ಫ್ರಿಡ್ಜ್‌ನಲ್ಲಿಟ್ಟ ಆಲೂಗೆಡ್ಡೆಯನ್ನು ಉಪಯೋಗಿಸುವುದು ಆರೋಗ್ಯಕ್ಕೆ ಹಾನಿಕಾರಕ

 ಆಲೂಗೆಡ್ಡೆಯನ್ನು ಇಷ್ಟ ಪಡದೇ ಇರುವವರು ಬಹಳ ಕಡಿಮೆ. ಆಲುಗಡ್ಡೆಯಿಂದ ಅನೇಕ ರೀತಿಯ   ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಭಾರತೀಯ ಆಹಾರದಲ್ಲಿ ಆಲೂಗಡ್ಡೆಯನ್ನು (Use of Potato) ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅನೇಕ ಜನರು ಆಲೂಗಡ್ಡೆ ಕರಿಯನ್ನು ಇಷ್ಟಪಡುತ್ತಾರೆ. ಇನ್ನು ಕೆಲವರಿಗೆ ಉಳಿದ ಆಲುಗಡ್ಡೆಯನ್ನು ಫ್ರಿಜ್ ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಇದು ಬಹಳ ಅಪಾಯಕಾರಿಯಾಗಿರುತ್ತದೆ. ಇದರಿಂದ ನಿಮ್ಮ ಆರೋಗ್ಯವೂ ಹದಗೆಡಬಹುದು. ಫ್ರಿಡ್ಜ್ ನಲ್ಲಿಟ್ಟ ಆಲೂಗೆಡ್ಡೆ (Potato kept in fridge) ತಿನ್ನುವುದರಿಂದ ಆಗುವ ದುಷ್ಪರಿಣಾಮಗಳೇನು ನೋಡೋಣ.

ಕ್ಯಾನ್ಸರ್ ಗೆ ಕಾರಣವಾಗುತ್ತದೆ
ಕೆಲವು ತಜ್ಞರ ಪ್ರಕಾರ, ಆಲೂಗೆಡ್ಡೆ ತರಕಾರಿಗಳನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ಅದರಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ. 

ಆರೋಗ್ಯಕ್ಕೆ ತುಂಬಾ ಅಪಾಯಕಾರಿ
ಆಲೂಗಡ್ಡೆಯಲ್ಲಿರುವ ಸಕ್ಕರೆ, ಅಮೈನೋ ಆಮ್ಲಗಳು ಮತ್ತು ಆಸ್ಪ್ಯಾರಜಿನ್ ರಾಸಾಯನಿಕವನ್ನು ತಯಾರಿಸುತ್ತವೆ. ಪ್ಲಾಸ್ಟಿಕ್ ಮತ್ತು ಕಾಗದವನ್ನು ತಯಾರಿಸಲು ಇದನ್ನು ಉಪಯೋಗಿಸಲಾಗುತ್ತದೆ.  ಇದು ಆರೋಗ್ಯಕ್ಕೆ (Health problem) ಹಾನಿಕಾರಕವಾಗಿರುತ್ತದೆ. 

ಮಧುಮೇಹ ರೋಗಿಗಳಿಗೆ ಹಾನಿಕಾರಕ :
ಆಲೂಗಡ್ಡೆಯನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ಅದರ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ.  ಇದು ಮಧುಮೇಹ ರೋಗಿಗಳಿಗೆ (Diabetes) ತುಂಬಾ ಅಪಾಯಕಾರಿ ಆಗಿರುತ್ತದೆ.  

ಹೆಚ್ಚಿನ ತಾಪಮಾನದಲ್ಲಿ ಆಲೂಗಡ್ಡೆಯನ್ನು  ಬೇಯಿಸಬಾರದು
ಅತಿ ಹೆಚ್ಚು ತಾಪಮಾನದಲ್ಲಿ ಆಲೂಗಡ್ಡೆ ಬೇಯಿಸುವುದು ಹಾನಿಕಾರಕ. ಅದರ ಅಪಾಯವನ್ನು ತಪ್ಪಿಸಲು, ಆಲೂಗಡ್ಡೆಯನ್ನು ಬೇಯಿಸುವ ಮೊದಲು, ಅವುಗಳನ್ನು ಸಿಪ್ಪೆ ಸುಲಿದು 15 ರಿಂದ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬಹುದು. ಹೀಗೆ ಮಾಡುವುದರಿಂದ ಆಲೂಗಡ್ಡೆಯಲ್ಲಿ ಅಕ್ರಿಲಾಮೈಡ್ ರಚನೆಯ ಸಾಧ್ಯತೆಯು ಅಡುಗೆ ಸಮಯದಲ್ಲಿ ಕಡಿಮೆಯಾಗುತ್ತದೆ.

Exit mobile version