English English Kannada Kannada

ರೈತರ ಹೆಸರಿನಲ್ಲಿ ರಾಜಕೀಯ, ದೇಶ ವಿರೋಧಿಗಳ ಪ್ರತಿಭಟನೆ: ಸಿ.ಟಿ.ರವಿ

Share on facebook
Share on google
Share on twitter
Share on linkedin
Share on print

ಬೆಂಗಳೂರು, ಫೆ. 05: ದೇಶದಲ್ಲಿ ರೈತರ ಹೆಸರಿನಲ್ಲಿ ರಾಜಕೀಯ, ದೇಶ ವಿರೋಧಿಗಳು ಪ್ರತಿಭಟನೆ ಮಾಡುತ್ತಿದ್ದು, ರೈತರು ಚಳವಳಿಯ ಭಾಗವಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ನಡೆಯುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ರೈತರು ಚಳುವಳಿಯ ಭಾಗವಾಗಿಲ್ಲ. ಬದಲಿಗೆ ರೈತರ ಹೆಸರಲ್ಲಿ ರಾಜಕೀಯ, ದೇಶ ವಿರೋಧಿಗಳು ಪ್ರತಿಭಟನೆ ಮಾಡ್ತಿದ್ದಾರೆ. ಮೂರು ಕಾಯ್ದೆಗಳಲ್ಲಿ ರೈತ ವಿರೋಧಿ ನೀತಿ ಎಲ್ಲಿದೆ ಎಂದು ಪ್ರಶ್ನಿಸಿದರು.

ಅಲ್ಲದೇ, ಬಿಜೆಪಿ ಸರ್ಕಾರ ಅತಿ ಹೆಚ್ಚು ರೈತರ ಪರ ಕೆಲಸ ಮಾಡಿದ್ದು, ಕಾಂಟ್ರಾಕ್ಟ್ ಫಾರ್ಮಿಂಗ್ ರೈತರ ಹೆಸರಲ್ಲಿ ಹರಾಜಕತೆ ಅಲ್ಲ. ಈ ಹಿಂದೆ ರೋಹಿತ್ ಮೋವೆ ಹತ್ಯೆ ಸೇರಿದಂತೆ ಹಲವು ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ರು. ಸಿಎಎ ನಲ್ಲಿ ಪಾಕಿಸ್ತಾನಕ್ಕೆ ಓಡಿಸ್ತಾರೆ ಅಂತ ಪ್ರಚೋದನೆ ಮಾಡಿ ಪ್ರತಿಭಟನೆ ಕೂತರು. ಈ ಆಕ್ಟ್ ತಂದು ಏಳು ತಿಂಗಳಾಯ್ತು, ಆದರೂ ಬಹುತೇಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಜನರು, ರೈತರು ನಮ್ಮ ಸರ್ಕಾರದ ಪರ ನಿಂತಿದ್ದಾರೆ. ಜಾಬ್ ಕ್ರಿಯೇಟ್ ಆಗಲು ಈ ಕಾಯ್ದೆ ಜಾರಿಗೆ ತಂದಿರೋದು. ಅವರಿಗೆ ಸತ್ಯ ಗೊತ್ತಿದ್ದೂ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ರೈತರು ಬೆಳೆದ ಅನ್ನ ತಿನ್ನುವವರು ರೈತರ ಹೋರಾಟಕ್ಕೆ ಬೆಂಬಲಿಸುವಂತೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರೈತರೇ ಭಾಗಿಯಾಗಿರೋ ಪ್ರತಿಭಟನೆಗೆ ಬೆಂಬಲಿಸಲಿ. ರೈತರ ಹೆಸರಲ್ಲಿ ಬೇರೆಯವರು ಮಾಡೋ ಪ್ರತಿಭಟನೆಗೆ ಬೆಂಬಲ ಬೇಡ. ರೈತರ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಶಿರಾದಲ್ಲಿ ಈ ಬಗ್ಗೆ ಭಾಷಣ ಮಾಡಿದ್ರು, ಆದರೆ ಉಪ ಚುನಾವಣೆಯಲ್ಲಿ ಏನಾಯಿತು? ಎಂದು ಪ್ರಶ್ನಿಸಿದ ಅವರು, ರೈತರೇ ಬೇರೆ, ರೈತರ ಹೆಸರಲ್ಲಿ ಪ್ರತಿಭಟನೆ ಮಾಡುತ್ತಿರೋರೇ ಬೇರೆ.

Submit Your Article