ಬಿಜೆಪಿ ಸೇರಲು ಮುಂದಾದ ಕಾಂಗ್ರೆಸ್‌ ಪೋಸ್ಟರ್‌ ಗರ್ಲ್

poster girl

ಲಕ್ನೋ ಜ 21 : ಕಾಂಗ್ರೆಸ್‌ನ ಹಲವು ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡು  ಪಕ್ಷದ ಪೋಸ್ಟರ್ ಗರ್ಲ್ ಎಂದೇ ಖ್ಯಾತಿ ಹೊಂದಿದ್ದ ಪ್ರಿಯಾಂಕ ಮೌರ್ಯ ಬಿಜೆಪಿ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ

ಕಾಂಗ್ರೆಸ್‌ ಪಕ್ಷದ ಪ್ರಚಾರ ಸಭೆಗಳಲ್ಲಿ ಯಾವಾಗಲೂ ಮುಂಚೂಣಿಯಾಗಿ ಕಾಣಿಸಿಕೊಳ್ಳುತ್ತಿದ್ದ ಉತ್ತರ ಪ್ರದೇಶದ ಪೋಸ್ಟರ್ ಗರ್ಲ್ ಎಂದೇ ಪ್ರಖ್ಯಾತಿ ಪಡೆದಿದ್ದ ಪ್ರಿಯಾಂಕ  ಬಿಜೆಪಿಗೆ ಸೇರಲಿದ್ದಾರೆ. ಇವರು ಲಖ್ನೋ ದಲ್ಲಿರುವಂತಹ ಬಿಜೆಪಿ ಪಕ್ಷದ ಕಚೇರಿಗೆ ತೆರಳಿ ಅಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಿ ಕಾಂಗ್ರೇಸ್ ಪಕ್ಷದ ಮೇಲೆ ಅಸಮಾಧಾನ ಉಂಟಾಗಿದ್ದರಿಂದ ಬಿಜೆಪಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ.

ಪ್ರಿಯಾಂಕ ಅವರಿಗೆ ಕಾಂಗ್ರೇಸ್ ಪಕ್ಷದ ಟಿಕೆಟ್ ದೊರೆಯುವ ಸಾಧ್ಯತೆಯಿದ್ದರೂ ಆ ಟಿಕೆಟ್ ನನ್ನು ಬೇರೆಯವರಿಗೆ ನೀಡಲಾಗಿತ್ತು ಇದರಿಂದ ಇವರು ಕಾಂಗ್ರೇಸ್ ಪಕ್ಷದ ಮೇಲೆ ಅಸಮಾಧಾನಗೊಂಡಿದ್ದರು ಆದ್ದರಿಂದಲೇ ಇವರು ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪ್ರಿಯಾಂಕ ಮೊದಲು ಉತ್ತರ ಪ್ರದೇಶದ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಪರ ಕೆಲಸವನ್ನು ಮಾಡುತ್ತಾ ಇದ್ದರೂ ಹಾಗೂ ತಮ್ಮ ಪಕ್ಷದಿಂದ ತನಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು ಆದರೆ ಅವರ ನಿರೀಕ್ಷೆ ಸುಳ್ಳಾಗಿದ್ದರಿದ ಅವರು ಬಿಜೆಪಿ ಪಕ್ಷಕ್ಕೆ ಸೇರುವ ನಿರ್ಧಾರ ಮಾಡಿದ್ದಾರೆ. ಎಂದು ತಿಳಿದುಬಂದಿದೆ.

Exit mobile version