಜೀವಕ್ಕೆ ಕಾರಣವಾಗುತ್ತದೆ. ಇಸಿಜಿಸಿಯಲ್ಲಿನ ಬಂಡವಾಳ ಪುನರ್ಧನವು ಅದರ ವ್ಯಾಪ್ತಿಯನ್ನು ರಫ್ತು-ಆಧಾರಿತ ಉದ್ಯಮಕ್ಕೆ ವಿಶೇಷವಾಗಿ ಹೆಚ್ಚು ಕಾರ್ಮಿಕರು ಅಗತ್ಯವಿರುವ ವಲಯಗಳಿಗೆ ವಿಸ್ತರಿಸಲು ಅನುಕೂಲ ಮಾಡಿಕೊಡುತ್ತದೆ. ಅನುಮೋದಿತ ಮೊತ್ತವನ್ನು ಕಂತುಗಳಲ್ಲಿ ನೀಡಲಾಗುತ್ತದೆ. ಇದರಿಂದಾಗಿ 88,000 ಕೋಟಿ ರೂ. ಗಳವರೆಗೆ ಅಪಾಯಗಳನ್ನು ಅಂಡರ್‌ರೈಟ್ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಇದು ಐದು ವರ್ಷಗಳ ಅವಧಿಯಲ್ಲಿ 5.28 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ರಫ್ತುಗಳನ್ನು ಬೆಂಬಲಿಸಲು ಇಸಿಜಿಸಿಗೆ ಸಾಧ್ಯವಾಗುತ್ತದೆ. ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.